ಭಟ್ಕಳ (Bhatkal): ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಹೊರತು ಮೋಜು ಮಸ್ತಿಗಲ್ಲ. ನಿಮಗೆ ಇಂತಹ ಕಾರ್ಯಕ್ರಮ ಮಾಡುವ ಯೋಗ್ಯತೆ ಇಲ್ಲವಾದರೂ ವಿರೋಧಿಸುವುದು ನಿಮ್ಮ ಗುಣ ಎಂದು ಸುನೀಲ ನಾಯ್ಕರಿಗೆ ಮೀನುಗಾರಿಕೆ ಸಚಿವ (Fisheries minister) ಮಂಕಾಳ ವೈದ್ಯ (Mankal Vaidya) ತಿರುಗೇಟು (Counter) ನೀಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಶನಿವಾರ ವಿಶ್ವ ಮೀನುಗಾರಿಕೆ ದಿನಾಚರಣೆ (Fisheries day) ಕಾರ್ಯಕ್ರಮದ ೩ನೇ ದಿನದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನ ಕ್ಷೇತ್ರದ ಮೀನುಗಾರರಿಗೆ, ಜನರಿಗೆ ಇದರ ಪ್ರಯೋಜನ ಸಿಗಬೇಕು ಎನ್ನುವ ಸದುದ್ದೇಶ ಇಟ್ಟುಕೊಂಡಿದ್ದೇವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ (DK Shivakumar) ಅವರು ಉದ್ಘಾಟಿಸಿ ಈ ಭಾಗದ ಮೀನುಗಾರರ ಅಭಿವೃದ್ಧಿಗೆ ಗಂಟೆಗಟ್ಟಲೆ ಚರ್ಚೆಯನ್ನು ನಡೆಸಿ ಸರಕಾರದಿಂದ ಮೀನುಗಾರರಿಗೆ ಉತ್ತಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : ಸಚಿವರ ನೃತ್ಯಕ್ಕೆ ಭಾರೀ ಟೀಕೆ
ಈ ಕಾರ್ಯಕ್ರಮ ಕೇವಲ ಮೀನುಗಾರರಿಗೆ ಮಾತ್ರ ಸೀಮಿತವಾಗಿಲ್ಲ. ನವೆಂಬರ್ ೨೧ರಂದು ವಿಶ್ವ ಮೀನುಗಾರಿಕಾ ದಿನವೆಂದು ಸರಕಾರವೇ ದಿನವನ್ನು ನಿಗದಿ ಮಾಡಿದೆ. ಈ ದಿನವೂ ಮೀನುಗಾರರು ಸಂಭ್ರಮಿಸುವ ದಿನ. ಹಾಗಾಗಿ ಮನರಂಜನೆ ಕಾರ್ಯಕ್ರಮ ನಡೆಸಿದ್ದೇವೆ. ಮನರಂಜನೆ ಎಲ್ಲರಿಗೂ ಅವಶ್ಯಕವಾಗಿದೆ. ಈ ವಿಚಾರಕ್ಕೂ ಸಹ ಕೆಲವರು ತಪ್ಪು ಹುಡುಕುವಂತಹ ವಿರೋಧ ಮಾಡುವಂತಹ ಬುದ್ದಿ ಹೊಂದಿದ್ದಾರೆ. ಅಂತಹವರಿಗೆ ಈ ರೀತಿಯ ಕಾರ್ಯಕ್ರಮ ಮಾಡುವ ಯೋಗ್ಯತೆ ಇಲ್ಲವಾಗಿದೆ. ಮೀನುಗಾರರ ಅಭಿವೃದ್ಧಿಗೋಸ್ಕರ ಈ ಕಾರ್ಯಕ್ರಮ ಮಾಡಿದ್ದೇವೆ ಹೊರತು ಮೋಜು ಮಸ್ತಿ ಮಾಡಿಲ್ಲ. ಹಿಂದೆಯಿಂದಲೂ ಸಹ ಮನರಂಜನೆ ನಡೆದುಕೊಂಡು ಬಂದಿದೆ ಎಂದು ಮಂಕಾಳ ವೈದ್ಯ ಹೇಳಿದರು.
ಇದನ್ನೂ ಓದಿ : ಸುಬ್ರಹ್ಮಣ್ಯದಿಂದ ರೈಲಿನಲ್ಲಿ ಬಂದಿದ್ದ ನಕ್ಸಲ್ ತಂಡ
ಏನಾದರು ಮಾತನಾಡುಕ್ಕಿಂತ ಮೊದಲು ಯೋಚಿಸಿ ಮಾತನಾಡಿದರೆ ಅವರಿಗೆ ಉತ್ತಮ. ಸಂಕಷ್ಟ ಪರಿಹಾರ ಹಣವನ್ನು ೪ ವರ್ಷದಲ್ಲಿ ೧೨ ಕೋಟಿ ಹಣ ನೀಡಬೇಕಾಗಿತ್ತು. ಮೀನುಗಾರರಿಗೆ ತಲಾ ೬ ಲಕ್ಷ ನೀಡಬೇಕಾಗಿದ್ದ ಅಂದಿನ ಸರಕಾರ ನೀಡಿಲ್ಲ. ನಮ್ಮ ಸರಕಾರ ಬಂದ ಮೇಲೆ ೬ ರಿಂದ ೮ ಲಕ್ಷ ಏರಿಕೆ ಮಾಡಿದೆ. ಅದನ್ನು ಸಹ ಮೀನುಗಾರರಿಗೆ ತಲುಪಿಸಿದ್ದೇನೆ. ಈ ವರ್ಷದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ೧೦ ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಒಂದಾನು ವೇಳೆ ಅವಘಢ ನಡೆದಲ್ಲಿ ೨೪ ಗಂಟೆಯೊಳಗೆ ಹಣ ಅಂತಹ ಕುಟುಂಬಕ್ಕೆ ತಲುಪಲಿದೆ ಎಂದು ಹೇಳಿದರು.
ಇದನ್ನೂ ಓದಿ : ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀಧರ ಶೇಟ ಪ್ರಥಮ
ಬಿಜೆಪಿ ಅವರು ಬೆಳಿಗ್ಗೆಯಿಂದ ವಕ್ಫ ಆಸ್ತಿ (Waqf property), ಬಿಪಿಎಲ್ ಕಾರ್ಡ (BPL Card) ರದ್ದು, ಮುಡಾ ಹಗರಣದ ವಿಚಾರದಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳಿ ತಿರುಗಾಡುತ್ತಾರೆ. ಅದರ ಬದಲು ಸರಕಾರಕ್ಕೆ (congress government) ಸಲಹೆ ಕೊಡಿ. ಜನಸಾಮಾನ್ಯರಿಗೆ ಬಡವರಿಗೆ ಅನೂಕೂಲವಾಗುವ ಕೆಲಸ ಮಾಡಿ. ಅರ್ಹತೆ ಇದ್ದೂ ಬಿಪಿಎಲ್ ಕಾರ್ಡ ರದ್ದಾಗಿರುವುದು ನನ್ನ ಕ್ಷೇತ್ರದಲ್ಲಿ ಇದ್ದರೆ ೨೪ ಗಂಟೆಯೊಳಗೆ ಸರಿಪಡಿಸಿಕೊಡುವ ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ : ಮುರ್ಡೇಶ್ವರದಲ್ಲಿ ಡಿಕೆಶಿ ಹೇಳಿದ್ದು ಸುಳ್ಳಾಗಲಿಲ್ಲ
ಬಿಜೆಪಿ ಸರಕಾರದ (BJP government) ಅವಧಿಯಲ್ಲಿ ಮೀನುಗಾರರು ಸಂಕಷ್ಟದಲ್ಲಿದ್ದರು ಇವರು ಏನು ಮಾಡಿದ್ದಾರೆ. ನಮ್ಮ ಅಧಿಕಾರದಲ್ಲಿ ನಾವು ಮಾಡಿದ ಕೆಲಸವನ್ನು ಜನರು ನೆನಪಿಸಿ ಮಾತನಾಡಬೇಕು. ಆಗ ನಮ್ಮ ಕೆಲಸದ ಸಾರ್ಥಕವಾಗಲಿದೆ. ನನಗೆ ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ. ನಮ್ಮ ಮೀನುಗಾರಿಕಾ ಇಲಾಖೆಯ ಕಾರ್ಯಕ್ರಮದ ಬಗ್ಗೆ ಭಟ್ಕಳ ಮಾಜಿ ಶಾಸಕರು ಮಾತನಾಡಿದ್ದಾರೆ. ಇವೆಲ್ಲವು ಅವರ ಗಮನಕ್ಕೆ ಇರಲಿ. ಮೋಜು ಮಸ್ತಿಗಾಗಿ ಕಾರ್ಯಕ್ರಮ ಮಾಡಿಲ್ಲ ಮೀನುಗಾರರ ಏಳಿಗೆ ಸರಕಾರ ರಚಿಸಿದ ಯೋಜನೆಗಳ ಪರಿಚಯದ ಬಗ್ಗೆ ಮೀನುಗಾರರಿಗೆ ತಿಳಿಸಬೇಕು ಅವರೊಂದಿಗೆ ಸರಕಾರ ಇದೆ ಎಂಬ ಭರವಸೆ ನೀಡಿದ್ದೇವೆ ಎಂದರು.
