ಭಟ್ಕಳ (Bhatkal) : ಜನವರಿ ೧೪ಮತ್ತು ೧೫ರಂದು ಪುರಾಣ ಪ್ರಸಿದ್ಧ ಅಳ್ವೆಕೋಡಿ (Alvekodi) ಶ್ರೀ ದುರ್ಗಾಪರಮೇಶ್ವರಿ (Durgaparameshwari) ದೇವಸ್ಥಾನದಲ್ಲಿ ಮಾರಿ ಜಾತ್ರಾ (Mari Jathra) ಮಹೋತ್ಸವ ನಡೆಸಲು ದೇವಾಲಯ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಮಾರಿ ಜಾತ್ರೆ ಸಮಿತಿ ಅಧ್ಯಕ್ಷ ರಾಮಾ ಮೊಗೇರ ತಿಳಿಸಿದ್ದಾರೆ. ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಸಮಿತಿಯಿಂದ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಅಮ್ಮನ ಅಭಯ ಪ್ರಸಾದದಿಂದ ಶ್ರೀ ದುರ್ಗಾಪರಮೇಶ್ವರಿ ಮಾರಿ ಜಾತ್ರಾ (Mari Jathra) ಮಹೋತ್ಸವ ಸಮಿತಿ ರಚಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಮಾರಿ ಜಾತ್ರೆ ನಡೆಯುತ್ತಿದೆ. ಈವರೆಗೆ ಐದು ಜಾತ್ರೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ. ಈ ಬಾರಿ ನಡೆಯುವ ಜಾತ್ರೆ ಆರನೆಯದ್ದಾಗಿದೆ. ಈ ಬಾರಿಯೂ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿದಾನದಲ್ಲಿ ಭಕ್ತರ ಸಹಕಾರದಿಂದ ಅತಿ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ ಎಂದು ರಾಮಾ ಮೊಗೇರ ಹೇಳಿದರು.

ಇದನ್ನೂ ಓದಿ : ಭಟ್ಕಳ ಹಿಂಜಾವೇ ಪದಾಧಿಕಾರಿಗಳ ಘೋಷಣೆ

ಜ.೧೩ರಂದು ಸೋಮವಾರ ಮಧ್ಯಾಹ್ನ ೩ ಘಂಟೆಗೆ ಎಲ್ಲಾ ಭಕ್ತಾದಿಗಳು ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊರಡುವಾಗ ಕಾಯಿ, ಹೂ, ಹಣ್ಣು, ಬಳೆ, ಸೀರೆ, ಅರಿಸಿನ, ಕುಂಕುಮ ಇತ್ಯಾದಿ ಸುವಾಸಿನಿ ದ್ರವ್ಯಗಳನ್ನು ತೆಗೆದುಕೊಂಡು ಹೊರಡಲಾಗುವುದು. ೩.೪೫ಕ್ಕೆ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಕೊಟ್ಟು ಅಲ್ಲಿಂದ ಪ್ರಸಾದವನ್ನು ತೆಗೆದುಕೊಂಡು ಬೈಕ್‌ ರ್ಯಾಲಿಯಲ್ಲಿ ಬರಲಾಗುವದು.  ಶಿರಾಲಿ, ಸಾರದೊಳೆ, ಮಾವಿನಕಟ್ಟೆ, ಯಕ್ಷಿಮನೆ, ಸಣಬಾವಿ, ಶ್ರೀರಾಮ ಭಜನಾ ಮಂದಿರಕ್ಕೆ ಬಂದು ಅಲ್ಲಿಂದ ವಾದ್ಯಾದಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರೆ ಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ಬರಲಾಗತ್ತದೆ. ಹೊರೆ ಕಾಣಿಕೆ ಸ್ವೀಕಾರ ನಂತರ ಮಾರಿಕಾಂಬಾ ಮೂರ್ತಿ ಮತ್ತು ಮಾತಂಗಿ ಮೂರ್ತಿಯನ್ನು ಸಾಯಂಕಾಲ ೭ ಘಂಟೆಗೆ ಗದ್ದುಗೆಗೆ ಕರೆದೊಯ್ಯಲಾಗುವುದು. ಶ್ರೀ ದೇವಿಯಲ್ಲಿ ದೀಪ ಸ್ಥಾಪನೆ, ಮಾಹಾಪ್ರಾರ್ಥನೆ ಫಲ ಸಮರ್ಪಣೆ, ಅಡುಗೆ ಛತ್ರದಲ್ಲಿ ಒಲೆಗೆ ಅಗ್ನಿ ಪ್ರತಿಷ್ಠಾಪನೆ ಹಾಗೂ ಮಾರಿಕಾಂಬ ಪ್ರತಿಷ್ಠಾಪನಾ ಸ್ಥಾನದಲ್ಲಿ ಗಣಪತಿ ಪೂಜನಾ, ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕ್ಷೋಘ್ನ ಹವನ, ದೀಕ್ಷಾಬಲಿ, ಹೊಸ ಆಭರಣಗಳ ಸಮರ್ಪಣೆ ನಡೆಯಲಿದೆ ಎಂದರು.

