ಭಟ್ಕಳ (Bhatkal): ಪ್ರತ್ಯೇಕ ಪ್ರಕರಣದಲ್ಲಿ ಓಸಿ ಆಡಿಸುತ್ತಿದ್ದ ಇಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು (Police custody) ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುಟ್ಟಳ್ಳಿಯ ಗೌರಮ್ಮಜ್ಜಿ ಮನೆಯ ಶಶಿಧರ ಶಂಕರ ನಾಯ್ಕ (೨೯) ಮತ್ತು ಜಾಲಿ ತಲಗೇರಿಯ ಬೊಕ್ಕೆಮನೆಯ ಗಣೇಶ ಶನಿಯಾರ ನಾಯ್ಕ (೨೪) ಆರೋಪಿತರು. ಆರೋಪಿ ಶಶಿಧರ ನಾಯ್ಕ ಅವರನ್ನು ನಿನ್ನೆ ಡಿ.೯ರಂದು ಮಧ್ಯಾಹ್ನ ೧೨.೩೦ರ ಸುಮಾರಿಗೆ ಸಂಶುದ್ದೀನ್ ವೃತ್ತದ ಬಳಿ ೪೭೦೦ ರೂ. ನಗದು ಸಹಿತ ವಶಕ್ಕೆ ಪಡೆಯಲಾಗಿದೆ (Police custody). ಭಟ್ಕಳ ಶಹರ ಠಾಣೆಯ ಪಿಎಸೈ ನವೀನ ಎಸ್.ನಾಯ್ಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಆರೋಪಿ ಶನಿಯಾರ ನಾಯ್ಕ ಅವರನ್ನು ಕೂಡ ಸಂಶುದ್ದೀನ್ ವೃತ್ತದ ಬಳಿ ನಿನ್ನೆ ಡಿ.೯ರಂದು ಸಂಜೆ ೪.೪೫ರ ಸುಮಾರಿಗೆ ೯೫೦ ರೂ. ನಗದು ಸಹಿತ ವಶಕ್ಕೆ ಪಡೆಯಲಾಗಿದೆ. ಪಿಎಸೈ ಸೋಮರಾಜ ಟಿ. ರಾಠೋಡ ಪ್ರಕರಣ ದಾಖಲಿಸಿಕೊಂಡು (case registered) ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕಳೆದುಹೋಗಿದ್ದ ಮೊಬೈಲ್ ಪತ್ತೆ