ಇದನ್ನೂ ಓದಿ : ಡಿಸೆಂಬರ್‌ನಲ್ಲಿ 8 ದಿನ ಶಾಲೆಗಳಿಗೆ ರಜೆ; ಯಾಕೆ ಗೊತ್ತಾ?
೪೦೦ ಕೋಟಿ ರೂ.ಗಳಲ್ಲಿ ಮುರುಡೇಶ್ವರದಲ್ಲಿ (Murudeshwar) ಬಂದರು ನಿರ್ಮಾಣ ಮಾಡಲಿದ್ದೇವೆ. ಇದರಲ್ಲಿ ಒಂದು ಮೀನುಗಾರಿಕೆಯ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಯ ಚಿತ್ತ ಸರಕಾರದಿಂದ ಆಗಿದೆ. ಮೋಜು ಮಸ್ತಿಗೆ ಕೇರಳ (Kerala), ಗೋವಾ (Goa) ಹೋಗುವ ನಮ್ಮ ಜಿಲ್ಲೆಯ ಜನರು ಇನ್ನು ಮುಂದೆ ಮುರುಡೇಶ್ವರಕ್ಕೆ ಮೋಜು ಮಸ್ತಿ ಮಾಡಲು ಬರುವಂತಾಗಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಅವರಿಗೆ ತಿರುಗೇಟು (counter) ನೀಡಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು
ನಿಮ್ಮ ಅವಧಿಯಲ್ಲಿ ತೆಂಗಿನಗುಂಡಿಯ ಬಂದರಿನ ಧಕ್ಕೆ ಕುಸಿದಿದ್ದು ಮಾಜಿ ಶಾಸಕ ಸುನೀಲ ನಾಯ್ಕ ಅವರೇ ನೆನಪಿದೆಯಾ ? ಅದನ್ನು ಸರಿಪಡಿಸುವ ಯೋಗ್ಯತೆನೇ ನಿಮಗೆ ಇಲ್ಲವಾಯಿತು. ಇಂತಹ ಕೆಟ್ಟ ರಾಜಕಾರಣ ಮಾಡುವದನ್ನು ಬಿಟ್ಟು ನಮ್ಮೊಂದಿಗೆ ಸಹಕರಿಸಿ. ನಾವು ಅಭಿವೃದ್ಧಿ ಮಾಡುತ್ತೇವೆ. ನಮ್ಮನ್ನ ನೋಡಿ ಕಲಿಯಿರಿ. ನಿಮ್ಮ ಕೇಂದ್ರದ ಬಿಜೆಪಿ ಸರಕಾರಕ್ಕೆ ನಮ್ಮನ್ನು ಮಾದರಿಯಾಗಿ ಇಟ್ಟುಕೊಳ್ಳಿ. ನಿಮಗೆ ಜನರು ಈಗಾಗಲೇ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ. ನನಗೆ ಒಂದು ಲಕ್ಷ ಮತವನ್ನು ಕೊಟ್ಟಿದ್ದನ್ನು ಮಾಜಿ ಶಾಸಕರು ಮರೆತಿದ್ದಾರೆ ಅನ್ನಿಸುತ್ತೆ. ಕ್ಷೇತ್ರದಲ್ಲಿ ಇಂತಹ ಕೆಲಸ ಮಾಡಿ ಎಂದು ಹೇಳಿ ನಾನು ಮಾಡಿ ತೋರಿಸುತ್ತೇನೆ. ಸರಕಾರದಿಂದ ಆಗದ ಕೆಲಸವನ್ನು ನಾನು ನನ್ನ ಸ್ವಂತ ಹಣದಿಂದ ಮಾಡುತ್ತಾ ಬಂದಿದ್ದೇನೆ ಎಂದು ಸುನೀಲ ನಾಯ್ಕರನ್ನು ತರಾಟೆಗೆ ತೆಗೆದುಕೊಂಡರು.
ಸಚಿವ ಮಂಕಾಳ ವೈದ್ಯರ ಭಾಷಣದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.