ಭಟ್ಕಳ (Bhatkal) : ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಸಹ ಪಠ್ಯ ಚಟುವಟಿಕೆಯ ಆಶುಭಾಷಣ ಸ್ಪರ್ಧೆಯಲ್ಲಿ (elocution competition) ಶಿಕ್ಷಕ ಶ್ರೀಧರ ಶೇಟ ಶಿರಾಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಬೆಂಗಳೂರಿನ (Bengaluru) ಕರ್ನಾಟಕ (karnataka) ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶ್ರೀಧರ ಶೇಟರವರು ಜಾಲಿ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವಿಯಾಗಿ, ಅಂಕಣಕಾರರಾಗಿ, ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಚಿತ್ರ ಕಲಾವಿದರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹಾವೇರಿಯ (Haveri) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಬನವಾಸಿಯಲ್ಲಿ (Banavasi) ನಡೆದ ರಾಜ್ಯ ಮಟ್ಟದ ಕದಂಬೋತ್ಸವ (Kadambotsava) ಕವಿಗೋಷ್ಠಿ ಹಾಗೂ ಇನ್ನಿತರ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ.

ಇದನ್ನೂ ಓದಿ : ಮುರ್ಡೇಶ್ವರದಲ್ಲಿ ಡಿಕೆಶಿ ಹೇಳಿದ್ದು ಸುಳ್ಳಾಗಲಿಲ್ಲ

ಶ್ರೀಧರ ಶೇಟರವರು ಭಟ್ಕಳ ತಾಲೂಕಾ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ತಾಲೂಕಾ ಕಸಾಪ ಗೌರವ ಕೋಶಾಧ್ಯಕ್ಷರೂ ಆಗಿರುವ ಇವರು ಕ್ರಿಯಾಶೀಲ ಶಿಕ್ಷಕರಾಗಿದ್ದಾರೆ. ತಮ್ಮ ವಿಷಯದಲ್ಲಿ ಅತಿ ಹೆಚ್ಚು ಸಾಧನೆ ಮಾಡಿರುವುದಕ್ಕಾಗಿ ಎರಡು ಬಾರಿ ಧಾರವಾಡದ (Dharwad) ಕಟ್ಟೀಮನಿ ಶಿಕ್ಷಕ ಪರಿಶ್ರಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಕಾವ್ಯಕ್ಕಾಗಿ ಎರಡು ಬಾರಿ ಸಂಕ್ರಮಣ ಕಾವ್ಯ ಪ್ರಶಸ್ತಿಯಿಂದ ಪುರಸ್ಕರಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ : ಡಿಸೆಂಬರ್‌ನಲ್ಲಿ 8 ದಿನ ಶಾಲೆಗಳಿಗೆ ರಜೆ; ಯಾಕೆ ಗೊತ್ತಾ?

ಶ್ರೀಧರ ಶೇಟರವರ ಹೆಸರಾಂತ ಮಕ್ಕಳ ಕವನ “ಬೇಲಿಯ ಹೂವು” ದೆಹಲಿಯ (Delhi) ಮಾಡರ್ನ್ ಪಬ್ಲಿಷರ್ಸ್ ಪ್ರಕಟಿಸಿರುವ ಐಸಿಎಸ್ಇ ಪಠ್ಯಕ್ರಮದ (CBSE syllabus) ೫ನೇ ತರಗತಿಯ ಕನ್ನಡ ಚಂದನ ಪಠ್ಯಪುಸ್ತಕದಲ್ಲಿ ಅಳವಡಿಸಲ್ಪಟ್ಟಿದೆ. ಆಶುಭಾಷಣ ಸ್ಪರ್ಧೆಯಲ್ಲಿ (elocution competition) ಇವರ ಸಾಧನೆಗೆ ಜಾಲಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶಾರದಾ ನಾಯ್ಕ, ಶಿಕ್ಷಕ ವೃಂದ, ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಇನ್ನಿತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :   ಭಟ್ಕಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು