ಭಟ್ಕಳ (Bhatkal News): ಸೀರೆಯಿಂದ ನೇಣು ಬಿಗಿದುಕೊಂಡು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತೆಂಗಿನಗುಂಡಿ ಮೂಲದ ಹಾಲಿ ಬೆಳಕೆಯ ಮಾವಿನಗದ್ದೆ ಜಾಜಿಕೇರಿಮನೆಯಲ್ಲಿ ವಾಸವಾಗಿದ್ದ ಲೀಲಾವತಿ ಉಮೇಶ ನಾಯ್ಕ (೪೨) ಸಾವಿಗೆ ಶರಣಾದವರು. ದೂರಿನಲ್ಲಿ ತಿಳಿಸಿರುವಂತೆ, ಇವರು ಕಳೆದ ಒಂದು ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನಿನ್ನೆ ಡಿ.೮ರಂದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ೧ ರಿಂದ ೩ ಗಂಟೆಯ ನಡುವಿನ ಅವಧಿಯಲ್ಲಿ ಅಜ್ಜಿಮನೆಯಲ್ಲಿ ಮೇಲ್ಗಡೆ ಹೋಗುವ ಏಣಿಯ ಗ್ರಿಲ್ಸ್‌ ಪೈಪಗೆ ಸೀರೆಯನ್ನು ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ಮೃತರ ಮಗ ಸಂದೇಶ ದೂರಿನಲ್ಲಿ(complaint) ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು (case registered) ಮುಂದಿನ ಕ್ರಮ ಕೈಗೊಂಡಿದ್ದಾರೆ (Bhatkal News).

ಇದನ್ನೂ ಓದಿ : ಸಮುದ್ರ ಪಾಲಾದ ಭಟ್ಕಳದ ಯುವಕ