ಭಟ್ಕಳ (Bhatkal) : ಕ್ಲುಲ್ಲಕ ಕಾರಣಕ್ಕೆ ಗುಂಪೊಂದು ಆಟೋ ಚಾಲಕನ (Auto diver) ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಲೂರಿನ ತೂದಳ್ಳಿಯ ಹರ್ಷ ಗಜಾನನ ಮೊಗೇರ, ಗಜಾನನ ನಾಗಪ್ಪ ಮೊಗೇರ, ಪ್ರಮೋದ ಶನಿಯಾರ ನಾಯ್ಕ ಮತ್ತು ರಾಮ ನಾಗಪ್ಪ ಮೊಗೇರ ಆರೋಪಿತರು. ಇವರ ವಿರುದ್ಧ ತೂದಳ್ಳಿ ಬಲೀಂದ್ರಮನೆಯ ಆಟೋ ಚಾಲಕ (Auto diver) ಯೋಗೇಶ ಲೋಕೇಶ ಮೊಗೇರ (೩೫) ದೂರು ದಾಖಲಿಸಿದ್ದಾರೆ. ತೂದಳ್ಳಿಯ ವೀರಮಾಸ್ತಿ ದೇವಸ್ಥಾನ ರಸ್ತೆಯಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಹೋಗುವಾಗ ಘಟನೆ ನಡೆದಿದೆ. ರಸ್ತೆಯ ಬದಿಯಿಂದ ಹೋಗಿ ಅಂತ ಹೇಳಿದ್ದಕ್ಕೆ ಏಕಾಏಕಿ ಆಟೋ ರಿಕ್ಷಾ ಅಡ್ಡಗಟ್ಟಿ ನಿಲ್ಲಿಸಿ ಆರೋಪಿತರು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ (complaint) ತಿಳಿಸಲಾಗಿದೆ.

ಇದನ್ನೂ ಓದಿ :  ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ೭ ಜನರ ವಿರುದ್ಧ ದೂರು ದಾಖಲು