ಭಟ್ಕಳ (Bhatkal): ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ (car collision) ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನಿನ್ನೆ ಮಂಗಳವಾರ ತಾಲೂಕಿನ ಮುರ್ಡೇಶ್ವರದ (Murdeshwar) ಬಸ್ತಿಮಕ್ಕಿ ಕ್ರಾಸ್ ಬಳಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಕೇರಳ (Kerala) ರಾಜ್ಯದ ಕಾಸರಗೋಡಿನ (Kasaragod) ಮಂಜೇಶ್ವರ (Manjeshwar) ನಿವಾಸಿ ರಾಮಚಂದ್ರ ನರಹರಿ ಕಿಣಿ (೬೩) ಮತ್ತವರ ಕಾರಿನಲ್ಲಿದ್ದ ಕೆ.ನರಸಿಂಹ ಭಟ್ಟ, ನಿವೇದಿತಾ ಭಟ್ಟ ಮತ್ತು ವೈಷ್ಣವಿ ಭಟ್ಟ ಅವರಿಗೆ ಗಾಯಗಳಾಗಿವೆ. ರಾಮಚಂದ್ರ ನರಹರಿ ಕಿಣಿಯವರು ಮಂಗಳೂರು (Mangaluru) ಕಡೆಯಿಂದ ಹೊನ್ನಾವರದ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮುರ್ಡೇಶ್ವರದ (Murudeshwar) ನ್ಯಾಶನಲ್ ಕಾಲೋನಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ವೇಗವಾಗಿ ಬಂದ ಇನ್ನೊಂದು ಕಾರು ರಾಮಚಂದ್ರ ಕಿಣಿಯವರ ಕಾರಿಗೆ ಡಿಕ್ಕಿ ಹೊಡೆದಿದೆ (car collision) ಎಂದು ದೂರಿನಲ್ಲಿ (Complaint) ತಿಳಿಸಲಾಗಿದೆ. ಡಿಕ್ಕಿ ಹೊಡೆದ ಕಾರಿನ ಚಾಲಕ ಸಿದ್ದಾಪುರ (Siddapur) ತಾಲೂಕಿನ ಅರೆಂದೂರು ನಿವಾಸಿ ಮಹ್ಮದ್ ನಜೀವ್ ಇಸ್ಮಾಯಿಲ್ ಇಬ್ರಾಹಿಂ ಸಾಬ್ (೨೪) ವಿರುದ್ಧ ಪ್ರಕರಣ ದಾಖಲಿಸಲಾಗಿದೆ (Case Registered). ಮುರ್ಡೇಶ್ವರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸಮುದ್ರದಲ್ಲಿ ದೋಣಿ-ಹಡಗು ಡಿಕ್ಕಿ; ಮೂವರು ಅಸ್ವಸ್ಥ