ಭಟ್ಕಳ (Bhatkal) : ಶ್ರೀ ರಾಮಚಂದ್ರಾಪುರ ಮಠದ (Ramachandrapura Math) ಆಡಳಿತಕ್ಕೆ ಒಳಪಟ್ಟಿರುವ ಕಿತ್ರೆಯ ಶ್ರೀ ದುರ್ಗಾಪರಮೇಶ್ವರಿ (Durgaparameshwari) ದೇವಸ್ಥಾನದಲ್ಲಿ ಭವತಾರಿಣಿ ವಲಯದ ಮಾತೆಯರ ತಂಡದಿಂದ ಭಜನಾ (Bhajan) ಸೇವೆ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಟಗಾರ ಭಜನಾ ತಂಡದ ಸದಸ್ಯೆ ಪಾರ್ವತಿ ಹೆಗಡೆ, “ಮಾತೆಯರಲ್ಲಿ ಸಂಘಟನೆ ಅವಶ್ಯಕವಾಗಿದೆ. ಇಂತಹ ಭಜನಾ (Bhajan) ಕಾರ್ಯಕ್ರಮಗಳು ಅದಕ್ಕೆ ಪೂರಕವಾಗಿದೆ” ಎಂದರು. ನಂತರ ಮಾತನಾಡಿದ ಕೋಣಾರ ವಿಭಾಗದ ಗುರಿಕಾರ ಗಣೇಶ ಹೆಬ್ಬಾರ, “ನಾವು ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ. ಇಂತಹ ಭಜನಾ ಕಾರ್ಯಕ್ರಮಗಳು ಮುಂದಿನ ಜನಾಂಗ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಅನುಕೂಲವಾಗುತ್ತದೆ” ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : ಕೈಗಾದಲ್ಲಿ ಇನ್ನೊಂದು ಬಸ್ಸಿಗೆ ಬೆಂಕಿ

ವಿವಿಧ ಊರುಗಳ ಮಾತೆಯರಿಂದ ಭಜನಾ ಸೇವೆ ಸಮರ್ಪಣೆಗೊಂಡಿತು. ಶ್ರೀ ಕ್ಷೇತ್ರ ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ್ ಭಟ್, ಕೃಷ್ಣಮೂರ್ತಿ ಹೆಬ್ಬಾರ, ಗಣಪಯ್ಯ ಹೆಗಡೆ, ಗಾಯತ್ರಿ ಹೆಬ್ಬಾರ, ಇತರರು ಉಪಸ್ಥಿತರಿದ್ದರು. ಸಂಗೀತ ಅಭ್ಯಾಸದ ಕುರಿತು ಸಂಗೀತ ಶಿಕ್ಷಕ ಗಜಾನನ ಹೆಬ್ಬಾರ ಸಲಹೆ  ನೀಡಿದರು. ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ ಸ್ವಾಗತಿಸಿದರು. ಮೇಘನಾ ಹೆಬ್ಬಾರ ಮತ್ತು ಚಂದನ ಹೆಬ್ಬಾರ ನಿರೂಪಿಸಿದರು.

ಇದನ್ನೂ ಓದಿ :   ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದ ಭಟ್ಕಳಿಗರು