ಭಟ್ಕಳ (Bhatkal): ವಾಹನ ಪರವಾನಗಿ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ (Drink and Drive) ಸವಾರನಿಗೆ ಭಟ್ಕಳ ಜೆ.ಎಂ.ಎಫ್. ನ್ಯಾಯಾಲಯವು (JMFC) ಬುಧವಾರದಂದು ೨೨೫೦೦ ರೂ. ದಂಡ ವಿಧಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಡಿ.೩೧ರಂದು ಭಟ್ಕಳದ ಪಿ.ಎಲ್.ಡಿ. ಬ್ಯಾಂಕ್ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪಿ.ಎಸ್.ಐ. ನವೀನ ನಾಯ್ಕ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಭೋರಾಸಿಂಗ್ ಎಂಬ ವ್ಯಕ್ತಿ ಬೈಕ್ ಚಲಾಯಿಸಿಕೊಂಡು ಬರುವ ವೇಳೆ ಪರಿಶೀಲಿಸಿದಾಗ ಸವಾರ ಮದ್ಯ ಸೇವನೆ (Drink and Drive) ಮಾಡಿದ್ದು ದೃಢಪಟ್ಟಿತ್ತು.
ಇದನ್ನೂ ಓದಿ : ಬಹರೇನ್ನಲ್ಲಿ ಭಟ್ಕಳದ ಕಲಾವಿದನ ಪ್ರದರ್ಶನ
ಬೈಕ್ ಸವಾರನ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ, ಚಾಲನಾ ಪ್ರಮಾಣ ಪತ್ರ ಹೊಂದದೇ ಇದ್ದದ್ದು, ಅಪಾಯಕಾರಿ ಚಾಲನೆ, ಹೆಲೈಟ್ ಧರಿಸದೇ ಇರುವುದು ಹಾಗೂ ಪೊಲೀಸ್ ಅಧಿಕಾರಿ ಯವರೊಂದಿಗೆ ಅನುಚಿತ ವರ್ತನೆ ತೋರಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಭಟ್ಕಳದ ವಾಹನ ಚಾಲಕನ ವಿರುದ್ಧ ಪ್ರಧಾನ (ಸಿ.ಜೆ.) ಹಾಗೂ ಜೆ.ಎಂ.ಎಫ್. ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ಅಂತಿಮ ವರದಿ ಸಲ್ಲಿಸಿದ ಮೇರೆಗೆ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಧೀಶರು ತಪ್ಪಿತಸ್ಥ ಚಾಲಕನಿಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ : ಭೀಮಾ ನದಿಯ ಕಡವಿನಕಟ್ಟೆ ಅಣೆಕಟ್ಟಿನಲ್ಲಿ ಹೂಳು