ಭಟ್ಕಳ (bhatkal) : ವಿಶ್ವ ಮೀನುಗಾರಿಕೆ ದಿನಾಚರಣೆ (fisheries day) ಹಿನ್ನೆಲೆಯಲ್ಲಿ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಕುಚುಕು ಕುಚುಕು ಹಾಡಿಗೆ ಸಚಿವ ಮಂಕಾಳ ವೈದ್ಯ (Mankal Vaidya), ಶಾಸಕರಾದ ಸತೀಶ ಸೈಲ್ ಹಾಗೂ ಭೀಮಣ್ಣ ನಾಯ್ಕ ಹೆಜ್ಜೆ ಹಾಕಿ (great step) ಎಲ್ಲರ ಗಮನ ಸೆಳೆದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮತ್ಸ್ಯ ಮೇಳ -೨ ೦೨೪ರ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ (DK shivakumar) ಉದ್ಘಾಟಿಸಿದರು. ಬಳಿಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ (Arjun Janya), ಖ್ಯಾತ ನಿರೂಪಕಿ ಅನುಶ್ರೀ (Anushree), ಖ್ಯಾತ ಗಾಯಕಿ ಶಮಿತಾ ಮಲ್ಯಾಡ್(Shamita Malnad), ದಿವ್ಯ ರಾಮಚಂದ್ರ ಸೇರಿದಂತೆ ಇನ್ನು ಹಲವಾರು ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ಶಿಕ್ಷಕಿಯ ಮನೆಯಂಗಳದಲ್ಲಿ ಕಾವ್ಯೋತ್ಸವ
ಈ ವೇಳೆ ವೇದಿಕೆ ಮೇಲೆ ತೆರಳಿದ ಸಚಿವ ಮಂಕಾಳ ವೈದ್ಯ, ಸತೀಶ ಸೈಲ್ ಹಾಗೂ ಭೀಮಣ್ಣ ನಾಯ್ಕ ಅವರು ಅರ್ಜುನ್ ಜನ್ಯಾ ತಂಡ ಗಾಯಕ ಹಾಡಿದ “ಕುಚುಕು ಕುಚುಕು ಕುಚುಕು ನಾನು ಚಡ್ಡಿ ದೋಸ್ತಿ ಕಣೋ ಕುಚುಕು” ಹಾಡಿಗೆ ಕೆಲ ಸಮಯ ಹೆಜ್ಜೆ ಹಾಕಿ (great step) ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದರು. ಈ ವೇಳೆ ಇವರಿಗೆ ಸಚಿವ ಮಂಕಾಳ ವೈದ್ಯರ ಪತ್ನಿ ಪುಷ್ಪಾಲತಾ ಹಾಗೂ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಸಾಥ್ ನೀಡಿದರು.
ಸಚಿವರ ನೃತ್ಯದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ಮೀನುಗಾರರ ಸಂಕಷ್ಟ ಪರಿಹಾರ ೧೦ ಲಕ್ಷಕ್ಕೆ ಏರಿಕೆ