ಭಟ್ಕಳ (Bhatkal) : ಬಾರ್ ಅಸೋಶಿಯೇಶನ್ ಭಟ್ಕಳದ ಹಿರಿಯ ಸದಸ್ಯ, ನ್ಯಾಯವಾದಿ (Advocate) ಹಾಗೂ ನೋಟರಿ (Notary) ಆರ್.ಆರ್. ಶ್ರೇಷ್ಠಿ ಅಲ್ಪಕಾಲದ ಅಸೌಖ್ಯದಿಂದ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇವರು ಭಟ್ಕಳದ ನ್ಯಾಯಾಲಯದಲ್ಲಿ ೧೯೮೭ರಿಂದ ವಕಾಲತ್ತು ಆರಂಭಿಸಿದ್ದರು. ಅನೇಕ ಕ್ಲಿಷ್ಟಕರವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದ್ದರು. ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿಯೂ ಕೂಡಾ ಕೆಲವು ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು. ಭಟ್ಕಳ ಬಾರ್ ಅಸೋಶಿಯೇಶನ್ನಲ್ಲಿ ಹಿರಿಯ ವಕೀಲರಾಗಿದ್ದ ಅವರು ಎರಡು ಬಾರಿ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಭಟ್ಕಳಕ್ಕೆ ಹೊಸ ನ್ಯಾಯಾಂಗದ ಕಟ್ಟಡದ ಮಂಜೂರಿಗೋಸ್ಕರ ಕಟ್ಟಡ ಸಮಿತಿಯ ಕಾರ್ಯದರ್ಶಿಯಾಗಿದ್ದ ಅವರು ವಕೀಲರ ತಂಡದೊಂದಿಗೆ ಬೆಂಗಳೂರಿಗೂ ತೆರಳಿ ಹೊಸ ಕಟ್ಟಡ ಮಂಜೂರಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ : Krishna Byre Gowda/ ಆಂದೋಲನ ಮಾದರಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ
ಮೃತರ ಅಂತಿಮ ದರ್ಶನವನ್ನು ಹಿರಿಯ ಶ್ರೇಣಿಯ ನ್ಯಾಯಾಧೀಶ (Judge) ಕಾಂತ ಕುರಣಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಧನವತಿ ಶ್ರೇಷ್ಠಿಯವರ ಮನೆಗೆ ತೆರಳಿ ಅಂತಿ ದರ್ಶನ ಪಡೆದರು. ಸಚಿವ ಮಂಕಾಳ ವೈದ್ಯ (Mankal Vaidya), ಮಾಜಿ ಶಾಸಕ ಸುನೀಲ ನಾಯ್ಕ(Sunil Naik), ಆರ್.ಎನ್.ಎಸ್. ಸಮೂಹ ಸಂಸ್ಥೆಯ ನಾಗರಾಜ ಶೆಟ್ಟಿ, ಮುರ್ಡೇಶ್ವರ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಸ್. ಕಾಮತ, ಹಿರಿಯ ನ್ಯಾಯವಾದಿ ಮಾಜಿ ಶಾಸಕ ಜೆ.ಡಿ .ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ, ಕಾರ್ಯದರ್ಶಿ ಆರ್.ಜಿ. ನಾಯ್ಕ, ಉಪಾಧ್ಯಕ್ಷ ನಾಗರಾಜ ನಾಯ್ಕ, ನಿವೃತ್ತ ಜಿಲ್ಲಾ ನ್ಯಾಯಾಧೀಶ ರವಿ ನಾಯ್ಕ, ಹಿರಿಯ ವಕೀಲರಾದ ಎಂ.ಎಲ್.ನಾಯ್ಕ, ವಕೀಲರ ಸಂಘದ ಮಾಜಿ ಅಧ್ಯಕ್ಷ ಗಣೇಶ ನಾಯ್ಕ, ಹಿರಿಯ ಕಿರಿಯ ವಕೀಲರು ಹಾಗೂ ಊರಿನ ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಆನ್ಲೈನ್ ವಂಚನೆ; ೧ ಲಕ್ಷ ರೂ. ಗೋತಾ
