ಭಟ್ಕಳ (Bhatkal) : ಪಡಿತರ ಅಕ್ಕಿ (Ration Rice) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಆರೋಪಿ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಪುರವರ್ಗದ ಗಣೇಶ ನಗರ ನಿವಾಸಿ ನಜೀರ ಅಹ್ಮದ್ ಯೂಸುಫ್ ಶೇಖ (೫೫) ಆರೋಪಿ. ಗುಜರಿ ವ್ಯಾಪಾರಿಯಾಗಿರುವ ಇವರು ಪಡಿತರ ಅಕ್ಕಿ ಇರುವ ಮೂಟೆಗಳನ್ನು (Ration Rice) ಓಮಿನಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಶುಕ್ರವಾರ ಬೆಳಿಗ್ಗೆ ೧೦.೪೫ರ ಸುಮಾರಿಗೆ ಭಟ್ಕಳ ಅರ್ಬನ್ ಬ್ಯಾಂಕ್ ಎದುರುಗಡೆ ಹೂವಿನ ಚೌಕದ ಕಡೆ ಹೋಗುತ್ತಿದ್ದ ಓಮಿನಿ ವಾಹನವನ್ನು ತಡೆದು ಪರಿಶೀಲಿಸಲಾಗಿತ್ತು. ವಾಹನದಲ್ಲಿ ಸುಮಾರು ೧೭೬೮೦ ರೂ. ಮೌಲ್ಯದ ೫೨೦ ಕೆ.ಜಿ. ತೂಕದ ಅಕ್ಕಿ ಇರುವ ೧೫ ಮೂಟೆಗಳು ಪತ್ತೆಯಾಗಿವೆ. ಈ ಕುರಿತು ಆಹಾರ ನಿರೀಕ್ಷಕ ಶಶಿಧರ ಭೀಮಣ್ಣ ಹೊನ್ನಳ್ಳಿ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಕೋಲಾರಕ್ಕೆ ಪ್ರಯಾಣ ಬೆಳೆಸಿದ ಶಾಲಾ ಮಕ್ಕಳು