ಕೊಪ್ಪಳ (Koppal) : ಶೈಕ್ಷಣಿಕ ಪ್ರವಾಸದ (School tour) ವೇಳೆ ಭಟ್ಕಳದಲ್ಲಿ ತೆರೆದ ಬಾವಿಗೆ ಬಿದ್ದು ೧೩ ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಸೇರಿದಂತೆ ಸರಕಾರಿ ಶಾಲೆಯ ಆರು ಶಿಕ್ಷಕರನ್ನು ಅಮಾನತು (suspend) ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ವಿದ್ಯಾರ್ಥಿ ನಿರುಪಾದಿ ಹರಿಜನ ಕೊಪ್ಪಳ ಜಿಲ್ಲೆ ಯಲಬುರ್ಗಾ (Yelburga) ತಾಲೂಕಿನ ಗಾಣದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ೧೧ ಜನ ಶಾಲಾ ಶಿಕ್ಷಕರು ಸುಮಾರು ೧೦೦ ವಿದ್ಯಾರ್ಥಿಗಳನ್ನು ಎರಡು ಬಸ್‌ಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದಿದ್ದರು. ಪ್ರವಾಸದ ವೇಳೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ಶುಕ್ರವಾರ ರಾತ್ರಿ ಭಟ್ಕಳ ಶಹರದಲ್ಲಿ ಬಸ್‌ ನಿಲ್ಲಿಸಿದ್ದಾಗ ಮೂತ್ರ ವಿಸರ್ಜನೆಗೆ ಹೋಗಿದ್ದ ೮ನೇ ತರಗತಿ ವಿದ್ಯಾರ್ಥಿ ನಿರುಪಾದಿ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ್ದ.

ಇದನ್ನೂ ಓದಿ :  ಪ್ರವಾಸಕ್ಕೆಂದು ಬಂದಿದ್ದ ಬಾಲಕ ಬಾವಿಗೆ ಬಿದ್ದು ಸಾವು

ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ಶ್ರೀಶೈಲ ಬಿರಾದಾರ ಅವರು ಮುಖ್ಯಶಿಕ್ಷಕರು ಸೇರಿದಂತೆ ಆರು ಶಿಕ್ಷಕರನ್ನು ಅಮಾನತುಗೊಳಿಸಿ (suspend) ಆದೇಶ ಹೊರಡಿಸಿದ್ದಾರೆ. ಮುಖ್ಯಶಿಕ್ಷಕ ಹನುಮೇಶ ಬೆಲ್ಲದ, ಸಹಾಯಕ ಶಿಕ್ಷಕರಾದ ಶಿವಕುಮಾರ ಅವಸಂಗರದ, ನಾಗರಾಜ ಶೆಟ್ಟರ, ಅಮರೇಶ ಬಳ್ಳಾರಿ, ಈರಮ್ಮ ಬಡಿಗೇರ, ಪದ್ಮಾವತಿ ಪವಾರ ಅವರನ್ನು ಅಮಾನತುಗೊಳಿಸಲಾಗಿದೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ ೫ ಲಕ್ಷ ಪರಿಹಾರ ನೀಡಿದೆ.

ವಿಡಿಯೋ ಸಹಿತ ಇದನ್ನೂ ಓದಿ : protest/ ಶಿಕ್ಷಕರನ್ನು ಸ್ಥಳಕ್ಕೆ ಕರೆಯಿಸುವಂತೆ ಆಗ್ರಹ