ವಕೀಲರ ಸಂಘದಿಂದ ಸಂತಾಪ ಸಭೆ: ಹಿರಿಯ ನ್ಯಾಯವಾದಿ ಹಾಗೂ ನೋಟರಿ (Notary) ಆರ್.ಆರ್.ಶ್ರೇಷ್ಟಿಯವರ ನಿದನದ ಸುದ್ದಿ ತಿಳಿಯುತ್ತಲೇ ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಭಟ್ಕಳ ಬಾರ್ ಅಸೋಶಿಯೇಶನ್ ಸದಸ್ಯರುಗಳು ಸಂತಾಪ ಸಭೆ ನಡೆಸಿದರು. ಹಿರಿಯ ನ್ಯಾಯವಾದಿಗಳಾಗಿದ್ದ ಅವರು ಕಿರಿಯರಿಗೆ ಮಾರ್ಗದರ್ಶಕರಾಗಿದ್ದಲ್ಲದೇ ನ್ಯಾಯಾಲಯದ ಕಲಾಪಗಳಲ್ಲಿ ಹಾಗೂ ಲೋಕ ಅದಾಲತ್, ಕಾನೂನು ಸೇವಾ ಸಮಿತಿಯ ಕಾರ್ಯಗಳಿಗೆ ಕೂಡಾ ಉತ್ತಮ ಸಹಕಾರ ನೀಡುತ್ತಿದ್ದರು. ಕೆಲವೊಂದು ವಿಷಯಗಳಲ್ಲಿ ಮಾರ್ಗದರ್ಶಕರಾಗಿದ್ದ ಅವರು ನಿದನವು ಭಟ್ಕಳ ಬಾರ್ ಅಸೋಶಿಯೇನ್ಗೆ ತುಂಬಲಾರದ ನಷ್ಟ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ಹೇಳಿದರು.
ಇದನ್ನೂ ಓದಿ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಹೋರಾತ್ರಿ ಭಜನೆ
ಈ ಸಂದರ್ಭದಲ್ಲಿ ಒಂದು ನಿಮಿಷ ಮೌಲಾನಚರಣೆಯ ಮೂಲಕ ಅಗಲಿದ ಶ್ರೇಷ್ಟಿಯವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಹಿರಿಯ ವಕೀಲರು ಹಾಗೂ ಮಾಜಿ ಶಾಸಕರಾದ ಜೆ.ಡಿ.ನಾಯ್ಕ, ವಕೀಲರ ಸಂಘದ ಕಾರ್ಯದರ್ಶಿ ಆರ್.ಜಿ.ನಾಯ್ಕ, ಉಪಾಧ್ಯಕ್ಷ ನಾಗರಾಜ ನಾಯ್ಕ, ಸಹಕಾರ್ಯದರ್ಶಿ ನಾಗರತ್ನಾ ನಾಯ್ಕ, ಹಿರಿಯ ವಕೀಲರುಗಳಾದ ನಾಗರಾಜ ಈ.ಎಚ್., ಕೆ.ಎಚ. ನಾಯ್ಕ, ವಿ.ಎಫ್.ಗೋಮ್ಸ, ಜೆ.ಡಿ. ಭಟ್ಟ, ನಿವೃತ್ತ ನ್ಯಾಯಾಧೀಶ ರವಿ ನಾಯ್ಕ, ಎಸ್.ಬಿ. ಬೊಮ್ಮಾಯಿ, ಶಂಕರ ಕೆ. ನಾಯ್ಕ, ರಾಜೇಶ ನಾಯ್ಕ ಹಾಗೂ ಬಾರ್ ಅಸೋಶಿಯೇಶನ್ ಹಿರಿಯ ಹಾಗೂ ಕಿರಿಯ ಸದಸ್ಯರುಗಳು ಉಪಸ್ಥಿತರಿದ್ದರು. ನಂತರ ಎಲ್ಲಾ ವಕೀಲರುಗಳು ಮೃತರ ಗೌರವಾರ್ಥ ತಮ್ಮ ಕಚೇರಿಗಳನ್ನು ಬಂದ್ ಮಾಡಿ ಕೋರ್ಟ ಕಲಾಪದಿಂದ ಹೊರಗುಳಿದು ಮೃತರ ಅಂತಿಮ ದರ್ಶನಕ್ಕೆ ತೆರಳಿದರು.
ಇದನ್ನೂ ಓದಿ : Partagali/ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