ಭಟ್ಕಳ (Bhatkal): ಅಂದರ್‌-ಬಾಹರ್‌ ಇಸ್ಪೀಟ್‌ ಜೂಗರಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ (Police raid) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ೭ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರಲ್ಲಿ ಮೂವರು ಭಟ್ಕಳ ತಾಲೂಕಿನವರಾಗಿದ್ದರೆ, ನಾಲ್ವರು ಪಕ್ಕದ ಉಡುಪಿ (Udupi) ಜಿಲ್ಲೆಯ ಬೈಂದೂರು (Byndoor) ತಾಲೂಕಿನವರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಂದೂರಿನ ಕಾಲೇಜು ರಸ್ತೆಯ ಬದ್ರಿಯಾ ಹೌಸ್‌ ನಿವಾಸಿ ಬಶೀರ್‌ ಅಹ್ಮದ್‌  ಅಬ್ದುಲ್‌ ಹಮೀದ್‌ (೪೩), ಭಟ್ಕಳ ತಾಲೂಕಿನ ಕರಿಕಲ್‌ ಗ್ರಾಮದ ಹೊನ್ನಯ್ಯನ ಮನೆಯ ನಾಗರಾಜ ದುರ್ಗಪ್ಪ ಮೊಗೇರ (೨೫), ಬಂದರ ಮಾವಿನಕುರ್ವಾದ ಪ್ರದೀಪ ಮಾದೇವ ಮೊಗೇರ (೨೪), ಹೆಬಳೆ ಹೆರ್ತಾರ ನಿವಾಸಿ ಜಯರಾಜ ಪರಮೇಶ್ವರ ಮೊಗೇರ (೨೪), ಬೈಂದೂರಿನ ಶನೇಶ್ವರ ದೇವಸ್ಥಾನ ಹತ್ತಿರದ ನಿವಾಸಿಗಳಾದ ಪ್ರವೀಣ ಮಂಜು ದೇವಾಡಿಗ (೨೯) ಮತ್ತು ಮಹಾದೇವ ಮಂಜು ದೇವಾಡಿಗ (೩೩) ಹಾಗೂ ಶಿರೂರಿನ ಇಜಾಜ್‌ ನೂರುಲ್‌ ಮೊಮಿನ್‌ ಮೊಹಿದ್ದೀನ್‌ ಸಾಹೇಬ್‌ (೩೫) ಆರೋಪಿಗಳು.

ಇದನ್ನೂ ಓದಿ :  ಭಟ್ಕಳದಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿ

ಆರೋಪಿಗಳು ಇಂದು ಡಿ.೨೦ರಂದು ಮಧ್ಯಾಹ್ನ ೨.೧೦ರ ಸುಮಾರಿಗೆ ಗೊರಟೆ ಶರಜ್ಜಿಮನೆ ರಸ್ತೆಯ ಅರಣ್ಯ ಪ್ರದೇಶದಲ್ಲಿ ಅಂದರ್‌ ಬಾಹರ್‌ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ (Police raid). ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ಭರಮಪ್ಪ ಬೆಳಗಲಿ ಪ್ರಕರಣ ದಾಖಲಿಸಿಕೊಂಡು (complaint) ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ : ಡಿ.೨೨ರಂದು ಭಟ್ಕಳದಲ್ಲಿ ಸಂಗೀತೋತ್ಸವ