ಬೆಳಗಾವಿ : ತಾಲೂಕಿನ ಸೋನಟ್ಟಿ ಗ್ರಾಮದ ಬಳಿ ₹12 ಲಕ್ಷ ಮೌಲ್ಯದ ಕಳ್ಳಬಟ್ಟಿ ಸಾರಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಜಡ್ಜ್ ಹುದ್ದೆ ಏರಿದ ರಾಜ್ಯದ ಅತ್ಯಂತ ಕಿರಿಯ ಸಾಧಕ
ಗುಡ್ಡಗಾಡಿನ ಸೋನಟ್ಟಿ ಗ್ರಾಮದಲ್ಲಿ ಅಪಾರ ಪ್ರಮಾಣದ ಕಳ್ಳಬಟ್ಟಿಯನ್ನು ಸಂಗ್ರಹ ಮಾಡಲಾಗಿರುವ ಖಚಿತ ಮಾಹಿತಿ ಪೊಲೀಸರಿಗೆ ದೊರಕಿತ್ತು. ಡಿಸಿಪಿ ನೇತೃತ್ವದಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿ ಇರುವ ತಂಡ 700 ಲೀಟರ್ 26 ಬ್ಯಾರೇಲ್ ಕಳ್ಳಬಟ್ಟಿ, 30 ಲೀಟರಿನ 17 ಬ್ಯಾರೇಲ್ ಸಾರಾಯಿ ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದೆ. ಇನ್ನುಳಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ವಿಡಿಯೋ ನೋಡಿ: ಶಿವಮೊಗ್ಗದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ ಭಾಷಣ. https://fb.watch/qpBhHRlEST/?mibextid=Nif5oz
ತಲೆಮರೆಸಿಕೊಂಡವರ ಪತ್ತೆಗೆ ಬೆಳಗಾವಿ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ : ಬೆಳಗಾವಿ : ಕಾರುಗಳ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಮೂವರ ಸಾವು