ಹೊನ್ನಾವರ (Honnavar): ಕೆಎಸ್‌ಆರ್‌ಟಿಸಿ (KSRTC) ಬಸ್‌ ಡಿಕ್ಕಿಯಾಗಿ (Road Accident) ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಇಂದು ಡಿ.೩೧ರಂದು ನಸುಕಿನ ಜಾವ  ಶರಾವತಿ ನದಿ (Sharavati River) ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ(೩೪), ಸಂಶಿಯ ಗೌರೀಶ ನಾಯ್ಕ (೨೫) ಮತ್ತು ಖರ್ವಾದ ರಮೇಶ ನಾಯ್ಕ (೨೨) ಮೃತಪಟ್ಟ ದುರ್ದೈವಿಗಳು. ವಿಜಯಪುರದಿಂದ (Vijayapura) ಮಂಗಳೂರಿಗೆ (Mangaluru) ತೆರಳುತ್ತಿದ್ದ ಸಾರಿಗೆ ಬಸ್‌ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭಿವಿಸಿದೆ. ಹೊನ್ನಾವರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ : ಗ್ರಾ.ಪಂ.ಸದಸ್ಯನಿಗೆ ಧರ್ಮದೇಟು