ಭಟ್ಕಳ (Bhatkal) : ಭಟ್ಕಳ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sammelan) ಸರ್ವಾಧ್ಯಕ್ಷ, ಹಿರಿಯ ಸಾಹಿತಿ ನಾರಾಯಣ ಯಾಜೆ ತಮ್ಮ ಮಡದಿ, ತಾಯಿಯನ್ನು ನೆನೆದು ಭಾವುಕರಾದರು..
ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಯೂಟ್ಯೂಬ್ ಚಾನೆಲ್ ಫಾಲೋವ್ ಮಾಡಿ
ಕನ್ನಡ ಸಾಹಿತ್ಯ ಸಮ್ಮೇಳನದ (Kannada Sammelan) ಅಧ್ಯಕ್ಷರ ಭಾಷಣ ಮಾಡುತ್ತಿದ್ದ ಅವರು, ಏಕಾಂಗಿಯಾಗಿ ಕಷ್ಟವಾದರೂ ತಮ್ಮ ತಾಯಿ ಮಕ್ಕಳನ್ನು ಸಾಕಿ ಸಲುಹಿದ್ದನ್ನು ನೆನೆದು ಭಾವುಕರಾದರು. ಅವರ ಬಗ್ಗೆ ಹೇಳುವಾಗ ಮಾತು ತಡವರಿಸಿತು. ನನ್ನಮ್ಮ ಕೇರಳದ ಕಾಟಕುಕ್ಕೆಯ ಕೋಡಮಾಡು ಗ್ರಾಮದವರು. ಅನಕ್ಷರಸ್ಥೆ, ಅಶಿಕ್ಷಿತಳಾಗಿದ್ದರೂ ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನೆಲ್ಲ ತಿಳಿದಿದ್ದರು. ನನ್ನಪ್ಪಯ್ಯ ಮತ್ತು ಅಮ್ಮನ ಏಳು ಜನ ಮಕ್ಕಳಲ್ಲಿ ನಾನು ಆರನೇಯವನು. ಅಪ್ಪಯ್ಯ 1954ರಲ್ಲಿ ತೀರಿಕೊಂಡಾಗ ನನಗೆ ಮೂರುವರೆ ವರ್ಷ. ಅಪ್ಪಯ್ಯನ ನಂತರ ಅಮ್ಮ ಏಕಾಂಗಿಯಾಗಿ ನಮ್ಮನ್ನೆಲ್ಲ ಸಾಕುವುದು ಕಷ್ಟವಾದರೂ ಧೈರ್ಯಗೆಡದೆ ನಮ್ಮನ್ನೆಲ್ಲ ಸಾಕಿದ ಪರಿ ನೆನಪಿಸಿಕೊಂಡರೆ ಅಮ್ಮನಿಗೆ ಅಮ್ಮನೇ ಸಾಟಿ ಎನ್ನಿಸುತ್ತದೆ ಎಂದು ಹೇಳಿದರು.
ವಿಡಿಯೋ ಸಹಿತ ಿದನ್ನೂ ಓದಿ : Na dsouza/ ನಾ ಡಿಸೋಜರಿಗೆ ತವರಿನ ಶ್ರದ್ಧಾಂಜಲಿ
ಅಮ್ಮನ ಬಗ್ಗೆ ಹೇಳುವಾಗ ಮಾತು ತಡವರಿಸಿತು. ಹುಲ್ಲಾಗು ಬೆಟ್ಟದಡಿ…. ಎಂಬ ಕಗ್ಗವನ್ನು ವಾಚಿಸಿದ ಅವರು, ಕನ್ನಡದ ಭಗವದ್ಗೀತೆಯಂತಿರುವ ಮಂಕುತಿಮ್ಮನ ಕಗ್ಗವನ್ನು ಡಿವಿಜಿ ಅವರು ಅಮ್ಮನ ಪಾಡನ್ನು ನೋಡಿ, ಅಮ್ಮನಿಗಾಗಿಯೇ ಬರೆದಂತಿದೆ ಎಂದು ಈ ನಾರಾಯಣ ಯಾಜಿ ಹೇಳಿದರು.
ಇದನ್ನೂ ಓದಿ : Mankal Vaidya/ ಅಧಿಕಾರಿಗಳ ಮೇಲೆ ಕಾನೂನು ಕ್ರಮದ ಎಚ್ಚರಿಕೆ
ಅನಕ್ಷರಸ್ಥಳಾಗಿದ್ದರೂ ನನ್ನಮ್ಮ ಮಕ್ಕಳಾದ ನಮ್ಮನ್ನೆಲ್ಲ ಚೆನ್ನಾಗಿ ಸಾಕಿದಳು. ಸಂಜೆಯ ಹೊತ್ತು ದೇವ್ಥಾನದ ಬಳಿ ನಡೆಯುತ್ತಿದ್ದ ಯಕ್ಷಗಾನ, ಹರಿಕಥೆಗಳಿಗೆ ಅವಳೊಟ್ಟಿಗೆ ಕರೆದೊಯ್ಯುತ್ತಿದ್ದಳು. ಹಲವು ಮೇಳಗಳ ಯಕ್ಷಗಾನ ನೋಡುವ, ಹರಿಕಥೆಗಳನ್ನು ಕೇಳಿ ಆಸ್ವಾದಿಸುವ, ಆನಂದಿಸುವ ಭಾಗ್ಯ ನನ್ನದಾಯಿತು. ನನ್ನ ಯೌವನದಲ್ಲಿ ಕೆಲವು ದಿನ ನಾನು ಮನೆಯಲ್ಲೇ ಕುಳಿತು ಸಂಜೆಯ ಹೊತ್ತು ನಮ್ಮ ಮನೆಯವರೆಲ್ಲರ ಜತೆ ಹರಿಕಥೆ ಮಾಡಿದ್ದೂ ಉಂಟು. ಭಜನೆಯಂತೂ ಈಗಲೂ ತಿಂಡಿ, ಊಟ, ನಿದ್ರೆಯಂತೆ ದಿನದಿನದ ಕೆಲಸವೇ ಆಗಿದೆ. ಎಲ್ಲ ಈ ನನ್ನಮ್ಮನ ಪ್ರಭಾವ ಎಂದು ಉದ್ಘರಿಸಿದರು.
ಇದನ್ನೂ ಓದಿ : ಖಾಸಗಿ ಬಸ್ ಹರಿದು ವೃದ್ಧೆ ದುರ್ಮರಣ
ನನ್ನಮ್ಮ ನಮಗಾಗಿ ತರಿಸುತ್ತಿದ್ದ ವೃತ್ತ ಪತ್ರಿಕೆ, ಸುಧಾದಂತಹ ವಾರಪತ್ರಿಕೆಗಳನ್ನು ನಾವೇ ನನ್ನಮ್ಮನಿಗೆ ಖುಷಿಯಿಂದ ಓದಿ ಹೇಳುತ್ತಿದ್ದೆವು. ಎಂ.ಕೆ.ಇಂದಿರಾ ಅವರ ಸಣ್ಣಕತೆ ವಾತಾಪಿ ಜೀರ್ಣೋಭವ ತುಂಬ ಮೆಚ್ಚಿಕೊಂಡಿದ್ದಳು ಅಮ್ಮ. ಬಹುಶಃ ನನ್ನ ಈ ತರಹದ ವಾಚನವೇ ನನ್ನಲ್ಲಿ ಕನ್ನಡ ಸಾಹಿತ್ಯದ ಬೀಜ ಬಿತ್ತಿರಲೂಬಹುದು ಎಂದು ಹೇಳಿದರು.
ಇದನ್ನೂ ಓದಿ : ಗ್ರಾಮ ಲೆಕ್ಕಾಧಿಕಾರಿಗೆ ಗಾಯ
ಇದಾದ ನಂತರ ತಮ್ಮ ದಿವಂಗತ ಹೆಂಡತಿಯನ್ನು ನೆನಪಿಸಿಕೊಂಡಾಗಲೂ ನಾರಾಯಣ ಯಾಜಿಯವರ ಕಣ್ಣು ತೇವಗೊಂಡವು. ಲಿಖಿತ ಭಾಷಣ ಓದಲು ತಡವರಿಸಿದರು. ನನ್ನ ಬರವಣಿಗೆಗೆ ಸದಾ ಒತ್ತಾಸೆಯಾಗಿ ನಿಂತು ತಾನೂ ಬರೆದು, ನನ್ನ ಕೈಯಲ್ಲೂ ಬರೆಸಿ ಪ್ರೀತಿಯಿಂದ ಪ್ರಾಮಾಣಿಕವಾಗಿ ಸಹಕರಿಸಿದವಳು ನನ್ನವಳು, ದಿವಂತಹ ಜಯಾ ಯಾಜಿ ಶಿರಾಲಿ. ಸ್ವತಃ ರಾಜ್ಯಮಟ್ಟದ ಹಿರಿಯ ಸಾಧಕಿಯಾಗಿದ್ದು, ಎಳ್ಳಷ್ಟೂ ಗರ್ವವಿಲ್ಲದ ಸದಾ ಶುಭ್ರ ಸ್ವಚ್ಛವಾಗಿ ಕಾಯಾ ವಾಚಾ ಮನಸಾ ಇರುತ್ತಿದ್ದ ಆಕೆಯನ್ನು ಕಳಕೊಂಡ ನಾನೀಗ ಏಕಾಂಗಿಯಾಗಿ, ತಬ್ಬಲಿಯಾಗಿದ್ದೇನೆ ಎಂದು ಭಾವುಕರಾದರು.
ಇದನ್ನೂ ಓದಿ : ಮುರುಡೇಶ್ವರ, ಇಡಗುಂಜಿಗೆ ಪೂಜಾ ಗಾಂಧಿ ಭೇಟಿ