ಭಟ್ಕಳ (Bhatkal) : ಭಟ್ಕಳ ಎಜ್ಯುಕೇಶನ್‌ ಟ್ರಸ್ಟ್‌, ಕಲಾ ಸೌರಭ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ್‌ ಫೌಂಡೇಶನ್‌ ಅವರಿಂದ ಡಿ.೨೨ರಂದು ರವಿವಾರ ಸಂಗೀತೋತ್ಸವ (music festival) ಆಯೋಜಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಬಂದರ ರಸ್ತೆಯಲ್ಲಿರುವ ದಿ ನ್ಯೂ ಇಂಗ್ಲೀಷ್‌ ಸ್ಕೂಲ್‌ ಆವರಣದಲ್ಲಿರುವ ಕಮಲಾವತಿ ರಾಮನಾಥ ಶಾನಭಾಗ ಕಲಾಮಂಟಪದಲ್ಲಿ ಸಂಜೆ ೫ರಿಂದ ರಾತ್ರಿ ೮ರವರೆಗೆ ಕಾರ್ಯಕ್ರಮ ನಡೆಯಲಿದೆ. ಸಂಗೀತೋತ್ಸವದಲ್ಲಿ (music festival) ಹಿಂದೂಸ್ತಾನಿ ಸಂಗೀತ (Hindustani Classical Music) ಮತ್ತು ಭಜನಾ ಕಾರ್ಯಕ್ರಮ ಇರಲಿದ್ದು, ಮೈಸೂರಿನ (Mysuru) ಗಾಯಕಿ ಜೆ.ಪೂರ್ವಿ ನಿರಂಜನ ಗಾಯನ ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ತಬಲಾದಲ್ಲಿ (Tabla) ಶಿರಾಲಿಯ ಡಾ.ಸಂತೋಷ ಚಂದಾವರಕರ ಮತ್ತು ಹಾರ್ಮೋನಿಯಂನಲ್ಲಿ (Harmonium) ಕುಮಟಾ (Kumta) ತಾಲೂಕಿನ ಕೂಜಳ್ಳಿಯ ವಿದ್ವಾನ್‌ ಗೌರೀಶ ಯಾಜಿ ಸಾಥ್‌ ನೀಡಲಿದ್ದಾರೆ.

ಇದನ್ನೂ ಓದಿ :  ಭಗವದ್ಗೀತಾ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಗಾಯಕಿಯ ಪರಿಚಯ : ಗಾಯಕಿ ಜೆ. ಪೂರ್ವಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಅರಳುತ್ತಿರುವ ಯುವ ಪ್ರತಿಭೆ. ನಮ್ಮ ದೇಶದ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಅವರ ಮಹೋನ್ನತ ಸಂಗೀತ ಪರಂಪರೆಗೆ ಸೇರಿದ್ದವಳಾಗಿದ್ದಾರೆ. ಇವರು ನಾಡಿನ ಹೆಸರಾಂತ ಗಾಯಕರಾದ ತನ್ನ ತಂದೆ ಪಂ. ಜೆ. ನಿರಂಜನ ಹಾಗೂ ಪುಣೆಯ ಪಂ. ಉತ್ತಮಕುಮಾರ ಚಿಗರಿಯವರಲ್ಲಿ ಗ್ವಾಲಿಯರ್- ಕಿರಾಣಾ ಘರಾಣೆ ಶೈಲಿಯ ಗಾಯನದ ತರಬೇತಿ ಪಡೆಯುತ್ತಿದ್ದಾರೆ.