ಅಂಕೋಲಾ : ಸಂಗ್ರಹಿಸಿದ ಹಣ ಕಳೆದುಕೊಂಡಿದ್ದಕ್ಕೆ ಕಿರುಬಂಡವಾಳ ಕ್ಷೇತ್ರದ (Microfinance) ವಸೂಲಿ ಸಿಬ್ಬಂದಿಯೊಬ್ಬರು ಕೈ ಮತ್ತು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಾವೇರಿ (Haveri) ಜಿಲ್ಲೆಯ ಹಾನಗಲ್‌ನ (Hangal) ಗುರುರಾಜ ಸೋಮಲಿಂಗ ಬಂಡಿವಡ್ಡರ (೨೪) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಇವರು ಭಾರತ್ ಮೈಕ್ರೋಫೈನಾನ್ಸ್‌ನಲ್ಲಿ (Microfinance) ಕೆಲಸ ಮಾಡುತ್ತಿದ್ದರು. ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಲ ವಸೂಲಾತಿ ಕಾರ್ಯಚಟುವಟಿಕೆಗಳ ಹೊಣೆ ಹೊತ್ತಿದ್ದರು. ಮೂಲಗಳ ಪ್ರಕಾರ, ಗುರುರಾಜ ಅವರು ಸಾಲದ ಪಾವತಿಯಲ್ಲಿ ೪೦ ಸಾ.ರೂ ಸಂಗ್ರಹಿಸಿದ್ದರು. ಆದರೆ ಸಂಗ್ರಹಿಸಿದ ಹಣ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Naval Base/ ನೌಕಾನೆಲೆ ಸಿಬ್ಬಂದಿ ಮಲಗಿದ್ದಲ್ಲೇ ಸಾವು
ಒತ್ತಡದಿಂದ ಹೊರಬರಲು ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಸಹೋದ್ಯೋಗಿಗಳು ಅಂಕೋಲಾ (Ankola) ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಪಿಐ ಚಂದ್ರಶೇಖರ ಮಠಪತಿ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ (Karwar) ಕಿಮ್ಸ್ ಆಸ್ಪತ್ರೆಗೆ (KIMS Hospital) ದಾಖಲಿಸಲಾಗಿದೆ.
ಇದನ್ನೂ ಓದಿ : memorandum / ಫೆ.೩ರಿಂದ ರಾಜ್ಯಾದ್ಯಂತ ಮುಷ್ಕರದ ಎಚ್ಚರ