ಭಟ್ಕಳ (Bhatkal) : ಭಟ್ಕಳದಿಂದ ಹೊನ್ನಾವರದ (Honnavar) ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಮುರುಡೇಶ್ವರ (Murudeshwar) ಬಸ್ತಿಮಕ್ಕಿ ಸಮೀಪ ಮೋಟಾರ್ ಬೈಕ್‌ಗೆ ಬಡಿದ (accident) ಪರಿಣಾಮವಾಗಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗಾಯಗೊಂಡವರನ್ನು ಹೊನ್ನಾವರ ತಾಲ್ಲೂಕಿನ ಕೊಡಾಣಿ ಬೆಳ್ಳಿಮಕ್ಕಿಯ ನಿವಾಸಿ ರೋನಿ ಅಂತೋನ್ ಡಯಾಸ್ (40) ಎಂದು ಗುರುತಿಸಲಾಗಿದೆ. ಕಾರು ಚಾಲಕ ಮುಕ್ತಿಯಾರ್ ಅಹ್ಮದ್ ಬಾಬಾಲಾಲ್ ದೇಸಾಯಿ ವಿರುದ್ಧ ದೂರು (complaint) ದಾಖಲಾಗಿದೆ. ಕಾರನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ದುಡುಕಿನಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ದೂರಲಾಗಿದೆ.

ಇದನ್ನೂ ಓದಿ : ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರು ಗಂಭೀರ

ರಾಷ್ಟ್ರೀಯ ಹೆದ್ದಾರಿಯ ಮುರ್ಡೇಶ್ವರದ (Murdeshwar)  ಬಸ್ತಿ ಮಕ್ಕಿ ಕ್ರಾಸ್ ಹತ್ತಿರ ನ್ಯಾಶನಲ್ ಕಾಲೋನಿ ಕಡೆಯಿಂದ ಮುಖ್ಯ ರಸ್ತೆಗೆ ಬರಲು ರಸ್ತೆಯ ಅಂಚಿನಲ್ಲಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದೆ (Accident). ಸ್ಕೂಟಿ ಸವಾರನ ತಲೆಗೆ, ಎರಡೂ ಕಾಲುಗಳಿಗೆ ಮತ್ತು ಮೈ ಕೈಗೆ ಗಂಭೀರ ಗಾಯವಾಗಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : Na Dsouza/ ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರ