ಭಟ್ಕಳ (Bhatkal): ಉತ್ತರ ಕನ್ನಡ (Uttara Kannada) ಜಿಲ್ಲಾ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ಸನ್ಮಾನದಲ್ಲಿ ಭಟ್ಕಳದ ಎಂ. ಆರ್. ನಾಯ್ಕ ಅವರಿಗೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಗಿದೆ (honour).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಎಂ. ಆರ್. ನಾಯ್ಕ ಅವರು ವಿಜಯಾ ಬ್ಯಾಂಕಿನ (Vijaya Bank) ಚೀಫ್ ಮ್ಯಾನೇಜರ್ ಆಗಿ ದೇಶದ ಉದ್ದಗಲಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯಾದ ನಂತರ ವ್ಯಕ್ತಿತ್ವ ವಿಕಸನ ತರಬೇತಿ, ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ಯಾಂಕಿಂಗ್ ಪರೀಕ್ಷಾ ತರಬೇತಿಯನ್ನು ಆರಂಭಿಸಿ ನೂರಾರು ಉದ್ಯೋಗಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಅನೇಕ ವ್ಯಕ್ತಿಗಳು ಇವರಿಂದಾಗಿ ಬ್ಯಾಂಕಿಂಗ್ ಉದ್ಯೋಗಕ್ಕೆ ಸೇರಿದ್ದಾರೆ. ಸರ್ಕಾರಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : cyber security/ ಶ್ರೀ ಗುರು ಸುದೀಂಧ್ರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ
ಸಾಲುಮರದ ತಿಮ್ಮಕ್ಕ (Salumarada Thimmakka) ಪಾರ್ಕಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಸಹಸ್ರಾರು ಗಿಡನಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಭಟ್ಕಳ ನಗರಸಭೆಯ ಸ್ವಚ್ಛ ಭಾರತ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದಾರೆ. ತಾ.ಪಂ.ನ ಲೀಡ್ ಬ್ಯಾಂಕನ (Lead Bank) ಫೈನಾನ್ಶಿಯಲ್ ಲಿಟರಸಿ ಕೌನ್ಸಿಲರ್ ಆಗಿ ಸ್ವಸಹಾಯ ಸಂಘಗಳಿಗೆ ತರಬೇತಿ ನೀಡಿ ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆ ಸಾಲ ಸೌಲಭ್ಯ ಪಡೆಯಲು ಸಹಕರಿಸಿ ತರಬೇತಿ ನೀಡಿದ್ದಾರೆ. ೫೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಶೈಕ್ಷಣಿಕ ಸಾಲ ಪಡೆಯಲು ಮಾರ್ಗದರ್ಶನ ನೀಡಿ ಸಹಾಯ ಮಾಡಿದ್ದಾರೆ. ಪ್ರಧಾನಮಂತ್ರಿ ಜೀವನ ವಿಮಾ ಯೋಜನೆ, ಪ್ರಧಾಮಂತ್ರಿ ಸ್ವಾಸ್ತ್ಯ ವಿಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ನೀಡಿ ಸಾವಿರಾರು ಜನರಿಗೆ ಅದರ ಪ್ರಯೋಜನ ಸಿಗುವಂತೆ ಮಾಡಿದ್ದಾರೆ.
ಇದನ್ನೂ ಓದಿ : Vader Swamiji/ ದೇವರ ಸೇವೆ ಮಾಡಿದ ಮಂಕಾಳ ವೈದ್ಯ
ಭಟ್ಕಳದ ಬಂದರ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ನವೀಕರಣದ ಸಮಿತಿಯ ಅಧ್ಯಕ್ಷರಾಗಿ ೨೫ ಲಕ್ಷ ರೂ. ವೆಚ್ಛದಲ್ಲಿ ಅತ್ಯಾಧುನಿಕ ರುದ್ರಭೂಮಿಯ ಪುನರ್ನಿರ್ಮಾಣದಲ್ಲಿ ನೇತೃತ್ವ ವಹಿಸಿದ್ದಾರೆ. ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇಗುಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬಂದರ ರಸ್ತೆಯಲ್ಲಿರುವ ನಾಗಮಹಾಸತಿ ದೇವಸ್ಥಾನ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಭಟ್ಕಳ ಅರ್ಬನ ಬ್ಯಾಂಕ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೭೩ರ ಇಳಿ ವಯಸ್ಸಿನಲ್ಲಿಯೂ ಸಮಾಜಸೇವೆ ಮಾತ್ರವಲ್ಲದೆ ಹಲವಾರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಂ. ಆರ್. ನಾಯ್ಕ ಅವರ ವ್ಯಕ್ತಿತ್ವಕ್ಕೆ ಸನ್ಮಾನಿಸಿ ಗೌರವಿಸಲಾಗಿದೆ (honour).
ಇದನ್ನೂ ಓದಿ : ತವರಿಗೆ ಆಗಮಿಸಿದ ನಿವೃತ್ತ ಯೋಧಗೆ ಸ್ವಾಗತ