ಭಟ್ಕಳ (Bhatkal) : ಮೀನುಗಾರರ ಸಂಕಷ್ಟ ಪರಿಹಾರ ಮೊತ್ತವನ್ನು (Fishermen’s relief) ೧೦ ಲಕ್ಷ ರೂ.ಗೆ ಏರಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ (DCM) ಡಿ.ಕೆ.ಶಿವಕುಮಾರ (DK Shivakumar) ಘೋಷಿಸಿದರು. ಅವರು ತಾಲೂಕಿನ ಬೇಂಗ್ರೆಯಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನ (fisheries day) ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದರು.
ಮುರುಡೇಶ್ವರ ದೇವರ ದರ್ಶನ ಪಡೆದ ಡಿಕೆಶಿ ವಿಡಿಯೋವನ್ನುಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಈ ಹಿಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಹಾನಿಯಾದರೆ ಪರಿಹಾರವಾಗಿ ₹೬ ಲಕ್ಷ ನೀಡಲಾಗುತ್ತಿತ್ತು (Fishermen’s relief). ನಮ್ಮ ಸರ್ಕಾರದಿಂದ ₹೮ ಲಕ್ಷಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ₹೧೦ ಲಕ್ಷಕ್ಕೆ ಏರಿಸುತ್ತೇವೆ ಎಂದ ಅವರು ಕೊಲ್ಲೂರು (Kollur) ಮೂಕಾಂಬಿಕೆ, ಇಡಗುಂಜಿ (Idagunji) ಮಹಾಗಣಪತಿ ಮತ್ತು ಮುರುಡೇಶ್ವರದ (Murudeshwar) ಮಹಾ ಶಿವನ ದೇವರ ದರ್ಶನದ ಜೊತೆಗೆ ಈ ಭಾಗದ ಜನರ ದರ್ಶನ ಮಾಡುವ ಸದಾವಕಾಶ ಸಿಕ್ಕಿದೆ ಎಂದರು.
ಇಡಗುಂಜಿ ದೇವರ ದರ್ಶನ ಪಡೆದ ಡಿಕೆಶಿ ವಿಡಿಯೋವನ್ನುಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಕರಾವಳಿಯ (Coastal) ಯುವಕರು ಉದ್ಯೋಗ ಅರಸಿ ಮುಂಬಯಿ, ಸೌದಿ, ಬೆಂಗಳೂರಿಗೆ (Bengaluru) ತೆರಳುತ್ತಿದ್ದಾರೆ. ಇಲ್ಲಿನ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಗುರ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸರಕಾರದಿಂದ ಕರಾವಳಿಯಲ್ಲಿ ಹೊಸ ಪ್ರವಾಸೋದ್ಯಮ ನೀತಿಯ ಜಾರಿಗೆ ಚಿಂತನೆ ನಡೆದಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ಇದರ ರೂಪರೇಖೆಯನ್ನು ತಿಳಿಸಲಿದ್ದೇವೆ. ಉದ್ಯೋಗ ಸೃಷ್ಟಿ, ಖಾಸಗಿ ಬಂದರು ನಿರ್ಮಾಣ ಮಾಡುವುದು ಸಹ ನಮ್ಮ ಸರಕಾರದ ಉದ್ದೇಶವಾಗಿದೆ. ಮುಂದಿನ ವರ್ಷ ವಿಶ್ವ ಮೀನುಗಾರಿಕಾ ದಿನವನ್ನು ಉಡುಪಿ (udupi), ಮಂಗಳೂರಿನಲ್ಲಿ (Mangaluru) ಮಾಡಿ ಅಲ್ಲಿನ ಮೀನುಗಾರರಿಗೂ ಇದರ ಉಪಯೋಗ ಸಿಗುವಂತೆ ಮಾಡಬೇಕು ಎಂದು ಸಚಿವ ಮಂಕಾಳ ವೈದ್ಯರಿಗೆ ಡಿ.ಕೆ.ಶಿವಕುಮಾರ ಸೂಚಿಸಿದರು.
ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದ ಡಿಕೆಶಿ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
“ನಿಮ್ಮ ಜಿಲ್ಲೆಯಿಂದ ೬ ಶಾಸಕರನ್ನು ಕೊಟ್ಟು ಈ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷದಿಂದ ೫ ಶಾಸಕರಿದ್ದರೂ ಶಿವರಾಮ ಹೆಬ್ಬಾರ ಅವರು ನಮಗೆ ಶಕ್ತಿ ತುಂಬುತ್ತಾರೆ ಎಂದು ಭಾವಿಸಿದ್ದೇನೆ. ಈ ಮೂಲಕ ನನ್ನ ಕೈಗೆ ಶಕ್ತಿ ಬಂದಿದೆ ಎಂದ ಅವರು, ಈ ವರ್ಷ ಸರಕಾರದಿಂದ ಮೀನುಗಾರರ ಕುಟುಂಬಕ್ಕೆ ೧೦ ಸಾವಿರ ಮನೆಯನ್ನು ನೀಡುವ ಗುರಿ ಹೊಂದಿದ್ದೇವೆ ಎಂದು ಘೋಷಣೆ ಮಾಡಿದರು.
