ಭಟ್ಕಳ (Bhatkal) : ಕೊಡುವ ಹಣದ ಬಗ್ಗೆ ವಿಚಾರಿಸಿದ್ದಕ್ಕೆ ಸಿಟ್ಟುಗೊಂಡ ವ್ಯಕ್ತಿ ಗುಂಪಿನೊಂದಿಗೆ ಮನೆಗೆ ನುಗ್ಗಿ ಚೂರಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ಮುಗಳಿಹೊಂಡದ ರಿಜ್ವಾನ್‌ ಅಬ್ದುಲ್‌ ರಶೀದ್‌ (೨೪), ಜಾಫರ್‌ ಅಲಿಯಾಸ್‌ ಕಾಪು ಜಾಫರ್‌ (೩೫), ಅಲಿಯಾ ಜಾಫರ್‌ (೩೦) ಮತ್ತು  ಚೌತನಿಯ ರಫೀಕ್‌ ಹಮೀದ್‌ (೩೫) ಆರೋಪಿತರು. ಇವರ ವಿರುದ್ಧ ಭಟ್ಕಳ ತಾಲೂಕಿನ ಮುಟ್ಟಳ್ಳಿಯ ಈಶರತ್‌ ಜಹಾನ್‌ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಕ್ರಿಮಿನಾಶಕ ಸೇವಿಸಿದ್ದ ವ್ಯಕ್ತಿ ಕೊನೆಯುಸಿರು

ದೂರಿನಲ್ಲೇನಿದೆ?: ಈಶರತ್‌ ಜಹಾನ್‌ ಅವರು ಕೊಡುವ ಹಣದ ಬಗ್ಗೆ ರಿಜ್ವಾನ್‌ ಅಬ್ದುಲ್‌ ರಶೀದ್‌ ಬಳಿ ವಿಚಾರಿಸಿದ್ದರು. ಇದಕ್ಕೆ ಸಿಟ್ಟಿನಿಂದ ಆರೋಪಿ ರಿಜ್ವಾನ್‌ ಬೆದರಿಕೆ ಹಾಕಿದ್ದರು.  ನ.೨೮ರಂದು ಮಧ್ಯಾಹ್ನ ೩.೫೦ರ ಸುಮಾರಿಗೆ ಈಶರತ್‌ ಅವರು ಗಂಡನ ಸ್ನೇಹಿತ ಅಬ್ದುಲ್‌ ವಾಹಿದ್‌ ಜೊತೆಗಯಲ್ಲಿ ಆಸ್ಪತ್ರೆಯಿಂದ ಮರಳಿ ಬಂದಾಗ ಎಲ್ಲ ನಾಲ್ವರು ಆರೋಪಿಗಳು ಬಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಮನೆಯೊಳಗೆ ಈಶರತ್‌ ಅವರ ಗಂಡ ಮನೆಯೊಳಗೆ ಇದ್ದುದನ್ನು ಕಂಡ ಆರೋಪಿತರು ಮನೆಯ ಮುಂದಿನ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಅವರಿಗೆ  ಕಾಪು ಜಾಫರ್‌ ಚೂರಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ :   ರುದ್ರಭೂಮಿಯಲ್ಲಿ ಚಂಡೆ ವಾದಕರ ಶ್ರಮದಾನ