ಭಟ್ಕಳ : ಪಟ್ಟಣದ ಚೌಥನಿಯಲ್ಲಿರುವ ಕಾಸ್ಮುಡಿ ಹನುಮಂತ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹಕಲಶೋತ್ಸವ ಫೆ.29 ರಿಂದ ಮಾ.3 ರತನಕ ನಡೆಯಲಿದೆ. ಕಾಸ್ಮುಡಿ ಹನುಮಂತ ದೇವಸ್ಥಾನದ ಸ್ವಯಂವರ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಅಣ್ಣಪ್ಪ ನಾಯ್ಕ ಈ ಕುರಿತು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯ ವಿಡಿಯೋ ನೋಡಿ :  https://www.facebook.com/share/v/z2aQ5zDkQjDWxjV9/?mibextid=oFDknk

ಮೊದಲ ದಿನ :
ಫೆ.29ರ ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಮಹಾಸಂಕಲ್ಪ, ದೇವನಾಂದಿ, ಕೃಚ್ಚಾಚರಣ, ಋತ್ವಿಗರಣ, ಮಧುಪರ್ಕ, ಅಷ್ಟಮೂರ್ತಿ ಪ್ರಾರ್ಥನೆ, ಬಿಂಬಶುದ್ಧಿ, ಬಿಂಬಶುದ್ಧಿ ಕಲಶ ಸ್ಥಾಪನೆ, ಬಿಂಬಶುದ್ದಿ ಹೋಮ ಹಾಗೂ ಜಲಾಧಿವಾಸ ನಡೆಯಲಿದೆ. ಸಂಜೆ ಸ್ಥಾನಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ವಾಸ್ತು ಹೋಮ, ಬಲಿ, ಮಂಟಪ ಸಂಸ್ಕಾರ, ಕುಂಭೇಶ ಪೂಜಾ, ಅಗ್ನಿಜನನ, ಸಂಸ್ಕಾರ ಹೋಮ, ಪೂರ್ವಕ ಪ್ರತಿಷ್ಠಾ ಪೂರ್ವಾಂಗ ಹೋಮಗಳು, ಬಿಂಬಶುದ್ಧಿಕ ಕಲಶಾಭಿಷೇಕ, ಅಧಿವಾಸ ಪೂಜೆ, ಧ್ಯಾನಧಿವಾಸ ಹಾಗೂ ಮಂಡಲ ಪೂಜೆ ನೆರವೇರಲಿದೆ.
ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಲಾಮಯ ಗರ್ಭಗುಡಿಯ ನಿರ್ಮಾತೃ ಭಾಸ್ಕರ ಸೋಮಯ್ಯ ನಾಯ್ಕ ನೆರವೇರಿಸುವರು. ಸ್ವಯಂವರದ ಮಹಾದಾನಿ ಪ್ರಕಾಶ ನಾಯ್ಕ ಅರಬೈಲುಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಸತ್ಯಸಾಯಿ ಸಮಿತಿಯ ಸೇವಾಮೂರ್ತಿ ಭಾಸ್ಕರ ನಾಯ್ಕ ಧಾರ್ಮಿಕ ಪ್ರವಚನ ನೀಡುವರು. ಮುಖ್ಯ ಅತಿಥಿಗಳಾಗಿ ಸ್ವಯಂವರದ ಮಹಾದಾನಿಗಳಾದ ಜ್ಯೋತಿ ಈರಪ್ಪ ಗರ್ಡೀಕರ್, ಚಂದ್ರಹಾಸ ನಾರಾಯಣ ನಾಯ್ಕ, ಜೀರ್ಣೋದ್ಧಾರ ಸಮಿತಿಯ ಮಾಜಿ ಉಪಾಧ್ಯಕ್ಷ ಗಣಪತಿ ಅಣ್ಣಪ್ಪಯ್ಯ ಆಚಾರ್ಯ, ಊರ ಪ್ರಮುಖರಾದ ಜಟ್ಟಯ್ಯ ಈರಯ್ಯ ನಾಯ್ಕ, ಕೃಷ್ಣಪ್ಪ ತಿಮ್ಮಯ್ಯ ನಾಯ್ಕ, ದುರ್ಗಯ್ಯ ತಿಮ್ಮಯ್ಯ ನಾಯ್ಕ, ಮಂಜುನಾಥ ತಿಮ್ಮಪ್ಪಯ್ಯ ಆಚಾರ್ಯ, ಯಕ್ಷಗಾನ ಕಲಾವಿದ ಕೇಶವ ಅಣ್ಣಪ್ಪಯ್ಯ ಆಚಾರ್ಯ, ಖ್ಯಾತ ಗಾಯಕಿ ಉಮಾ ಚಂದ್ರಕಾಂತ ಕಿಣಿ ಉಪಸ್ಥಿತರಿರುವರು‌.
ಸಂಜೆ 6.30ಕ್ಕೆ ಕವಿ-ಸಾಹಿತಿ ಉಮೇಶ ಮುಂಡಳ್ಳಿ ರಚಿ ಹಾಡಿರುವ ಶ್ರೀ ಕಾಸ್ಮುಡಿ ಹನುಮಂತ ದೇವರ ಭಕ್ತಿಗೀತೆ ಬಿಡುಗಡೆ ಆಗಲಿದೆ. ರಾತ್ರಿ 8.30ಕ್ಕೆ ಭಟ್ಕಳದ ಶ್ರೀ ಮಾರುತಿ ಯಕ್ಷಗಾನ ಮಂಡಳಿಯಿಂದ ಶ್ರೀ ರಾಮಾಂಜನೇಯ ಯುದ್ಧ ಯಕ್ಷಗಾನ ಪ್ರದರ್ಶನ ಇರಲಿದೆ.

ಇದನ್ನೂ ಓದಿ : ಸ್ಕೂಬಾ ಡೈವಿಂಗ್ ಮಾಡಿದ ಪ್ರಧಾನಿ ಮೋದಿ

ಎರಡನೆಯ ದಿನ :
ಮಾ. 1 ರ ಬೆಳಿಗ್ಗೆ ಗಣಪತಿ ಪೂಜಾ, ಪುಣ್ಯಾಹ, ಗ್ರಹಹೋಮ, ರತ್ನನ್ಯಾಸ, ಪೀಠಪ್ರತಿಷ್ಠೆ, ಮುಹೂರ್ತ ಗ್ರಹಣ ಸುಮುಹೂರ್ತದಲ್ಲಿ ದೇವರ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವಕಲಶಾಭಿಷೇಕ, ಜೀವಾದಿ, ನ್ಯಾಸಗಳು, ಶಕ್ತಿ-ಕಲಾ-ಪ್ರಾಣ ಪ್ರತಿಷ್ಠಾದಿ ಹೋಮ ಅನ್ನಸಂತರ್ಪಣೆ ಜರುಗಲಿದೆ. 10 ಗಂಟೆಗೆ ನಡೆಯುವ ಧಾರ್ಮಿಕ ಸಮಾರಂಭ ಉದ್ಘಾಟಕರಾಗಿ ಸಚಿವ ಮಂಕಾಳ ವೈದ್ಯ ಅಗಮಿಸಲಿದ್ದಾರೆ. ಶ್ರೀ ಕಾಸ್ಟುಡಿ ದೇವಸ್ಥಾನದ ಶಿಲಾಮಯ ಸಮಿತಿ ಗೌರವಾಧ್ಯಕ್ಷ ಈರಪ್ಪ ಮಂಜಪ್ಪ ಗರ್ಡೀಕರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿಲಾಮಯ ಗರ್ಭಗುಡಿಯ ನಿರ್ಮಾತೃ ಭಾಸ್ಕರ ಸೋಮಯ್ಯ ನಾಯ್ಕ, ಸ್ವಯಂವರದ ಹಾಗೂ ದೇವಸ್ಥಾನದ ಮಹಾದಾನಿ ಪ್ರಕಾಶ ನಾಯ್ಕ ಅರಬೈಲುಮನೆ, ಯಲ್ವಡಿಕವೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಕೃಷ್ಣ ಗೊಂಡ, ಶಿಲಾಮಯ ಸಮಿತಿ ಉಪಾಧ್ಯಕ್ಷ ಸುಬ್ರಾಯ ನಾರಾಯಣ ನಾಯ್ಕ, ಸ್ವಯಂವರದ ಮಹಾದಾನಿ ಕುಂದಾಪುರದ ವಕೀಲ ಪ್ರದೀಪ ಕುಮಾರ ಶೆಟ್ಟಿ, ಭಟ್ಕಳದ ಚೋಳೇಶ್ವರ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣೇಶ ನಾಯ್ಕ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಮೃತ್ಯುಂಜಯ ನಾಗಪ್ಪಯ್ಯ ಅಚಾರ್ಯ, ನಿವೃತ್ತ ಶಿಕ್ಷಕ ಎನ್.ಬಿ. ಭಂಡಾರಿ, ಯಲ್ವಡಿಕವೂರು ಗ್ರಾಪಂ ಸದಸ್ಯ ಸುರೇಶ ಜಟ್ಟಯ್ಯ ನಾಯ್ಕ, ಆಸರಕೇರಿ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ, ಚನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ಅಧ್ಯಕ್ಷ ಶ್ರೀಧರ ಮೊಗೇರ, ಚೌಥನಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಗಜಾನನ ನಾಗಪ್ಪಯ್ಯ ಆಚಾರ್ಯ, ಭಟ್ಕಳದ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಪರಮೇಶ್ವರ ನಾಯ್ಕ, ಪುರವರ್ಗ ಶ್ರೀ ಸಹಪರಿವಾರ ಮಂಡಜಟ್ಟಗ ದೇವಸ್ಥಾನದ ಅಧ್ಯಕ್ಷ ಉದಯ ಮಂಜಯ್ಯ ನಾಯ್ಕ, ಶ್ರೀ ಹುಲಿಗಿರ್ತಿ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಹನುಮಂತ ನಾಯ್ಕ, ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಅಧ್ಯಕ್ಷ ಭಾಸ್ಕರ ಮೊಗೇರ, ಚೌಥನಿ ಶ್ರೀ ಕುದ್ರಿ ಬೀರಪ್ಪ ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ನಾಯ್ಕ, ಮೂಡಭಟ್ಕಳ ಶ್ರೀ ಕೇತಪೈ ನಾರಾಯಣ ದೇವಸ್ಥಾನದ ಅಧ್ಯಕ್ಷ ವೆಂಕಟೇಶ ನಾಯ್ಕ, ಚೌಥನಿಯ ಶ್ರೀ ಹೊಸಮಾಸ್ತಿ ದೇವಸ್ಥಾನದ ಅಧ್ಯಕ್ಷ ವೆಂಕಟೇಶ ಜಟ್ಟಪ್ಪ ನಾಯ್ಕ, ದೇವಸ್ಥಾನದ “ತೀರ್ಥಸ್ನಾನ ಘಟ್ಟ ರಸ್ತೆಗೆ ಜಾಗ ಕೊಟ್ಟ ತಿಮ್ಮಪ್ಪ ನಾರಾಯಣ ನಾಯ್ಕ, ಸರ್ಪನಕಟ್ಟೆ ಶ್ರೀ ವಾಸುಕಿ ದೇವಸ್ಥಾನದ ಹನುಮಂತ ನಾಯ್ಕ, ಹೆಬಳೆ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಶ್ರೀಧರ ನಾಯ್ಕ, ಯಂಗ್ ಒನ್ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ದೊಡ್ಡಬಲ್ಸೆ, ತೆಂಗಿನಗುಂಡಿ ಶ್ರೀ ಜಟಗೇಶ್ವರ ಭಜನಾ ಮಂದಿರದ ಕೇಶವ ಮೊಗೇರ, ಪುರವರ್ಗ ಶ್ರೀ ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ರಾಘವೇಂದ್ರ ಜಟ್ಟಪ್ಪ ನಾಯ್ಕ, ಶಿಲಾಮಯ ಸಮಿತಿ ಉಪಾಧ್ಯಕ್ಷ ರಮೇಶ ಖಾರ್ವಿ ಬಂದರ, ಸದಸ್ಯ ಲಚ್ಚಯ್ಯ ಗುರುಸ್ವಾಮಿ, ತೆಂಗಿನಗುಂಡಿಯ ಮಂಜಪ್ಪ ಗುರುಸ್ವಾಮಿ, ಮಹಾದಾನಿ ಪ್ರೇಮಾ ಬಾಬು ನಿರ್ವಾಣಿ ಉಪಸ್ಥಿತರಿರುವರು. ಮುರುಡೇಶ್ವರದ ಶಿಲ್ಪಿಗಳಾದ ಅಣ್ಣಪ್ಪ ಭೈರಪ್ಪ ನಾಯ್ಕ ಮತ್ತು ಶಂಕರ ಮಾಸ್ತಿ ನಾಯ್ಕ ಅವರನ್ನು ಸನ್ಮಾನಿಸಲಾಗುತ್ತದೆ.


ಬೆಳಿಗ್ಗೆ 11 ಗಂಟೆಗೆ ಗಾಯಕಿ ಪವಿತ್ರ ನಾಯ್ಕ ಹಾಡಿರುವ ಕಾಸ್ಮುಡಿ ಶ್ರೀ ಹನುಮಂತ ದೇವರ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಂತರ ರೇಖಾ ಮತ್ತು ಪ್ರಕಾಶ ನಾಯ್ಕ ಅರಬೈಲು ಅವರ ಸೇವೆಯ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಬ್ರಹ್ಮಕಲಶ ಸ್ಥಾಪನೆ ಸ್ನಪನಾಧಿವಾಸ ಹೋಮ, ನಿರೀಕ್ಷಾ ಪೂಜೆ, ಪ್ರಸಾದ ವಿತರಣೆ. ಸಂಜೆ 5.30ಕ್ಕೆ ಈಶ್ವರ ಹಕ್ರೆ ನೇತೃತ್ವದ ಗಾನಶ್ರೀ ಭಜನೆ ತಂಡದವರಿಂದ ಭಜನಾಮೃತ ಕಾರ್ಯಕ್ರಮ, ರಾತ್ರಿ 8.30ಕ್ಕೆ ಚೌಥನಿಯ ದಿ. ದುರ್ಗಪ್ಪ ಗುಡಿಗಾರ ಸ್ಮರಣಾರ್ಥ ಭಟ್ಕಳದ ಫ್ರೆಂಡ್ಸ್ ಮೆಲೋಡೀಸ್ ಕುಟುಂಬದವರಿಂದ ಲೈವ್ ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ.

ಮೂರನೆಯ ದಿನ :
ಮಾ. 2ರಂದು ಬೆಳಿಗ್ಗೆ ದಿಶಾದಿ ಹೋಮ, ಪ್ರಾಯಶ್ಚಿತ್ತಾ ಹೋಮಗಳು, ಪೂರ್ಣಾಹುತಿ, ಪೂರ್ಣಕಲಾಸಾನ್ನಿಧ್ಯ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಆಶೀರ್ವಾದ ಜರುಗಲಿದೆ.
10 ಗಂಟೆಗೆ ನಡೆಯುವ ಧಾರ್ಮಿಕ ಸಭೆಯನ್ನು ಸ್ವಯಂವರದ ಮಹಾದಾನಿ, ಮಾಜಿ ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದಾರೆ. ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ಅಬ್ಬಿಹಿತ್ತಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಗೌರವಾಧ್ಯಕ್ಷ ಈರಪ್ಪ ಎಂ. ಗರ್ಡೀಕರ, ಮಹಾದಾನಿಗಳಾದ ಭಾಸ್ಕರ ಸೋಮಯ್ಯ ನಾಯ್ಕ, ಪ್ರಕಾಶ ನಾಯ್ಕ ಅರಬೈಲುಮನೆ, ದೇವಸ್ಥಾನದ ಪ್ರಧಾನ ಪುರೋಹಿತ ಪ್ರಕಾಶ ಅಡಿಗ, ಪುರೋಹಿತ ಗಣೇಶ ಅಡಿಗ, ಶಿಲಾಮಯ ಸಮಿತಿ ಉಪಾಧ್ಯಕ್ಷ ಗಣಪತಿ ದೇವಯ್ಯ ನಾಯ್ಕ, ದೇವಸ್ಥಾನದ ಕಾರ್ಯದರ್ಶಿ ಗಜಾನನ ಆಚಾರ್ಯ, ಹೆಬಳೆಯ ಯೋಗ ಗುರು ಗೋವಿಂದ ಗುರುಜೀ, ಕಾಸ್ಮುಡಿ ಯುವ ಸೇವಾ ಸಮಿತಿ ಅಧ್ಯಕ್ಷ ಗಣಪತಿ ನಾರಾಯಣ ನಾಯ್ಕ, ಪುರವರ್ಗದ ಕರಸೇವಕ ಮಾದೇವ ಮಾಸ್ತಪ್ಪ ನಾಯ್ಕ, ಮಹಾದಾನಿ ಚೌಥನಿಯ ಶಂಕರ ನಾಯ್ಕ, ನಾಮಧಾರಿ ಸಮಾಜದ ಗುರುಮಠದ ಸದಸ್ಯ ನಾಗೇಶ ನಾರಾಯಣ ನಾಯ್ಕ, ಶಿಲಾಮಯ ಸಮಿತಿ ಸದಸ್ಯ ಬಾಲಚಂದ್ರ ತಡಿಯಾರ, ತಳಸಿದಾಸ ಚೌಥನಿಯ ಹೊನ್ನಯ್ಯ ತಿಮ್ಮಯ್ಯ ನಾಯ್ಕ, ತಲಾಂದ ಗೊಂಡ ಸಮಾಜದ ಮುಖಂಡ ಮೋಹನ ಸೋಮಯ್ಯ ಗೊಂಡ, ಮಾವಿನಹಕ್ಲ ಕೂಟದ ಬುದುವಂತ ಕರಿಯಪ್ಪ ಈರಯ್ಯ ನಾಯ್ಕ ಉಪಸ್ಥಿತರಿರುವರು.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 4.30ಕ್ಕೆ ಹರಿನಾಮಸ್ಮರಣೆ ಕುಣಿತ, ರಾತ್ರಿ 7ಕ್ಕೆ ಅಂತರ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಕುಣಿತ ಸ್ಪರ್ಧೆ ಜರುಗಲಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದ್ದು, ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 10000, 8000 ಮತ್ತು 5000 ರೂ. ನಗದು ಬಹುಮಾನ ನೀಡಲಾಗುತ್ತದೆ.

ನಾಲ್ಕನೆಯ ದಿನ:
ಮಾ. 3ರಂದು ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗ ಮಾಹಿತಿ ಶಿಬಿರವನ್ನು ಯುಪಿಎಸ್ ಸಿ ರ‌್ಯಾಂಕ್ ವಿಜೇತ, ಅಂಕೋಲಾದ ಶ್ರೀರಾಮ ಸ್ಟಡೀಸ್ ನ ಸೂರಜ್ ನಾಯ್ಕ್ ಉದ್ಘಾಟಿಸುವರು. ಭಟ್ಕಳದ ಶಿಕ್ಷಣ ಪ್ರೇಮಿ ಶಿವಾನಂದ ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಡುಪಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ, ಭಟ್ಕಳದ ಬಿಇಒ ವಿ.ಡಿ.ಮೊಗೇರ, ಮಂಗಳೂರು ಎಕ್ಸಪರ್ಟ್ ಕಾಲೇಜಿನ ಉಪ ಪ್ರಾಂಶುಪಾಲ ಗುರುದತ್ತ ನಾಯ್ಕ, ಮಹಾದಾನಿ ಕುಂದಾಪುರದ ವಕೀಲ ಪ್ರದೀಪ ಕುಮಾರ ಶೆಟ್ಟಿ, ಸರ್ಪನಕಟ್ಟೆ ಸರ್ಕಾರಿ ಪಿ.ಯು ಕಾಲೇಜು ಪ್ರಾಂಶುಪಾಲ ಗಜಾನನ ನಾಯ್ಕ, ಭಟ್ಕಳದ ಸಿದ್ದಾರ್ಥ ಕಾಲೇಜು ಪ್ರಾಂಶುಪಾಲೆ ಅರ್ಚನಾ ನಾಯ್ಕ, ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ಪ್ರಾಂಶುಪಾಲ ಶ್ರೀನಾಥ ಪೈ, ಹೆಮ್ಮಾಡಿ ಜನತಾ ಕಾಲೇಜು ಉಪನ್ಯಾಸಕ ಉಮೇಶ ನಾಯ್ಕ ಸರ್ಪನಕಟ್ಟೆ, ಮುರುಡೇಶ್ವರ ಆರ್ ಎನ್ ಎಸ್ ಕಾಲೇಜು ಉಪನ್ಯಾಸಕ ಸಂತೋಷ ಆಚಾರ್ಯ, ನ್ಯೂ ಇಂಗ್ಲೀಷ್ ಸ್ಕೂಲ್ ಮುಖ್ಯೋಪಧ್ಯಾಯ ಗಣಪತಿ ಶಿರೂರು ಉಪಸ್ಥಿತರಿರುವರು.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 4ಕ್ಕೆ ತಲಾಂದ ಗೊಂಡ ಸಮಾಜದವರಿಂದ ಡಕ್ಕೆ ಕುಣಿತ, 5ಕ್ಕೆ ಮಹಿಳೆಯರಿಂದ ವಿಶೇಷ “ದೀಪಾರಾಧನೆ”, 6.00ಕ್ಕೆ ಭಟ್ಕಳದ ‘ಶ್ರಾವ್ಯ ಮೆಲೋಡಿಸ್ ಹಾಗೂ ಸ್ಥಳೀಯ ಮಕ್ಕಳ ಮನರಂಜನೆ ಇರುವುದು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಕಮಿಟಿ ಗೌರವಾಧ್ಯಕ್ಷ  ಈರಪ್ಪ ಗರಡಿಕರ್, ಪ್ರಕಾಶ ನಾಯ್ಕ, ಭಾಸ್ಕರ್ ನಾಯ್ಕ, ಗಣಪತಿ ನಾಯ್ಕ, ಮೃತ್ಯುಂಜಯ ಆಚಾರ್ಯ, ಗಜಾನನ ಆಚಾರ್ಯ , ಸುಬ್ರಾಯ್ ನಾಯ್ಕ ಹಾಗೂ ಊರಿನ ಯುವಕರು ಉಪಸ್ಥಿತರಿದ್ದರು.