ಭಟ್ಕಳ (Bhatkal) : ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು (Kannada Sammelan) ಮಂಡ್ಯದಲ್ಲಿ (Mandya) ಡಿಸೆಂಬರ್ ೨೦ರಿಂದ ೨೨ರ ವರೆಗೆ ಮೂರು ದಿನಗಳ ಕಾಲ ಜನಪದ ಭೀಷ್ಮ ಗೊ.ರು. ಚನ್ನಬಸಪ್ಪರವರ ಅಧ್ಯಕ್ಷತೆಯಲ್ಲಿ ಜರುಗುತ್ತಿದೆ. ಈ ಅಕ್ಷರ ಜಾತ್ರೆಗೆ ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತು ಕೋಶಾಧ್ಯಕ್ಷ, ಸಾಹಿತಿ ಶ್ರೀಧರ ಶೇಟ ಶಿರಾಲಿ ಅವರಿಗೆ ವಿಶೇಷ ಆಮಂತ್ರಿತರಾಗಿ ಆಹ್ವಾನಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತು ಇಬ್ಬರಿಗೂ ವೈಯಕ್ತಿಕ ಪತ್ರ ಮತ್ತು ಆಹ್ವಾನ ಪತ್ರಿಕೆಗಳನ್ನು ರಾಜ್ಯಾಧ್ಯಕ್ಷ ನಾಡೋಜ (Nadoja) ಡಾ.ಮಹೇಶ ಜೋಶಿ ಕಳುಹಿಸಿದ್ದಾರೆ. ಮೂವತ್ತು ವರ್ಷಗಳ ನಂತರ ಮಂಡ್ಯದಲ್ಲಿ ನಡೆಯುತ್ತಿರುವ ಮೂರನೇ ಸಮ್ಮೇಳನ ಇದಾಗಿದೆ. ಕರ್ನಾಟಕದ (Karnataka) ನಾಮಕರಣವಾದ ಸುವರ್ಣ ಮಹೋತ್ಸವ ವರ್ಷಗಳ ಹಿನ್ನೆಲೆಯಲ್ಲಿ ವಿಶಿಷ್ಟವಾಗಿದೆ. ಸಮ್ಮೇಳನಕ್ಕೆ (Kannada Sammelan) ತಮ್ಮನ್ನು ವಿಶೇಷ ಆಹ್ವಾನಿತರನ್ನಾಗಿ ಆಮಂತ್ರಿಸಲು ಕನ್ನಡ ಸಾಹಿತ್ಯ ಪರಿಷತ್ತು ಹರ್ಷಿಸುತ್ತದೆ ಎಂದು ಪತ್ರ ಬರೆದು ಮೂರು ದಿನಗಳೂ ತಮ್ಮೊಂದಿಗಿದ್ದು ಸಮ್ಮೇಳನವನ್ನು ಯಶಸ್ವಿಯಾಗಿಸಲು ಕೋರಿದ್ದಾರೆ.
ಇದನ್ನೂ ಓದಿ: ಡಿ. ೩೧ರಂದು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ
ಇದು ಸಾಹಿತ್ಯ ಸಂಘಟನೆಯಲ್ಲಿ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇಬ್ಬರಿಗೂ ಸಂದ ಗೌರವವಾಗಿದೆ ಎಂದು ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿಯ ಸದಸ್ಯರು, ಸಾಹಿತಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಟ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಇವರು…