ಭಟ್ಕಳ (Bhatkal) : ಹಿಂಬದಿಯಿಂದ ಟಿಪ್ಪರ್‌ (Tipper) ಲಾರಿ ಡಿಕ್ಕಿ ಹೊಡೆದು ಟಾಟಾ ಏಸ್‌ (TATA ACE) ವಾಹನದಲ್ಲಿದ್ದ ಮಹಿಳೆ ಗಾಯಗೊಂಡ (woman injured) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ನೀರಕಂಠ ಕ್ರಾಸ್‌ ಹತ್ತಿರ ಡಿ.೨೦ರಂದು ಬೆಳಿಗ್ಗೆ ೯.೩೦ರ ಸುಮಾರಿಗೆ ಈ ಘಟನೆ ನಡೆದಿದೆ. ಭಟ್ಕಳ ಕಡೆಯಿಂದ ಮುರ್ಡೇಶ್ವರ (Murdeshwar) ಕಡೆಗೆ ಹೋಗುತ್ತಿದ್ದ ಭಟ್ಕಳ ಶಹರದ ಡಿ.ಪಿ.ಕಾಲೋನಿಯ ಹನುಮಂತ ಮಂಜಪ್ಪ ರೇಣಕೆ (೨೩) ಅವರ ಟಾಟಾ ಏಸ್‌ ವಾಹನಕ್ಕೆ ಭಾರತ್‌ ಬೆಂಜ್‌ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್‌ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ : Editorial/ ಗೋವುಗಳ ರಕ್ಷಣೆ ಆದ್ಯ ಕರ್ತವ್ಯವಾಗಲಿ

ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಹೋಗುತ್ತಿದ್ದಾಗ ಹಂಪ್‌ ಕಂಡಿದ್ದರಿಂದ ಟಾಟಾ ಏಸ್‌ ವಾಹನದ ಚಾಲಕ ಬ್ರೇಕ್‌ ಹಾಕಿದ್ದರು. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ.  ಟಾಟಾ ಏಸ್‌ ವಾಹನದಲ್ಲಿ ಮುಂದೆ ಕುಳಿತಿದ್ದ ಹನುಮಂತ ಅವರ ಅಕ್ಕ ಸರೋಜಾ ಮಂಜಪ್ಪ ರೇಣುಕೆ ಗಾಯಗೊಂಡಿದ್ದಾರೆ (woman injured). ಟಿಪ್ಪರ್‌ ಲಾರಿ ಚಾಲಕ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasugur) ತಾಲೂಕಿನ ದೇಸಾಯಿಭೋಗಾಪುರ ತಾಂಡಾದ ವೆಂಕಟೇಶ ಶಂಕರಪ್ಪ (೩೦) ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ.

ಇದನ್ನೂ ಓದಿ :  ಭಟ್ಕಳದಲ್ಲಿ ಪಡಿತರ ಅಕ್ಕಿ ಸಾಗಾಟ ಪತ್ತೆ