ಭಟ್ಕಳ (Bhatkal) : ವಿದ್ಯಾರ್ಥಿಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳಾದ ಮರೆವು, ಭಯ, ಆತಂಕ, ಉದ್ವೇಗ, ಮಾನಸಿಕ ಖಿನ್ನತೆ, ಹಿಂಜರಿಕೆ ಮುಂತಾದವುಗಳನ್ನು ನಿರಂತರವಾಗಿ ಅನಾಪಾನಸತಿ ಧ್ಯಾನ (meditation) ಮಾಡುವುದರ ಮೂಲಕ ಹೋಗಲಾಡಿಸಬಹುದು. ಜೊತೆಗೆ ಏಕಾಗ್ರತೆ, ಆತ್ಮಸ್ಥೈರ್ಯ ಮತ್ತು ಆರೋಗ್ಯವನ್ನು ವೃಧ್ದಿಸಿಕೊಳ್ಳಬಹುದೆಂದು ಬೆಂಗಳೂರಿನ (Bengaluru) ಪಿರಾಮಿಡ್ ಸ್ಪಿರಿಚ್ಯುವಲ್ ಸೊಸೈಟಿಯ ದಿವ್ಯಶ್ರೀ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಅವರು ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್‌ ಕಾಲೇಜಿನಲ್ಲಿ ಆಯೋಜಿಸಿದ್ದ “ಸಂಸ್ಕಾರ ಸುಧಾ” ನೈತಿಕ ಮೌಲ್ಯಗಳ ಶಿಕ್ಷಣ ಮಾಲಿಕೆಯ ೯ನೇ ಸಂಚಿಕೆಯಲ್ಲಿ ಅನಾಪಾನಸತಿ ಧ್ಯಾನದ (meditation) ಕುರಿತು ಉಪನ್ಯಾಸ ನೀಡಿದರು. ಪಿರಾಮಿಡ್ ಸ್ಪಿರಿಚ್ಯುವಲ್ ಸೊಸೈಟಿಯ ಕೃಷ್ಣಪ್ಪ ರಾಮನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಅಧ್ಯಕ್ಷತೆ ವಹಿಸಿದ್ದರು. ಪಿರಾಮಿಡ್ ಸ್ಪಿರಿಚ್ಯುವಲ್ ಸೊಸೈಟಿಯ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕ ಶಿವಾನಂದ ಭಟ್ ನಿರೂಪಿಸಿದರು. ವಿದ್ಯಾಂಜಲಿ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಕಾಮತ ವಂದಿಸಿದರು.

ಇದನ್ನೂ ಓದಿ :   ಚಿನ್ನ ಸಾಗಿಸುತ್ತಿದ್ದ ಹೊನ್ನಾವರ ವ್ಯಕ್ತಿ ಬಂಧನ

ಏನಿದು ಅನಾಪಾನಸತಿ ಧ್ಯಾನ?: ಅನಾಪಾನಸತಿ ಧ್ಯಾನವು ಬುದ್ಧನ ಕಾಲದಲ್ಲಿ 2,500 ವರ್ಷಗಳ ಹಿಂದೆ ಹುಟ್ಟಿಕೊಂಡಿತು. ಬುದ್ಧನು ಇದನ್ನು ಮನಸ್ಸನ್ನು ಶಾಂತಗೊಳಿಸಲು, ಆಳವಾದ ಅರಿವನ್ನು ಬೆಳೆಸಲು ಮತ್ತು ಅಂತಿಮವಾಗಿ ವಿಮೋಚನೆಯನ್ನು ಅನುಭವಿಸಲು ಒಂದು ವಿಧಾನವಾಗಿ ಪರಿಚಯಿಸಿದನು. ವೇದಗಳು ಮತ್ತು ಉಪನಿಷತ್ತುಗಳಂತಹ ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿ ಇದರ ಉಲ್ಲೇಖವನ್ನು ಕಾಣಬಹುದು.

ಇದನ್ನೂ ಓದಿ : ೩ ಕೋ.ರೂ. ಡಿಮಾಂಡ್‌ ಇಟ್ಟಿದ್ದ ಉ.ಕ. ಮೂಲದ ಐಆರ್‌ಬಿಎನ್‌ ಕಾನ್‌ಸ್ಟೇಬಲ್‌