ಭಟ್ಕಳ (Bhatkal) : ೨೦ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ (Retired Soldier) ಹರೀಶ ದೇವಾಡಿಗ ಅವರಿಗೆ ವಿವಿಧ ಸಂಘಟನೆ ಹಾಗೂ ಸಾರ್ವಜನಿಕರು ಮುರುಡೇಶ್ವರ (Murudeshwar) ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರುಡೇಶ್ವರ ಗೇಟಿನಲ್ಲಿ ಆಗಮಿಸಿದ ನಿವೃತ್ತ ಯೋಧನ್ನು (Retired Soldier) ಹೂವಿನ ಹಾರ ಹಾಕಿ, ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮುರುಡೇಶ್ವರ (Murdeshwar) ಲಯನ್ಸ್ ಕ್ಲಬ್ (Lions Club), ನರೇಕುಳಿ ಗೆಳೆಯರ ಬಳಗ, ಮಾಜಿ ಸೈನಿಕರ ಸಂಘ ಭಟ್ಕಳ, ಮುರುಡೇಶ್ವರ ಗೆಳೆಯರ ಬಳಗ, ದೇವಾಡಿಗ ಸಮಾಜ ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು. ನಂತರ ನರೇಕುಳಿ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ನಿವೃತ್ತ ಯೋಧನನ್ನು ಮುರುಡೇಶ್ವರ ಗೇಟ್ ನಿಂದ ಚಂಡೆ ವಾದ್ಯದ ಮೂಲಕ ತೆರೆದ ಜೀಪ್ ನಲ್ಲಿ ಬೈಕ್ ಮೆರವಣಿಗೆ ನಡೆಸಿದರು. ಮುರುಡೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಿ ನಂತರ ಸೈನಿಕನನ್ನು ಸನ್ಮಾನಿಸಿದರು.
ಇದನ್ನೂ ಓದಿ : ಹಿರಿಯ ನ್ಯಾಯವಾದಿ, ನೋಟರಿ ಶ್ರೇಷ್ಠಿ ನಿಧನ
ಮುರುಡೇಶ್ವರ ನರೇಕುಳಿಯ ವೆಂಕಟರಮಣ ದೇವಾಡಿಗ ಹಾಗೂ ಕಮಲ ದೇವಾಡಿಗ ಅವರ ಹಿರಿಯ ಪುತ್ರ ಹರೀಶ ದೇವಾಡಿಗ. ಪತ್ನಿ ತುಳಸಿ ಮತ್ತು ಓರ್ವ ಪುತ್ರಿ ಇರುವ ಪುಟ್ಟ ಕುಟುಂಬ ಇವರದು. ಇವರು ಕಳೆದ ೨೦ ವರ್ಷದ ಹಿಂದೆ ಭಾರತೀಯ ಸೇನೆಯಲ್ಲಿ(electrical and mechanical department) ವಿದ್ಯುತ್ ಮತ್ತು ಯಾಂತ್ರಿಕ ವಿಭಾಗದ (technical staff) ತಾಂತ್ರಿಕ ಸಿಬ್ಬಂದಿಯಾಗಿ ಸೇವೆಗೆ ಸೇರಿದ್ದರು. ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜಮ್ಮು ಕಾಶ್ಮೀರ, ಲಡಾಕ್, ರಾಜಸ್ಥಾನ, ಪಂಜಾಬ್, ಆಂಧ್ರಪ್ರದೇಶ, ನಾಗಾಲ್ಯಾಂಡ ಹಾಗೂ ಕೊನೆಯಲ್ಲಿ ಹೈದ್ರಾಬಾದನಲ್ಲಿ ಸೇವೆ ಸಲ್ಲಿಸುವ ಮೂಲಕ ನಿವೃತ್ತಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ : Krishna Byre Gowda/ ಆಂದೋಲನ ಮಾದರಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