ಭಟ್ಕಳ (Bhatkal) : ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಭಟ್ಕಳದ ಸೋಡಿಗದ್ದೆ (Sodigadde) ಮಹಾಸತಿ ಜಾತ್ರೆಯ ಮೊದಲ ದಿನ ಗುರುವಾರ ರಾತ್ರಿ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ (Sodigadde Album) ಬಿಡುಗಡೆಗೊಂಡಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಶ್ರೀ ಶರಣು ದುರ್ಗಾ ಕ್ರಿಯೇಷನ್ಸ್ ಈ ಭಕ್ತಿಗೀತೆ ಅಲ್ಬಮ್ (Sodigadde Album) ನಿರ್ಮಾಣ ಮಾಡಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸುಗಮ ಸಂಗೀತ ಗಾಯಕ ಭಾವಕವಿ ಉಮೇಶ ಮುಂಡಳ್ಳಿ ಸಾಹಿತ್ಯ ಬರೆದು ಸ್ವರಸಂಯೋಜಿಸಿ ತಾವೇ ಹಾಡಿರುತ್ತಾರೆ. “ಬೆಳಗಿಹುದು ಬೆಳಗಿಹುದು ಬೆಳಗಿಹುದು ಜ್ಯೋತಿ, ಸೋಡಿಗದ್ದೆಯ (Sodigadde) ತಾಯಿ ಮಹಾಸತಿಯ ಖ್ಯಾತಿ ” ಎನ್ನುವ ಈ ಸುಮಧುರ ಗೀತೆಗೆ ಕೀಬೋರ್ಡ್ ನಲ್ಲಿ ವಿಘ್ನೇಶ ಗೌಡ ಹಾಗೂ ತಬಲಾದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದ್ದಾರೆ.
ಇದನ್ನೂ ಓದಿ : Republic Day/ ಭಟ್ಕಳದಲ್ಲಿ ಗಣರಾಜ್ಯೋತ್ಸವ ಸಂಭ್ರಮ
ತಾಯಿ ಶ್ರೀ ಮಹಾಸತಿ ದೇವಿಯ ಎದುರಿನಲ್ಲಿ ಭಕ್ತಜನರ ಸಮ್ಮುಖದಲ್ಲಿ ಈ ಅಲ್ಬಮ್ ಬಿಡುಗಡೆಗೊಂಡಿದೆ. ಈ ಸಂದರ್ಭದಲ್ಲಿ ಯಲ್ವಡಿಕವೂರ ಪಂಚಾಯತ ಸದಸ್ಯರು, ಊರಿನ ಪ್ರಮುಖರಾದ ನಾರಾಯಣ ನಾಯ್ಕ, ಗಾಯಕ ಉಮೇಶ ಮುಂಡಳ್ಳಿ, ಕವಯಿತ್ರಿ ರೇಷ್ಮಾ ಉಮೇಶ, ನಿನಾದ ಹಾಗೂ ಉತ್ಥಾನ ಹಾಜರಿದ್ದರು.
ಇದನ್ನೂ ಓದಿ : Three Arrest/ ಭಟ್ಕಳದ ಓರ್ವ ಸಹಿತ ಮೂವರ ಬಂಧನ