ಭಟ್ಕಳ (Bhatkal): ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಬಳಗ ನೇತೃತ್ವದಲ್ಲಿ ನವೆಂಬರ್ ೨೪ರಂದು ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ೧೨ ಗಂಟೆಯ ವರೆಗೆ ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಮಂಗಳೂರಿನ (Mangaluru) ಕೆ ಎಸ್ ಹೆಗ್ಡೆ ಆಸ್ಪತ್ರೆಯ (KS Hegde Hospital) ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ (Medical Camp) ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಜೈಸನ್ , ಶಿಬಿರದಲ್ಲಿ (Medical Camp) ಕೆ ಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ. ವಿಕ್ರಮ್ ಶೆಟ್ಟಿ, ಜನರಲ್ ಸರ್ಜನ್ ಡಾ. ಅಭಿಜಿತ್ ಎಸ್ ಶೆಟ್ಟಿ, ಎಲುಬು ಮತ್ತು ಕೀಲು ತಜ್ಞ ಡಾ. ಪ್ರಥ್ವಿ ಕೆ ಪಿ., ಪ್ಲಾಸ್ಟಿಕ್ ಸರ್ಜನ್ ಡಾ. ಭರತ್ ಜೆ ನಾಯ್ಕ ಮುಂತಾದ ವೈದ್ಯರ ತಂಡ ಪಾಲ್ಗೊಂಡು ವೈದ್ಯಕೀಯ ತಪಾಸಣೆ, ಅಗತ್ಯ ಸಲಹೆ ನೀಡಲಿದ್ದಾರೆ ಎಂದರು.

ಇದನ್ನೂಓದಿ :   ಈತನ ಮೇಲಿದೆ ೧೦೦ ಪ್ರಕರಣ, ೩೦ ವಾರಂಟ್‌, ೨೦ ನೋಟಿಸ್‌ !

ತಪಾಸಣೆಗೆ ಆಗಮಿಸುವವರು ಈ ಹಿಂದೆ ಯಾವುದೇ ಆಸ್ಪತ್ರೆ, ವೈದ್ಯರಲ್ಲಿ ಚಿಕಿತ್ಸೆ ಪಡೆದವರಾದಲ್ಲಿ ಹಿಂದಿನ ವೈದ್ಯಕೀಯ ದಾಖಲೆ ತರಬೇಕಿದೆ. ಕೆ ಎಸ್ ಹೆಗ್ಡೆ ಆಸ್ಪತ್ರೆಯಿಂದ ಕ್ಷೇಮ ಹೆಲ್ತ್‌ ಕಾರ್ಡ್‌ ಎನ್ನುವ ವಿಮಾ ಯೋಜನೆಯೂ ಲಭ್ಯವಿದೆ. ಶಿಬಿರದಲ್ಲಿ ಆಸಕ್ತರು ವೈಯಕ್ತಿಕ ಮತ್ತು ಕುಟುಂಬ ಸದಸ್ಯರ ಆರೋಗ್ಯ ವಿಮಾ ಕೂಡ ಮಾಡಿಸಬಹುದಾಗಿದೆ. ವಿಮಾ ಯೋಜನೆಗೆ ಆಧಾರ ಮತ್ತು ರೇಷನ್ ಕಾರ್ಡ ಝೆರಾಕ್ಸ ಪ್ರತಿ ಕಡ್ಡಾಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ :  ಸಚಿವರ ಪ್ರತಿಷ್ಠೆಗಾಗಿ ಕೋಟ್ಯಂತರ ರೂ. ಖರ್ಚು

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಶಿಬಿರದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರು ಆಗಮಿಸುವುದರಿಂದ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಜನರು ಪಡೆಯಬೇಕು ಎಂದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ, ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ ಎಂದರು.

ಇದನ್ನೂ ಓದಿ :  ಭಟ್ಕಳದಲ್ಲಿ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಬೊಲೆರೊ

ಈ ಸಂದರ್ಭದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಮುಂತಾದವರಿದ್ದರು.

ಇದನ್ನೂ ಓದಿ :  ಭಟ್ಕಳದಲ್ಲಿ ಕ್ಲಿನಿಕ್ ಗಳ ಮೇಲೆ ದಾಳಿ