ಭಟ್ಕಳ (Bhatkal) : ಮುರುಡೇಶ್ವರದಲ್ಲಿ (Murudeshwar) ಕಳೆದ ವರ್ಷದಿಂದ ಆರಂಭವಾಗಿದ್ದ ಮಹಾ ಶಿವರಾತ್ರಿ (Maha Shivaratri) ಜಾಗರಣೆ ಉತ್ಸವವನ್ನು ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆದಿದೆ. ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ಮಹಾಶಿವರಾತ್ರಿ ಉತ್ಸವದ ಸಿದ್ದತೆ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಾದಯಾತ್ರೆ ನಡೆಸಿ ಬರುವ ಭಕ್ತರಿಗೆ ಬೆಳಿಗ್ಗೆಯಿಂದಲೇ ದೇವರ ದರ್ಶನಕ್ಕಾಗಿ ಕಳೆದ ವರ್ಷದಂತೆ ಈ ವರ್ಷವೂ ದೇವಸ್ಥಾನವನ್ನು ನಸುಕಿನ ಜಾವ ೪ ಗಂಟೆಗೆ ತೆರಯಲು ಆಡಳಿತ ಮಂಡಳಿಯವರಿಗೆ ಸಚಿವರು ವಿನಂತಿಸಿದ್ದಾರೆ. ಶಿರೂರು, ಭಟ್ಕಳ, ಉತ್ತರಕೊಪ್ಪ, ಮಂಕಿ ಹೊನ್ನಾವರ (Honnavar) ದಿಂದ ಬರುವ ಭಕ್ತರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲು ಕನಿಷ್ಟ ೨೦ ಬಸ್ಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ಇದನ್ನೂ ಓದಿ : Cheater arrest / ವಿದೇಶಕ್ಕೆ ಹಾರಿದ್ದ ವಜಾಗೊಂಡ ಯಲ್ಲಾಪುರದ ಪಿಡಿಒ ಸೆರೆ
ಶಿವರಾತ್ರಿಯ ಜಾಗರಣೆ ನಡೆಸುವ ಉದ್ದೇಶದಿಂದ ಸಂಜೆ ೬ ಗಂಟೆಯಿಂದ ಬೆಳಗಿನ ಜಾವ ೬ ಗಂಟೆಯವರೆಗೆ ಮುರುಡೇಶ್ವರದಲ್ಲಿ (Murudeshwar) ರಾಜ್ಯದ ಪ್ರಸಿದ್ಧ ಕಲಾವಿದರಿಂದ ಭಕ್ತಿ (Devotional) ಸಿಂಚನ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ಕೊಡಲಾಗುತ್ತದೆ. ಶುಕ್ರವಾರದ ಒಳಗೆ ತಹಸೀಲ್ದಾರ ಅಥವಾ ಎಸಿ ಕಚೇರಿಯಲ್ಲಿ ಹೆಸರು ನೊಂದಾಯಿಸಬೇಕು. ಭಕ್ತಿ ಕಾರ್ಯಕ್ರಮ ಬಿಟ್ಟರೆ ಇನ್ಯಾವುದೇ ಕಾರ್ಯಕ್ರಮಗಳಿಗೆ ಆಸ್ಪದವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : Child death/ ಜೆಸಿಬಿ ಅಡಿಯಲ್ಲಿ ೨ ವರ್ಷದ ಮಗು ಕೊನೆಯುಸಿರು
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಶಿವರಾತ್ರಿ ದಿವಸ ಸರಬರಾಜು ಆಗುವ ಆಹಾರದ ಗುಣಮಟ್ಟ (food quality) ಮೊದಲೇ ಪರೀಕ್ಷಿಸಬೇಕು. ಮುರುಡೇಶ್ವರದಲ್ಲಿ (Murudeshwar) ನೀರಿನ ಶುದ್ಧತೆ, ಸ್ಥಳದ ಸ್ವಚ್ಛತೆ, ವಿದ್ಯುತ್ ಸಂಪರ್ಕ, ಸುರಕ್ಷತೆ ವ್ಯವಸ್ಥೆ, ಅಗ್ನಿಶಾಮಕ, ಮೊಬೈಲ್ ಟಾಯ್ಲೆಟ್ (Mobila toilet) ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರೀಶಿಲನೆ ನಡೆಸಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : Accident/ ಅಪಘಾತದಲ್ಲಿ ತಂದೆ-ತಾಯಿ, ಮಗು ದುರ್ಮರಣ
ಎಸ್ಪಿ ಎಂ. ನಾರಾಯಣ ಮಾತನಾಡಿ, ಕಳೆದ ಬಾರಿ ಶಿವನ ಮೂರ್ತಿಯನ್ನು ವಿಕೃತಗೊಳಿಸಿ ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳನ್ನು ಸ್ವತಃ ನಾನೇ ಬಂದು ಬಂಧಿಸಿದ್ದೆ. ಈ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಯತ್ನ ಮಾಡಿದರೆ ಅವರ ಹೆಡೆಮುರಿ ಕಟ್ಟಲಾಗುವದು. ಕಳ್ಳರ ಗುಂಪಿನ ಕುರಿತು ಪೊಲೀಸ್ ಇಲಾಖೆ ನಿಗಾವಹಿಸಿದೆ. ಮಹಿಳೆಯರು, ಯುವತಿಯರನ್ನು ಚುಡಾಯಿಸಿದಂತೆ ತಡೆಯಲು ಮಹಿಳಾ ಪೊಲೀಸರು ಮಪ್ತಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾಲ್ತುಳಿತ ನಡೆಯದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ. ಕರಾವಳಿ ಕಾವಲು ಪಡೆಯು (coast guard) ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು ಅವರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಸಲಿದ್ದಾರೆ ಎಂದರು.
ಇದನ್ನೂ ಓದಿ : Kumta/ ಗೇರು ಮರಕ್ಕೆ ನೇಣು ಬಿಗಿದ ವೃದ್ಧ
ಈ ಸಂದರ್ಭದಲ್ಲಿ ಪ್ರಭಾರಿ ಸಹಾಯಕ ಆಯುಕ್ತೆ ಕಾವ್ಯಾರಾಣಿ, ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಡಿವೈಎಸ್ಪಿ ಮಹೇಶ ಎಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು ಕೂಡ ತಮ್ಮ ಸಲಹೆಗಳನ್ನು ನೀಡಿದರು.
ಇದನ್ನೂ ಓದಿ : accident/ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