ಭಟ್ಕಳ (Bhatkal) : ಇಲ್ಲಿನ ತಾಲೂಕು ಪಂಚಾಯತ ಕಚೇರಿ ಎದುರಿಗೆ ಇದ್ದ ಹಣ್ಣಿನ ಅಂಗಡಿಯೊಂದು (Fruit stall) ಸಂಪೂರ್ಣ ಬೆಂಕಿಗಾಹುತಿಯಾಗಿದೆ (Fire accident). ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡು ಗ್ರಾಮದ ಕೋಟೆಮನೆಯ ರಾಮಚಂದ್ರ ನಾಯ್ಕ ಎಂಬುವವರಿಗೆ ಸೇರಿದ ತಾತ್ಕಾಲಿಕ ಹಣ್ಣಿನ ಅಂಗಡಿ ಇದಾಗಿತ್ತು. ಡಿ.೨೬ರ ನಸುಕಿನ ಜಾವ ೨.೩೦ ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆ ಅಂಗಡಿ ಸಂಪೂರ್ಣ ನಾಮಾವಶೇಷಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಣ್ಣಿನ ಅಂಗಡಿಯ ಮಾಲೀಕನ ಮೇಲಿನ ದ್ವೇಷದಿಂದ ಹಣ್ಣಿನ ಅಂಗಡಿಗೆ (Fruit stall) ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಕುರಿತು ಭಟ್ಕಳ ಶಹರ ಠಾಣೆಯಲ್ಲಿ ಅಂಗಡಿ ಮಾಲೀಕ ರಾಮಚಂದ್ರ ನಾಯ್ಕ ದೂರು (Complaint) ದಾಖಲಿಸಿದ್ದಾರೆ. ಇವರು ಇಲ್ಲಿನ ತಾಲೂಕಾ ಪಂಚಾಯತ ಮುಂಭಾಗದಲ್ಲಿ ತಾತ್ಕಾಲಿಕ ಹೆಣ್ಣಿನ ಅಂಗಡಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ತಮ್ಮ ಮೇಲಿನ ದ್ವೇಷದಿಂದಾಗಿ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವುದರಿಂದ ಹಣ್ಣಿನ ಅಂಗಡಿ ಹಾಗೂ ಅಂಗಡಿಯಲ್ಲಿದ್ದ ಇತರೆ ಸಾಮಾನುಗಳು ಸೇರಿ ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : Breaking News/ ಫ್ಯಾಮಿಲಿ ರೆಸ್ಟೋರೆಂಟನಲ್ಲಿ ಅಗ್ನಿ ಅವಘಡ
ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ. ಹಿಂದೂ ಸಂಘಟನೆಗಳು ಕೂಡ ಇದೊಂದು ದುಷ್ಕೃತ್ಯ ಎಂದು ಶಂಕೆ ವ್ಯಕ್ತಪಡಿಸಿದೆ. ಈ ಕುರಿತು ಡಿವೈಎಸ್ಪಿ ಮತ್ತು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿರುವ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಇತ್ತೀಚಿನ ದಿನಗಳಲ್ಲಿ ಅನುಮಾನಸ್ಪದ ಘಟನೆಗಳು ನಡೆಯುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
ಅಂಗಡಿ ಬೆಂಕಿಗಾಹುತಿಯಾದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ , ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : memorandum/ ಭಟ್ಕಳದಲ್ಲಿ ಹೆಚ್ಚುತ್ತಿದೆ ದುಷ್ಕೃತ್ಯಗಳು