ಭಟ್ಕಳ (Bhatkal) : ಗೋಕರ್ಣ (Gokarna) ಪರ್ತಗಾಳಿ ಮಠದ (Partagali Math) ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ (Vader Swamiji) ಅವರು ಭಟ್ಕಳ ಜನತಾ ಬ್ಯಾಂಕ್ ಹಿಂಬದಿಯಲ್ಲಿ ನಿರ್ಮಾಣಗೊಂಡ ಒಂದು ಕೋಟಿ ರೂ. ಮೊತ್ತದ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಂತರ ಆಶೀರ್ವಚನ ನೀಡಿ ಭಕ್ತರನ್ನುದ್ದೇಶಿಸಿ ಮಾತನಾಡಿದ ವಡೇರ ಸ್ವಾಮೀಜಿ (Vader Swamiji), ಸಚಿವರು ಗುರುಗಳಿಗೆ ಕೊಟ್ಟ ಮಾತಿನಂತೆ ರಸ್ತೆ ನಿರ್ಮಾಣ ಮಾಡುವ ಭರವಸೆ ಈಡೇರಿಸಿ ಕೊಟ್ಟ ಮಾತನ್ನು ತಪ್ಪಿಸಿಲ್ಲ. ೬೦ ಸಂವತ್ಸರ ದಾಟಿದ ದಿನೇಶ ಪೈ ಷಷ್ಠ್ಯಬ್ದ ಪೂರ್ತಿ ಉಗ್ರ ರಥ ಶಾಂತಿಯನ್ನು ಮಾಡಿ ದೇವರ ಸೇವ ಮಾಡಿದರೆ, ಸಚಿವ ಮಂಕಾಳ ವೈದ್ಯರು (Mankal Vaidya) ದೇವರ ಭಕ್ತರಿಗೆ ಮಾರ್ಗವನ್ನು ಕೊಡಬೇಕಾಗಿ ರಸ್ತೆ ನಿರ್ಮಿಸಿ ದೇವರ ಸೇವೆ ಮಾಡಿದ್ದಾರೆ. ಇಲ್ಲಿ ಎರಡು ಭಕ್ತರಿಂದ ಎರಡು ಬಗೆಯ ದೇವರ ಸೇವೆ ಮಾಡಿದ್ದಾರೆ. ಒಬ್ಬರು ನೇರವಾಗಿ ದೇವರ ಸೇವೆ ಮಾಡಿದರೆ. ಇನ್ನೊಬ್ಬರು ದೇವರನು ನೋಡಲು ಬರುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗಬಾರದೆನ್ನುವ ಉದ್ದೇಶದಿಂದ ದೇವರ ಸೇವೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ : ತವರಿಗೆ ಆಗಮಿಸಿದ ನಿವೃತ್ತ ಯೋಧಗೆ ಸ್ವಾಗತ
ಗುರುಗಳಿಗೆ ಹೊಸದಾದ ಮಾರ್ಗದ ದರ್ಶನ ಆಗುವಂತೆ ಸಚಿವ ಮಂಕಾಳ ವೈದ್ಯರು ಮಾಡಿದ್ದಾರೆ. ಇಂದು ಭಟ್ಕಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಿ ಹೊಸ ಮಾರ್ಗದ ದರ್ಶನ ಮಾಡಿಸಿದ್ದಾರೆ. ಮುಂದಿನ ದಿನ ಹೊನ್ನಾವರ ಭಾಗದ ಕೋಡ್ಲುಮನೆ ಭಾಗದ ಕಾರ್ಯಕ್ಕೆ ಹೋಗುತ್ತಿದ್ದೇವೆ. ಅಲ್ಲಿಯೂ ಕೂಡ ಹೊಸ ಮಾರ್ಗದ ದರ್ಶನ ಮಾಡಿಸುತ್ತಿದ್ದಾರೆ. ಗುರುಗಳು ಎಲ್ಲೆಲ್ಲಿಗೆ ಮೊಕ್ಕಾಂ ಹೋಗುತ್ತಿದ್ದರೋ ಅಲ್ಲಿ ಮಂಕಾಳ ವೈದ್ಯರು ಹೊಸ ಮಾರ್ಗದ ದರ್ಶನ ಮಾಡಿಸಿದ್ದಾರೆ ಎಂದರು.
ಇದನ್ನೂ ಓದಿ : ಹಿರಿಯ ನ್ಯಾಯವಾದಿ, ನೋಟರಿ ಶ್ರೇಷ್ಠಿ ನಿಧನ
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಯಾರು ಗುರುಗಳಿಗೆ ತಲೆಬಾಗುತ್ತಾರೊ ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಾರೆ. ಗುರುಗಳ ಪಾದ ಸ್ಪರ್ಶ ಎಲ್ಲಿ ಆಗುತ್ತೊ ಅಲ್ಲಿ ಎಲ್ಲವೂ ಸಾಧ್ಯ. ಮಠ ಮಂದಿರಗಳಿಗೆ ಎಂದೂ ಕೊರತೆ ಆಗಬಾರದು ಎನ್ನುವದು ನಮ್ಮ ಬಯಕೆ ಎಂದು ಹೇಳಿದರು. ಸಚಿವ ವೈದ್ಯರು ತಮ್ಮ ಮಾತಿಗೆ ಬದ್ದರಾಗಿದ್ದಾರೆ. ಅಧಿಕಾರ ಇಲ್ಲದಾಗಲೂ ಅವರು ಹೇಳಿದ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ ಎಂದು ಹಾಂಗ್ಯೋ ಐಸ್ ಕ್ರೀಂ (Hangyo Icecream) ಎಂಡಿ ಪ್ರದೀಪ ಪೈ ಹೇಳಿದರು.
ಇದನ್ನೂ ಓದಿ : Krishna Byre Gowda/ ಆಂದೋಲನ ಮಾದರಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ
ಬಳಿಕ ಶ್ರೀಗಳು ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಹೆಸ್ಕಾಂ, ಪುರಸಭೆ, ವಿದ್ಯುತ್ ಗುತ್ತಿಗೆದಾರರು ಸೇರಿ ಸಹಕರಿಸಿದವರಿಗೆ ಮತ್ತು ಸಚಿವ ಮಂಕಾಳ ವೈದ್ಯ ಅವರಿಗೆ ಮಂತ್ರಾಕ್ಷತೆ ನೀಡಿ ಗೌರವಿಸಿದರು. ಜಿಎಸ್‌ಬಿ (GSB) ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಅಧ್ಯಕ್ಷ ನಾಗೇಶ ಕಾಮತ, ಮುಖಂಡ ರಾಜೇಶ ನಾಯಕ, ಕಾಮಾಕ್ಷೀ ದೇವಸ್ಥಾನದ ಅಧ್ಯಕ್ಷ ಹರೀಶ ಕಾಮತ ಇತರರು ಇದ್ದರು.
ಇದನ್ನೂ ಓದಿ : ಭಟ್ಕಳದಲ್ಲಿ ಆನ್‌ಲೈನ್ ವಂಚನೆ; ೧ ಲಕ್ಷ ರೂ. ಗೋತಾ