ಭಟ್ಕಳ (Bhatkal) : ತಾಲೂಕಿನ ಕರಿಕಲ್ ಗ್ರಾಮದ ಶ್ರೀ ಕ್ಷೇತ್ರ ಸಳ್ಳೆಹೊಂಡ ಶ್ರೀ ನಾಗ ಮತ್ತು ಜಟಗೇಶ್ವರ ದೇವರ ಪುನಃ ಪ್ರತಿಷ್ಠಾ ಪಂಚಮ ವರ್ಧಂತಿ (Vardhanti) ಮಹೋತ್ಸವ ಫೆ. ೧೩ರಂದು ಜರುಗಲಿದೆ. ಈ ಸಂದರ್ಭದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ (Brahmanand Saraswathi Swamiji) ಅಮೃತ ಹಸ್ತದಿಂದ ಶ್ರೀ ಜಟಗೇಶ್ವರ ದೇವರಿಗೆ ಹಿತ್ತಾಳೆಯ ಪ್ರಭಾವಳಿ ಮತ್ತು ಶ್ರೀನಾಗ ದೇವರಿಗೆ ಬೆಳ್ಳಿಯ ಕವಚ ಅರ್ಪಿಸಲಾಗುತ್ತದೆ. ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಉಪಸ್ಥಿತರಿರುವರು. ಮಧ್ಯಾಹ್ನ ೧ ಗಂಟೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂದು ಬೆಳಿಗ್ಗೆ ೮ ಗಂಟೆಗೆ ದೇವಸ್ಥಾನದಲ್ಲಿ ಕುಲದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬೆಳಿಗ್ಗೆ ೮.೩೦ ರಿಂದ ದೇವಸ್ಥಾನದಲ್ಲಿ ಗುರು ಗಣಪತಿ ಪೂಜೆ ಸಂಕಲ್ಪದೊಂದಿಗೆ ನಾಗದೇವರಿಗೆ ಬೆಳ್ಳಿ ಕವಚ ಅರ್ಪಣೆ ಆಗಲಿದೆ. ಬೆಳಿಗ್ಗೆ ೧೦ ಗಂಟೆಗೆ ಅಷ್ಟ ಪರಿಕಲಶ ಸಹಿತ ಬ್ರಹ್ಮ ಕಲಶ ಸ್ಥಾಪನೆ ಆಗಲಿದೆ. ೧೧ ಗಂಟೆಯಿಂದ ಜಟಗೇಶ್ವರ ದೇವರಿಗೆ ಹಿತ್ತಾಳೆಯ ಪ್ರಭಾವಳಿ ಅರ್ಪಣೆ, ಪರಿವಾರ ದೇವರುಗಳಿಗೆ ಚತುರ್ಥ ವರ್ಧಂತಿ ಪರಿಕಲಶ ಸಹಿತ ಬ್ರಹ್ಮ ಕಲಶ ಸ್ಥಾಪನೆ, ಕಲಶಾಧಿವಾಸ ಹೋಮ, ಕಲಾತತ್ವ ಹೋಮ ಜರುಗಲಿದೆ.
ವಿಡಿಯೋ ಸಹಿತ ಇದನ್ನೂ ಓದಿ : SDPI/ ಸಚಿವ ಮಂಕಾಳ ವೈದ್ಯ ವಿರುದ್ಧ ಎಸ್‌ಡಿಪಿಐ ಕೆಂಡ
ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ೨ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಈ ಸಂದರ್ಭ ಮಧ್ಯಾಹ್ನ ೧ ಗಂಟೆಯಿಂದ ೩ ಗಂಟೆಯ ತನಕ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ೭.೩೦ಕ್ಕೆ ಮಹಾಪೂಜೆ ಜರುಗಲಿದ್ದು, ನಂತರ ತೀರ್ಥ ಪ್ರಸಾದ ವಿತರಿಸಲಾಗುತ್ತದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಶೃಂಗೇರಿ ಮಠದ (Sringeri) ಧರ್ಮಾಧಿಕಾರಿ ವೇ.ಮೂ. ಲೋಕೇಶ ಅಡಿಗ, ಬಡಾಕೇರಿಯ ನಾಗಪಾತ್ರಿಗಳು ಮತ್ತು ಪ್ರಧಾನ ಅರ್ಚಕರಾದ ಲಕ್ಷ್ಮೀಶ ಅಡಿಗ ಹಾಗೂ ರಾಘು ಭಟ್ಟ ನೇತೃತ್ವದಲ್ಲಿ ಜರುಗಲಿದೆ.
ಇದನ್ನೂ ಓದಿ : Bhatkal/ ಹೆಬಳೆಯಲ್ಲಿ ಪೊಲೀಸರ ಅತಿಥಿಯಾದ ಏಳು ಜನ