ಕುಮಟಾ (Kumta) : ವಾಹನ ಕೆಟ್ಟು ರಾತ್ರಿ ಹೊತ್ತು ಅರಣ್ಯದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಭಾನುವಾರ ಪೊಲೀಸರು ರಕ್ಷಿಸಿದ್ದಾರೆ (Rescue of tourists).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನಿಂದ (Bengaluru) ಬಂದಿದ್ದ ಪ್ರವಾಸಿಗರ ಮಿನಿ ಬಸ್ ಯಾಣ (Yaana) ಗುಡ್ಡದ ರಸ್ತೆಯ ತಿರುವಿನಲ್ಲಿ ಬ್ರೇಕ್ ಡೌನ್ ಆಗಿತ್ತು. ಅಕ್ಕ-ಪಕ್ಕದಲ್ಲಿ ಅರಣ್ಯ ಪ್ರದೇಶ, ಜೊತೆಗೆ ರಾತ್ರಿಯಾಗಿತ್ತು. ಯಾವುದೇ ಮೊಬೈಲ್ ನೆಟವರ್ಕ್ ಇರಲಿಲ್ಲ. ಎಂಟು ಹುಡುಗಿಯರು, ೧೬ ಹುಡುಗರು ಮತ್ತು ಓರ್ವ ಮಾರ್ಗದರ್ಶಕ ವಾಹನದಲ್ಲಿದ್ದರು.

ಇದನ್ನು ಓದಿ : Mariyamma/ ಗಂಜಿ ಮಾರಿಯಮ್ಮ ದೇವಿ ಪ್ರತಿಷ್ಠಾಪನೆ

ರಾತ್ರಿ ೮.೪೦ರ ಸುಮಾರು ERSS ೧೧೨ ಸಹಾಯವಾಣಿಗೆ ಬಂದ ಮಾಹಿತಿಯಂತೆ ಗೋಕರ್ಣ (Gokarna) ಪೊಲೀಸರು ಸಹಾಯಕ್ಕೆ ಮುಂದಾದರು. ಸಂದೇಶದ ಮೇರೆಗೆ ತಕ್ಷಣ ಕಾರ್ಯಪ್ರವತ್ತರಾಗಿ, ಕರೆದಾರರಿಗೆ ಪುನಃ ಪುನಃ ಕರೆ ಮಾಡಿದರೂ ನೆಟವರ್ಕ ಸಿಗದೇ ಸಂಪರ್ಕ ಸಾಧ್ಯವಾಗಲಿಲ್ಲ. ಪ್ರವಾಸಿಗರನ್ನು ಹುಡುಕಾಡುತ್ತಾ ರಾತ್ರಿ ೯.೪೫ ಗಂಟೆಗೆ ಪೊಲೀಸರು ಸ್ಥಳಕ್ಕೆ ತಲುಪಿದರು.

ಇದನ್ನು ಓದಿ : Music/ ಸಿದ್ದಿವಿನಾಯಕ ದೇವಾಲಯದಲ್ಲಿ ಭಕ್ತಿ ಸಂಗೀತ

ಪ್ರವಾಸಿಗರ ಬ್ರೇಕ್ ಡೌನ ಆದ ವಾಹನವನ್ನು ಜೆಸಿಬಿ, ಅಚವೆ ಉಪಠಾಣೆ ಪೊಲೀಸರು, ಸ್ಥಳೀಯರ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ತರಲಾಯಿತು. ಪ್ರವಾಸಿಗರಿಗಾಗಿ ಟೆಂಪೋ ವಾಹನದ ವ್ಯವಸ್ಥೆ ಮಾಡಿಸಿ, ಹಿಲ್ಲೂರಿನ ಮುಖ್ಯ ರಸ್ತೆಗೆ ತಂದು ಬಿಡಲಾಯಿತು. ಅಲ್ಲಿಂದ, ಇನ್ನೊಂದು ವಾಹನದಲ್ಲಿ ಪ್ರವಾಸಿಗರು ಬೆಂಗಳೂರಿಗೆ ಹೊರಟಿದ್ದಾರೆ (rescue of tourists).

ಇದನ್ನು ಓದಿ : Kumta / ಹಳ್ಳಕ್ಕೆ ಬಿದ್ದು ಮೂರು ವರ್ಷದ ಮಗು ನಿಧನ

ಕರೆಗೆ ಕೂಡಲೇ ಸ್ಪಂದಿಸಿ, ಪ್ರವಾಸಿಗರನ್ನು ಸುರಕ್ಷಿತವಾಗಿ ಬೇರೆ ಸ್ಥಳಕ್ಕೆ ಕರೆತಂದು ಬಿಟ್ಟ ಉತ್ತರ ಕನ್ನಡ ಪೊಲೀಸರ ನಡೆಯನ್ನು ಪ್ರವಾಸಿಗರು ಕೊಂಡಾಡಿದ್ದಾರೆ. ರಾತ್ರಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಗೋಕರ್ಣ ಇ.ಆರ್.ಎಸ್.ಎಸ್-೧೧೨ರ ಸಿಬ್ಬಂದಿ ಸಂತೋಷ ಮಾಳಗೌಡರ, ಮಹೇಶ ನಾಯ್ಕ, ಅಚವೆ ಉಪಠಾಣೆ ಹೆಚ್.ಸಿ. ಪಂಡರಿನಾಥ ಮುಂಬೈಕರ ರವರ ಕರ್ತವ್ಯ ಪ್ರಜ್ಞೆ (sense of duty) ಮೆಚ್ಚಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಬಹುಮಾನ (reward) ಘೋಷಿಸಿದ್ದಾರೆ.

ಇದನ್ನು ಓದಿ : Dog bite / ಹುಚ್ಚು ನಾಯಿ ಕಡಿದು ಮೂರು ಮಕ್ಕಳಿಗೆ ಗಾಯ