ಇದನ್ನೂ ಓದಿ : ಭಟ್ಕಳಕ್ಕೆ ಬರಲಿದ್ದಾರೆ ಮಂಗಳೂರಿನ ತಜ್ಞ ವೈದ್ಯರು
ನಂತರ ಸಚಿವ ಮಂಕಾಳ ವೈದ್ಯ (Mankal Vaidya) ಮಾತನಾಡಿ, ಒಟ್ಟು ಕರಾವಳಿಯ ೩೨೦ ಕಿ.ಮೀ. ಉದ್ದದ ಮೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಮೀನುಗಾರರ ಉದ್ಯೋಗಕ್ಕೆ ನಮ್ಮ ಸರಕಾರವು ಈಗ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದೆ. ೧೩ ಬಂದರುಗಳಿದ್ದು ಈ ಪೈಕಿ ಭಟ್ಕಳದ ಅಳ್ವೇಕೋಡಿ ಮತ್ತು ತೆಂಗಿನಗುಂಡಿ ಮೇಲ್ದರ್ಜೆಗೆರಿಸಿದ್ದೇನೆ. ಉಳಿದ ಬಂದರುಗಳ ಅಭಿವೃದ್ಧಿ ಮಾಡಿಸುವ ಚಿಂತನೆ ನಡೆಯುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಬಂದರು ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ಮುರುಡೇಶ್ವರದಲ್ಲಿ (Murdeshwar) ಒಟ್ಟು ೪೦೦ ಕೋಟಿ ರೂ. ಬಂದರು ನಿರ್ಮಾಣ ಚಿಂತನೆ ನಡೆದಿದೆ. ಈ ಪೈಕಿ ಒಂದು ಕಡೆ ಬಂದರು ಇನ್ನೊಂದು ಕಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ಮಾಡಲಾಗಿದೆ ಎಂದರು.
ಇದನ್ನೂ ಓದಿ : ಈತನ ಮೇಲಿದೆ ೧೦೦ ಪ್ರಕರಣ, ೩೦ ವಾರಂಟ್, ೨೦ ನೋಟಿಸ್ !
ಶಾಸಕ ಆರ್.ವಿ.ದೇಶಪಾಂಡೆ (RV Deshpande) ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಮೀನುಗಾರರು ಮೀನುಗಾರಿಕೆಗೆ ಗೋವಾ, ಮಹಾರಾಷ್ಟ್ರ ಭಾಗಕ್ಕೆ ಹೋದಲ್ಲಿ ಅಲ್ಲಿನ ಸರಕಾರಗಳು ನಮ್ಮ ಮೀನುಗಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿವೆ. ಅಲ್ಲಿನ ಸರಕಾರದ ಕ್ರಮ ಸರಿಯಲ್ಲ. ನಮ್ಮ ಮೀನುಗಾರರಿಗೆ ಅಲ್ಲಿನ ಸರಕಾರದಿಂದ ಸಮಸ್ಯೆಯಾಗದಂತೆ ನಮ್ಮ ಸರಕಾರ ಕ್ರಮ ವಹಿಸಬೇಕಾಗಿದೆ. ಮತ್ತು ಅಲ್ಲಿನ ಮೀನುಗಾರರು ಅವರ ಗಡಿಯನ್ನು ಮೀರಿ ಇಲ್ಲಿಗೆ ಮೀನುಗಾರಿಕೆ ಬರುತ್ತಲಿದ್ದು ನಮ್ಮ ಸರಕಾರ ಅಲ್ಲಿನ ಮೀನುಗಾರರಿಗೆ ಯಾವುದೇ ಸಮಸ್ಯೆ ಮಾಡುತ್ತಿಲ್ಲ. ಇದನ್ನು ಅಲ್ಲಿನ ಸರಕಾರಕ್ಕೆ ಮನವರಿಕೆ ಮಾಡಬೇಕಿದೆ ಎಂದರು.
ಇದನ್ನೂ ಓದಿ : ಸಚಿವರ ಪ್ರತಿಷ್ಠೆಗಾಗಿ ಕೋಟ್ಯಂತರ ರೂ. ಖರ್ಚು
ಈ ಸಂದರ್ಭದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ, ಸತೀಶ ಸೈಲ್, ಭೀಮಣ್ಣ ನಾಯ್ಕ, ಎಮ್ಮೆಲ್ಸಿ ಗಣಪತಿ ಉಳ್ವೇಕರ, ತಿಪ್ಪಣ್ಣ, ಯಶಪಾಲ್ ಸುವರ್ಣ, ರಾಜು ನಾಯ್ಕ, ಸಾಯಿ ಗಾಂವಕರ, ಸತೀಶ ನಾಯ್ಕ, ಮಾಲಾ ನಾರಾಯಣ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಭಟ್ಕಳದಲ್ಲಿ ಅಂಬುಲೆನ್ಸ್ಗೆ ಡಿಕ್ಕಿ ಹೊಡೆದ ಬೊಲೆರೊ