ಭಟ್ಕಳ : ಅರಬ್ಬೀ ಸಮುದ್ರದಲ್ಲಿ (Arabian sea) ಮೀನುಗಾರಿಕಾ ಬೋಟೊಂದು (Fishing boat) ಚಿಕ್ಕ ದೋಣಿಗೆ ಡಿಕ್ಕಿ ಹೊಡೆದು (boat collision) ಪಲ್ಟಿಯಾದ ಪರಿಣಾಮ ಮೂವರು ಮೀನುಗಾರರು (fishermen) ಗಾಯಗೊಂಡಿದ್ದಾರೆ. ಭಟ್ಕಳ ತಾಲೂಕಿನ ತೆಂಗಿನಗುಂಡಿ ಬಂದರಿನ ಬಳಿ ಮಂಗಳವಾರ ಸಂಜೆ ೪.೩೦ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡ ಮೀನುಗಾರರನ್ನು ಕೂಡಲೇ ಭಟ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಜುನಾಥ ಮೊಗೇರ (೫೫), ಮೊಹಮ್ಮದ್ ಜಾಫರ್ (೫೦) ಮತ್ತು ಮೊಹಮ್ಮದ್ ಹಸನ್ ಡಾಂಗಿ (೬೨) ಮೀನುಗಾರಿಕೆಗಾಗಿ ತೆಂಗಿನಗುಂಡಿಯಿಂದ ಬಂದರಿನಿಂದ ಸುಮಾರು ೧೫ ಕಿಲೋಮೀಟರ್ ದೂರ ಸಮುದ್ರಕ್ಕೆ ಹೋಗಿದ್ದರು. ಮೀನುಗಾರಿಕೆಗೆ ಬಲೆ ಬೀಸಲು ತಯಾರಿ ನಡೆಸುತ್ತಿದ್ದ ವೇಳೆ ಮೀನುಗಾರಿಕಾ ಬೋಟು ಅವರ ಚಿಕ್ಕ ದೋಣಿಗೆ ಡಿಕ್ಕಿ ಹೊಡೆದಿದೆ (boat collision). ಪರಿಣಾಮ ದೋಣಿ ಪಲ್ಟಿಯಾಗಿದ್ದು, ಮೂವರು ಮೀನುಗಾರರು ಸಮುದ್ರಕ್ಕೆ ಬಿದಿದ್ದಾರೆ. ಡಿಕ್ಕಿಯಿಂದ ದೋಣಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕಾರ್ತಿಕ ದೀಪೋತ್ಸವ ಸಂಪನ್ನ
ಡಿಕ್ಕಿಯ ನಂತರ ಮೀನುಗಾರರು ಈಜಲು ಹರಸಾಹಸ ಪಟ್ಟರು. ಅದೃಷ್ಟವಶಾತ್, ಸುತ್ತಮುತ್ತಲಿನ ಕೆಲವು ಮೀನುಗಾರರು ಅವರನ್ನು ಗುರುತಿಸಿ, ತಕ್ಷಣ ಸಮುದ್ರದಲ್ಲಿ ಬಿದ್ದ ಮೀನುಗಾರರ ರಕ್ಷಣೆಗಾಗಿ ಮೂರು ದೋಣಿಗಳನ್ನು ರವಾನಿಸಿದರು. ಅಸ್ವಸ್ಥ ಮೀನುಗಾರರನ್ನು ಸಮುದ್ರದಿಂದ ಹೊರತೆಗೆದು ಸುರಕ್ಷಿತವಾಗಿ ಕರೆತಂದು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಸ್ಕ್ಯಾನಿಂಗ್ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರೂ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ಆರೆನ್ನೆಸ್ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