ಭಟ್ಕಳ (Bhatkal) : Kannada Sammelan/ ಭಟ್ಕಳದ ಭೀಮಾನದಿಗೆ ಕಡವಿನಕಟ್ಟೆಯಲ್ಲಿ ಕಟ್ಟಿದ ಅಣೆಕಟ್ಟಿನಲ್ಲಿ ಸುಮಾರು ಎರಡೂವರೆ ವರ್ಷಗಳಿಂದ ಪುನಃ ಹೂಳು ತುಂಬಿ ನೀರಿನ ಪರಿಮಾಣ ಕಡಿಮೆಯಾಗಿ, ಶಿರಾಲಿ, ಭಟಕಳ ಇತ್ಯಾದಿ ಊರು, ಗದ್ದೆಗಳಿಗೆ ನೀರಾವರಿಗೆ ತೀರಾ ತೊಂದರೆಯಾಗಿದೆ ಎಂದು ಹಿರಿಯ ಸಾಹಿತಿ ನಾರಾಯಣ ಯಾಜಿ ಆತಂಕ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳ ತಾಲೂಕಿನ ಶಿರಾಲಿ ಅಳ್ವೆಕೋಡಿಯಲ್ಲಿ ನಡೆದ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sammelan)  ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು. ಬೇಸಿಗೆಯಲ್ಲಿ ಗದ್ದೆಗೆ ನೀರು ಬೇಕಾದಾಗ ಅಣೆಕಟ್ಟಿನಲ್ಲಿ ನೀರಿರುವುದಿಲ್ಲ. ಇದರಿಂದಾಗಿ ತಾವು ಕಷ್ಟ ಪಟ್ಟು ಬೆಳೆದ ಬೆಳೆಗಳಿಗೆ ತೊಂದರೆಯಾಗುತ್ತಿದೆ. ಈ ವರ್ಷ ನೀರಿಲ್ಲದೆ ಕೆಲವೆಡೆ ಸುಗ್ಗಿಯನ್ನೂ ಮಾಡಿಲ್ಲ. ಆದಷ್ಟೂ ಬೇಗ ಈ ಆಣೆಕಟ್ಟಿನ ಹೂಳೆತ್ತುವ ಕೆಲಸವಾಗಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ : Kannada Sammelan/ ಅಮ್ಮ, ಮಡದಿಯನ್ನು ನೆನೆದು ಭಾವುಕರಾದರು

ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮುರ್ಡೇಶ್ವರ (Murdeshwar) -ಭಟ್ಕಳ ಮಧ್ಯೆ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ರಸ್ತೆ ಅಪಘಾತ ಆಗಿ ಎಷ್ಟೋ ಅಮೂಲ್ಯ ಜೀವಗಳು ಅಕಾಲದಲ್ಲಿ ಬಲಿಯಾಗುತ್ತಿವೆ. ಇಂತಹ ಬಲಿದಾನಗಳು ಇನ್ನುಮುಂದೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಬೇಕಿದೆ. ಹಲವು ಕಡೆ ಶಾಲಾ-ಕಾಲೇಜುಗಳ ಹತ್ತಿರ ಇರುವ ನಾಮಫಲಕಗಳನ್ನೂ ನಿರ್ಲಕ್ಷಿಸಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಫಾಸ್ಟಫುಡ್, ಝಂಕ್ ಫುಡ್ ಅನಾರೋಗ್ಯಕರ ತಂಪುಪಾನೀಯ ಮಕ್ಕಳ ಆರೋಗ್ಯವನ್ನು ಕೆಡಿಸುತ್ತವೆ. ಜನರು ಜಾಗೃತರಾಗಿ ಇಂತಹ ಕಾನೂನು ಬಾಹಿರ ಮಾರಾಟಗಳನ್ನು ತಡೆಯಬೇಕು ಎಂದು ಅವರು ಹೇಳಿದರು. ಭಾಷಣದ ಆರಂಭದಲ್ಲಿ ಅಮ್ಮ, ಮಡದಿಯನ್ನು ನೆನೆಸಿಕೊಂಡ ಅವರು ಭಾವುಕರಾದರು.

ಇದನ್ನೂ ಓದಿ :  ನಾ ಡಿಸೋಜರಿಗೆ ತವರಿನ ಶ್ರದ್ಧಾಂಜಲಿ

ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಭಟ್ಕಳದ ಇತಿಹಾಸವನ್ನು ತೆರೆದಿಟ್ಟರು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕನ್ನಡ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ಇರುವುದಾಗಿ ಹೇಳಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಾನಾಸುತ ಶಂಭು ಹೆಗಡೆ ಧ್ವಜ ಹಸ್ತಾಂತರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಆಶಯ ನುಡಿ ಪ್ರಸ್ತುತಪಡಿಸಿದರು.

ಇದನ್ನೂ ಓದಿ : ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟ ಯುವಕ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ನಾರಾಯಣ ಹೊನ್ನಿಮನೆ, ಧರ್ಮದರ್ಶಿಗಳಾದ ನಾರಾಯಣ ದೈಮನೆ, ಅರವಿಂದ ಪೈ, ಹನುಮಂತ ನಾಯ್ಕ, ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಮೊಗೇರ, ಹಿರಿಯ ಸಾಹಿತಿ ಡಾ.ಆರ್‌.ವಿ.ಸರಾಫ್‌, ಭಟ್ಕಳ ತಾಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿ.ಆರ್‌.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ನಿಧನರಾದ ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಅವರಿಗೆ ತವರಿನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದನ್ನೂ ಓದಿ : ಗ್ರಾಪಂ ಕಟ್ಟಡ ಕೆಡವಿದ ವ್ಯಕ್ತಿ ವಿರುದ್ಧ ದೂರು

ಇದಕ್ಕೂ ಪೂರ್ವದಲ್ಲಿ ದುರ್ಗಾಪರಮೇಶ್ವರಿ ಸಮುದಾಯ ಭವನದ ಆವರಣದಲ್ಲಿ ಶಿರಾಲಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಈಶ್ವರ ದೈಮನೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.  ನಂತರ ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಉ.ಕ. ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಾಡ ಧ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನೆರವೇರಿಸಿದರು. ನಂತರ ಅಳಿವೆಕೋಡಿ ಶ್ರಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಿಂದ ಸಮುದಾಯ ಭವನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.

ಉದ್ಘಾಟನಾ ಸಮಾರಂಭದ ವಿಡಿಯೋವನ್ನು ಯೂಟ್ಯೂಬ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ವೃದ್ಧನಿಗೆ ಕಂಟೇನರ್ ಲಾರಿ ಡಿಕ್ಕಿ