ಭಟ್ಕಳ (Bhatkal) : ಮಾವಳ್ಳಿ-೦೨ ಗ್ರಾಮ ಪಂಚಾಯತಗೆ ಸೇರಿದ ಕಟ್ಟಡ ಕೆಡವಿದ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ಪಂಚಾಯತ ಅಭಿವೃದ್ಧಿ ಅಧಿಕಾರಿ (PDO) ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರದ (Murudeshwar) ಶ್ರೀ ಸಿದ್ದಿವಿನಾಯಕ ಐಸ್‌ಕ್ರೀಂ ಪಾರ್ಲರ್‌ನ  ವೆಂಕಟದಾಸ ಮಾಧವ ಕಾಮತ ವಿರುದ್ಧ ದೂರು (Complaint) ದಾಖಲಾಗಿದೆ. ಇವರು ಮಾವಳ್ಳಿ-೦೨ರ ಸರ್ವೆ ನಂಬರ್‌ ೨೩ರಲ್ಲಿನ ಗ್ರಾಮ ಪಂಚಾಯತ ಮಾಲೀಕತ್ವದ ಅಂಗಡಿ ಮಳಿಗೆ ಸಂಖ್ಯೆ -೧೪ನ್ನು ಪಂಚಾಯತ ಅನುಮತಿ ಇಲ್ಲದೆ ಭಾಗಶಃ ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಡಿ.೩೦ರಂದು ಸಂಜೆ ೫ ಗಂಟೆಗೆ ಕಟ್ಟಡವನ್ನು ನಿಯಮ ಉಲ್ಲಂಘಿಸಿ  ತೆಗೆದುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ವೃದ್ಧನಿಗೆ ಕಂಟೇನರ್ ಲಾರಿ ಡಿಕ್ಕಿ

ಈ ಅಂಗಡಿ ಮಳಿಗೆಯ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿಯೇ ಗ್ರಾಮ ಪಂಚಾಯತ ಆಸ್ತಿಯನ್ನು ಭಾಗಶಃ ಕೆಡವಿದ್ದಾರೆ. ಮುಂದೆ ಈ ಕಟ್ಟಡದ ಯಾವುದೇ ಮಾರ್ಪಾಡು ಮಾಡದಂತೆ ಆರೋಪಿ ವಿರುದ್ಧ ಪಿಡಿಒ ಅಪರ್ಣಾ ನಾಯ್ಕ ಅವರು ಮುರ್ಡೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರು ಅರ್ಜಿ ಸ್ವೀಕರಿಸಿದ ಪೊಲೀಸರು ಎನ್‌ಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯವು ಎಫ್‌ಐಆರ್‌ (FIR) ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಿದಂತೆ, ಇದೀಗ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Kannada Sammelan/ ಅಮ್ಮ, ಮಡದಿಯನ್ನು ನೆನೆದು ಭಾವುಕರಾದರು