ಭಟ್ಕಳ (Bhatkal) : ಶಿರಾಲಿ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ (Durgaparameshwari) ದೇವಸ್ಥಾನದ ಸಭಾಭವನದಲ್ಲಿ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನಿಂದ ತಾಲ್ಲೂಕಿನಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕಪಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗೋಕರ್ಣ (Gokarna) ಪರ್ತಗಾಳಿ (Partagali) ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ (Vader Swamiji) ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಂತರ ಆಶೀರ್ವಚನ ನೀಡಿದ ಗೋಕರ್ಣ ಪರ್ತಗಾಳಿ (Partagali) ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ , ಸಾಧನೆಗೆ ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಸಾಧನೆ ಮಾಡಲು ಅನುಕೂಲವಾಗುವುದು. ಕಳೆದ ಹನ್ನೊಂದು ವರ್ಷಗಳಿಂದ ಎಲ್ಲಾ ಜಾತಿ, ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತಿದೆ. ಪ್ರತಿವರ್ಷವೂ ಕೂಡಾ ಅಂಕಗಳನ್ನು ಮಾತ್ರ ಮಾನದಂಡವಾಗಿ ಇಟ್ಟುಕೊಂಡು ಪ್ರೋತ್ಸಾಹ ನೀಡುತ್ತಿರುವ ಟ್ರಸ್ಟ್ನ ಕಾರ್ಯವನ್ನು ಶ್ಲಾಘನೀಯ ಎಂದು ಹೇಳಿದರು.
ಇದನ್ನೂ ಓದಿ : ಆನಂದಾಶ್ರಮದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಮುಖ್ಯ ಅತಿಥಿಯಾಗಿದ್ದ ಅಳ್ವೆಕೋಡಿ ಮಾರಿಜಾತ್ರಾ (Marijatra) ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಎಂ ಮೊಗೇರ ಮಾತನಾಡಿ, ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನವರು ವೈದ್ಯಕೀಯ ಶಿಬಿರ, ಪ್ರೌಢಶಾಲೆಗೆ ನೆರವು, ಧರ್ಮಾರ್ಥ ಸಭಾಭವನ ಹೀಗೆ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ವರ್ಷಂಪ್ರತಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಾತಿ, ಮತ ಎಣಿಸದೇ ನೆರವು ನೀಡುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದರು. ಉಪಸ್ಥಿತರಿದ್ದ ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಶಿಕ್ಷಣ ಸಂಯೋಜಕ ಅಶೋಕ ಆಚಾರ್ಯ ಮಾತನಾಡಿದರು.
ಇದನ್ನೂ ಓದಿ : RNS/ ಪಿಯು ಕಾಲೇಜಿನಲ್ಲಿ ವಾರ್ಷಿಕೋತ್ಸವ
ವೇದಿಕೆಯಲ್ಲಿ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಪ್ರಮುಖರಾದ ಹನುಮಂತ ನಾಯ್ಕ, ಯಾದವ ಮೊಗೇರ, ಅಣ್ಣಪ್ಪ ಮೊಗೇರ, ಬಾಬು ಮೊಗೇರ, ನಾರಾಯಣ ಮೊಗೇರ, ಜಟಕಾ ಮೊಗೇರ, ಮಂಜುನಾಥ ಕೋಡಿಹಿತ್ಲು ಮುಂತಾದವರಿದ್ದರು. ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು. ಅರವಿಂದ ಪೈ ವರದಿ ವಾಚಿಸಿದರು. ಶಿಕ್ಷಕರಾದ ಶ್ರೀಧರ ಶೇಟ, ರಾಜೀವಿ ಮೊಗೇರ ನಿರೂಪಿಸಿದರು. ಸಭೆಯಲ್ಲಿ ೨೦೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಪಿಡಿಒ ಪರೀಕ್ಷೆ ಹಿನ್ನೆಲೆ ವಿಶೇಷ ಬಸ್ !