ಇದನ್ನೂ ಓದಿ :   ಕಾಂತಾರ ಕಲಾವಿದರಿದ್ದ ಮಿನಿ ಬಸ್‌ ಪಲ್ಟಿ

ಜ.೧೪ರ ಮಂಗಳವಾರ ಬೆಳಿಗ್ಗೆ ೬ ಗಂಟೆಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ ಸಮಾರಾಧನೆ. ಪೂರ್ವಹ್ನ ೮ಕ್ಕೆ ಪೂರ್ಣಕಲಶದೊಂದಿಗೆ ಮಾರಿಕಾಂಬೆಗೆ ಪ್ರಾಣ ಪ್ರತಿಷ್ಠಾಪನೆ, ಮಂಗಳಾಷ್ಟಕ, ವೇದಘೋಷ, ವಾದ್ಯಗಳೊಂದಿಗೆ ಮಹಾಮಂಗಳಾರತಿ ನೆರವೇರಲಿದೆ. ನಂತರ ಆಡಳಿತ ಕಮಿಟಿ, ಮಾರಿಜಾತ್ರಾ ಕಮಿಟಿಯವರಿಗೆ ಮಾರಿಕಾಂಬ ದೇವಿಯ ಪ್ರಸಾದ ವಿತರಿಸಿ ಭಕ್ತಾದಿಗಳ ಸೇವೆ ಪ್ರಾರಂಭವಾಗಲಿದೆ.೧೧.೩೦ ಕ್ಕೆ ಮಾರಿಕಾಂಬಾ ದೇವಿಯ ಸಾನಿದ್ಯದಲ್ಲಿ ನೈವೇದ್ಯ ಮತ್ತು ಮಹಾಮಂಗಳಾರತಿ ನಡೆದು ಮಹಾ ಅನ್ನಸಂತರ್ಪಣೆ ಪ್ರಾರಂಭವಾಗಲಿದೆ. ಸಂಜೆ ೪.೩೦ಕ್ಕೆ ಭಜನಾ ಕಾರ್ಯಕ್ರಮ ಇರುವುದು. ರಾತ್ರಿ ೯ ಗಂಟೆಗೆ ಪ್ರಸಿದ್ಧ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಸಂಪೂರ್ಣ ದೇವಿ ಮಹಾತ್ಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಇದನ್ನೂ ಓದಿ :  ಬಹು ಅಂಗಾಂಗ ವೈಫಲ್ಯದಿಂದ ಹುಲಿ ಸಾವು

ಜ.೧೫ರ ಬುಧವಾರ ಬೆಳಿಗ್ಗೆ ೭ರಿಂದ ಸುಪ್ರಭಾತ ಪೂಜೆ, ಭಕ್ತಾದಿಗಳಿಂದ ಸೇವೆ ಪ್ರಾರಂಭವಾಗಲಿದೆ. ೧೧.೩೦ಕ್ಕೆ ಮಾರಿಕಾಂಬಾ ದೇವಿಯಲ್ಲಿ ನೈವೇದ್ಯ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಜರುಗುವುದು. ಸಂಜೆ ೫ ಗಂಟೆಗೆ ಶ್ರೀ ಮಾರಿಕಾಂಬಾ ಮೂರ್ತಿ ಮತ್ತು ಶ್ರೀ ಮಾತಾಂಗಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಲಿದೆ. ಚಂಡೆ, ಗೊಂಬೆ ಕುಣಿತ, ವಿವಿಧ ಸ್ತಬ್ಧ ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ದಾರಿಯ ಮಧ್ಯ ಗಡಿವೀರ ಸ್ಥಳ, ಮಠದ ಜಟ್ಟ ಸ್ಥಳ, ತಣ್ಣಿರು ಕಟ್ಟೆ‌, ದೇವಿ ಅಮ್ಮನಮನೆ ಕುಶ್ಚಾಂಡ, ದೊಂದಿ, ಕುಂಕುಮ ಇತ್ಯಾದಿ ನಡೆಯಲಿದೆ. ರಾತ್ರಿ ೯ ಗಂಟೆಗೆ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿ ಮೂರ್ತಿ ಮತ್ತು ಮಾತಾಂಗಿ ಮೂರ್ತಿಗಳಿಗೆ ದೃಷ್ಟಿ, ದೀಪಾಗ್ನಿ ನಡೆಯಲಿದೆ. ನಂತರ ಪೂಜೆ ಪ್ರಸಾದ ಸ್ವೀಕಾರ, ಮಾತಾಂಗಿ ಮೂರ್ತಿಗೆ ಸಮಸ್ತ ಭಜಕರಿಂದ ಬಲಿ ಪೂಜೆ, ಇಡಗಾಯಿ ಒಡೆಯುವುದು ಆದ ನಂತರ ಮಾತಂಗಿ ಮೂರ್ತಿಯನ್ನು ವೆಂಕಟಾಪುರ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಇದನ್ನೂ ಓದಿ :  ಭಾಗವತಿಕೆ ಮಾಡುತ್ತಿದ್ದಾಗಲೇ ಎದೆ ನೋವಿನಿಂದ ಸಾವು

ಜ.೧೬ರಂದು ಗುರುವಾರ ಪ್ರಧಾನ ಮಾರಿಕಾಂಬ ಮೂರ್ತಿಗೆ ಕಲಾಸಂಕೋಚ ಹವನ ಮಾಡಿ ವಿಸರ್ಜಿಸಲಾಗುತ್ತದೆ. ಶ್ರೀ ದೇವಿಯ ದ್ವಾದಶಿ ಕಲಶ ಸಂಪ್ರೋಕ್ಷಣೆ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಮೊಗೇರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಬಿಳಿಯ ನಾಯ್ಕ, ಹನುಮಂತ ನಾಯ್ಕ. ದೇವಪ್ಪ ಮೊಗೇರ, ಬಾಬು ಅಳಿಕೂಸನ್ಮನೆ, ವಿಠಲ ದೈಮನೆ, ಯಾದವ ಮೊಗೇರ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು