ಭಟ್ಕಳ (Bhatkal): ಬೈಕ್ ಡಿಕ್ಕಿ (Bike Accident) ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ (National Highway) ೬೬ರ ತೂರ್ ಮಸೀದಿ ಬಳಿ ನಡೆದಿದೆ. ಸೋಮವಾರ ಬೆಳಗ್ಗೆ ಸಂತ್ರಸ್ತ ಹೆದ್ದಾರಿ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿಶಾತ್ ನರ್ಸಿಂಗ್ ಹೋಮ್ ಹಿಂಭಾಗದ ಫ್ಲ್ಯಾಟ್‌ನ ನಿವಾಸಿ ಮೊಹಮ್ಮದ್ ಇಬ್ರಾಹಿಂ (64) ಮೃತರು. ಮೂಲತಃ ಬೆಂಗಳೂರಿನವರಾದ (Bengaluru) ಇವರು ಕಳೆದ ೨೫ ವರ್ಷಗಳಿಂದ ಭಟ್ಕಳದಲ್ಲಿ ನೆಲೆಸಿದ್ದರು. ತೂರ್ ಮಸೀದಿಯಲ್ಲಿ ಬಹುಕಾಲದಿಂದ ಮುಅಝಿನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

ಇದನ್ನು ಓದಿ : Power cut / ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

ಸ್ಥಳೀಯ ಮೂಲಗಳ ಪ್ರಕಾರ, ಮೊಹಮ್ಮದ್ ಇಬ್ರಾಹಿಂ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಭಟ್ಕಳ ತಾಲೂಕಿನ ನೂಜ್ ನಿವಾಸಿಯೊಬ್ಬರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ (Bike Accident) ಹೊಡೆದಿದೆ. ಪರಿಣಾಮ ತಲೆ ಮತ್ತು ಕೈಗೆ ತೀವ್ರ ಗಾಯಗಳಾಗಿವೆ.

ಇದನ್ನು ಓದಿ : Vikshit Bharat/ ಭಟ್ಕಳ ಮೂಲದ, ಎಸ್‌ವಿಸಿ ಬ್ಯಾಂಕ್‌ ಅಧ್ಯಕ್ಷಗೆ ಪ್ರತಿಷ್ಠಿತ ಪ್ರಶಸ್ತಿ

ಕೂಡಲೇ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ (Mangaluru) ಕಳುಹಿಸಲಾಗಿತ್ತು. ಆದರೆ, ಮಂಗಳೂರಿನ ವೈದ್ಯರು ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದ್ದರು. ಹೀಗಾಗಿ ಭಟ್ಕಳಕ್ಕೆ ಕರೆತರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸಂಜೆ ೫.೩೦ ಸುಮಾರಿಗೆ ಅವರ ಸಾವು ಅಧಿಕೃತವಾಗಿ ದೃಢಪಟ್ಟಿದೆ.

ಇದನ್ನು ಓದಿ : Murdeshwar/ ಅರಣ್ಯದಲ್ಲಿ ಜೂಜಾಟ ; ಓರ್ವ ಸೆರೆ, ೩ ಬೈಕ್ ವಶ

ಅಪಘಾತದಲ್ಲಿ ಬೈಕ್ ಸವಾರಗೂ ಗಂಭೀರ ಗಾಯಗಳಾಗಿವೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು