ಶಿರಸಿ (Sirsi) : ಉತ್ತರ ಕನ್ನಡ (Uttara Kannada) ಬಿಜೆಪಿ (BJP) ಜಿಲ್ಲಾಧ್ಯಕ್ಷರಾಗಿ ಎನ್‌.ಎಸ್‌. ಹೆಗಡೆ ಕರ್ಕಿ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಶಿರಸಿಯ ದೀನದಯಾಳ ಭವನದಲ್ಲಿ ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಮಾಜಿ ಎಂಎಲ್‌ಸಿ ಆರ್‌.ಕೆ. ಸಿದ್ರಾಮಣ್ಣ ಅಧ್ಯಕ್ಷರ ಪುನರಾಯ್ಕೆಯನ್ನು ಘೋಷಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುಂಬರುವ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಎನ್‌.ಎಸ್‌.ಹೆಗಡೆ ಕರ್ಕಿ ಅವರಿಗೆ ವಹಿಸಲಾಗಿದೆ ಎಂದು ಆರ್‌.ಕೆ.ಸಿದ್ರಾಮಣ್ಣ ಘೋಷಿಸಿರು. ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ (Hariprakash Konemane), ಹಿರಿಯ ಮುಖಂಡ ಆರ್.ಡಿ.ಹೆಗಡೆ, ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ, ಮಾಜಿ ಶಾಸಕ ವಿವೇಕಾನಂದ ವೈದ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಮಾಜಿ ಅಧ್ಯಕ್ಷ ಎಂ.ಜಿ. ನಾಯ್ಕ, ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ ಉಪಸ್ಥಿತರಿದ್ದರು.

ಇದನ್ನೂ ಓದಿ : Kumbh Mela/ ಮಹಾ ಕುಂಭಮೇಳದಲ್ಲಿ ಬೆಳಗಾವಿಯ ತಾಯಿ ಮಗಳು ಸಾವು