ಭಟ್ಕಳ (Bhatkal) : ತಾಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ಜೀವ ರಕ್ಷಕ ಮತ್ತು ವಿಪತ್ತು ನಿರ್ವಹಣೆ (disaster management) ಬಗ್ಗೆ ತರಬೇತಿ ಕಾರ್ಯಗಾರವನ್ನು (Training workshop) ಶಿರಾಲಿಯ ಸಾರದಹೊಳೆ ಹನುಮಂತ ದೇವಸ್ಥಾನದ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮವನ್ನು ಭಟ್ಕಳ ಗ್ರಾಮೀಣ ಠಾಣೆಯ ಪಿಎಸೈ ಬರಮಪ್ಪ ಬೆಳಗಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಿಗೆ ಅಗ್ನಿಶಾಮಕ ಠಾಣಾಧಿಕಾರಿ ಮೋಹನ ಶೆಟ್ಟಿ ಸಮವಸ್ತ್ರ ವಿತರಿಸಿದರು. ಜಿಲ್ಲಾ ವೇದಿಕೆ ನಿಕಟಪೂರ್ವ ಅಧ್ಯಕ್ಷ ಸತೀಶ ಶೇಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶೌರ್ಯ ವಿಪತ್ತು ನಿರ್ವಹಣಾ (disaster management) ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ, ತರಬೇತುದಾರರಾದ ಸಂತೋಷ ಪೀಟರ್ ಡಿಸೋಜ, ತಾಲೂಕಿನ ಹಣಕಾಸು ಮತ್ತು ಆಡಳಿತ ಪ್ರಬಂಧಕರು, ತಾಲೂಕಿನ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಶ್ರೀಕಾಂತ ನಾಯ್ಕ, ಕ್ಯಾಪ್ಟನ್ ಜ್ಯೋತಿ ಆಚಾರಿ, ಸಂಯೋಜಕರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ಇದನ್ನೂ ಓದಿ : ಹಣ ಕೇಳಿದ್ದಕ್ಕೆ ಮನೆಗೆ ನುಗ್ಗಿ ಚೂರಿಯಿಂದ ಹಲ್ಲೆ