ಕಾರವಾರ (Karwar) : ರಾಷ್ಟ್ರೀಯ ಹೆದ್ದಾರಿ (National Highway) ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ-766ಇ ಕುಮಟಾ (Kumta) -ಶಿರಸಿ (Sirsi) ರಸ್ತೆಯ ಉನ್ನತೀಕರಣ ಕಾಮಗಾರಿಯು ಡಿ. ೨ರಿಂದ ಆರಂಭವಾಗಲಿದೆ. ಈ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಲು ಕುಮಟಾ-ಶಿರಸಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತಿದೆ (NH Closed). ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಕುಮಟಾದಿಂದ ಸಿದ್ದಾಪುರ (Siddapur) ಮಾರ್ಗವಾಗಿ ಶಿರಸಿಗೆ ಲಘು ವಾಹನಗಳು ಸಂಚರಿಸಬಹುದು. ಅಂಕೋಲಾದಿಂದ (Ankola) ಶಿರಸಿಗೆ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ೬೩ ಮತ್ತು ರಾಜ್ಯ ಹೆದ್ದಾರಿ-೯೩ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು. ಹೊನ್ನಾವರದಿಂದ (Honnavar) ಸಿದ್ದಾಪುರ-ಮಾವಿನಗುಂಡಿ ಮಾರ್ಗವಾಗಿ ಶಿರಸಿಗೆ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ-766 ಇ ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿ ಸಮಯದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಸಂಚಾರ ನಿಷೇಧಿಸುವುದರಿಂದ (NH Closed) ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಎಸ್ಪಿ ನಾರಾಯಣ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಇದನ್ನೂ ಓದಿ : ಮುರ್ಡೇಶ್ವರದಲ್ಲಿ ಕಾರುಗಳ ಡಿಕ್ಕಿ; ನಾಲ್ವರಿಗೆ ಗಾಯ