ಭಟ್ಕಳ (Bhatkal) : ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ‌ ಶಾಲೆ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ (science day) ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ (science models) ಪ್ರದರ್ಶನ ಶುಕ್ರವಾರದಂದು ಚೆನ್ನಪಟ್ಟಣ ಹನುಮಂತ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ನಿವೃತ್ತ ಮುಖ್ಯಾಧ್ಯಾಪಕ ಎಂ.ಕೆ. ನಾಯ್ಕ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನಿ ಸಿ.ವಿ. ರಾಮನ್ (CV Raman) ಅವರ ರಾಮನ್ ಪರಿಣಾಮದ ಆವಿಷ್ಕಾರವನ್ನು ಸ್ಮರಿಸಲು ಪ್ರತಿವರ್ಷ ಫೆಬ್ರವರಿ ೨೮ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ವಿಜ್ಞಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮುಂಬರುವ ಪೀಳಿಗೆಗೆ ವಿಜ್ಞಾನದ ಮಹತ್ವವನ್ನು ವಿವರಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : Complaint to Governor/ ಸಚಿವ ಮಂಕಾಳ ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು

ಕಾರ್ಯಕ್ರಮದ ಮುಖ್ಯ ಅತಿಥಿ, ಪತ್ರಕರ್ತ ಪ್ರಸನ್ನ ಭಟ್ಟ ಮಾತನಾಡಿ, ‘ಇಂದಿನ ಮಕ್ಕಳು ದೇಶದ ಸಂಪತ್ತು. ಅವರನ್ನು ಸಂಪತ್ತು ಭರಿತರನ್ನಾಗಿಸುವ ಮಾರ್ಗವೆಂದರೆ ಜ್ಞಾನ. ಜ್ಞಾನ, ಶಿಕ್ಷಣದ ಜೊತೆಗೆ ಇಂದಿಗೆ ಅವಶ್ಯಕವಾದ ವಿಜ್ಞಾನ ವಿಚಾರದಲ್ಲಿ ಮಕ್ಕಳ ಆಸಕ್ತಿದಾಯಕ ವಿಷಯದಲ್ಲಿ ಪಾಲಕರು ಪ್ರೋತ್ಸಾಹಿಸಬೇಕಾಗಿದೆ. ಮಕ್ಕಳು ಸಹ ಶಿಕ್ಷಣದ ಜೊತೆಗೆ ಪೂರಕ ಆಸಕ್ತಿಯನ್ನು ಬೆಳೆಸಿಕೊಂಡು ದೇಶಕ್ಕೆ ಉತ್ತಮ ಪ್ರಜೆಯಾಗಬೇಕಾದ ಜವಾಬ್ದಾರಿ ಸಹ ಇದೆ. ಇವೆಲ್ಲದಕ್ಕೂಅವರಲ್ಲಿ ಶಿಸ್ತು, ತಾಳ್ಮೆ, ಸಮಯ ಪ್ರಜ್ಞೆ ಅವಶ್ಯಕವಾಗಿದೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : Gokarna/ ಕಪಾಳಮೋಕ್ಷ ಪ್ರಕರಣ ಭಟ್ಕಳ ಡಿವೈಎಸ್ಪಿ ಹೆಗಲಿಗೆ

ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಎನ್.ಬಡಾಳ ಮಾತನಾಡಿ, ‘ಮಕ್ಕಳಲ್ಲಿ ವಿಜ್ಞಾನವು ಬರಬೇಕಾದರೆ ಅದು ರೂಢಿಯಿಂದ ಬರಬೇಕಿದೆ. ಚಿಕ್ಕಂದಿನಿಂದಲೇ ಅವರಿಗೆ ಯಾವುದೇ ವಿಷಯದಲ್ಲಿ ಕೂತೂಹಲ ಮತ್ತು ಪ್ರಶ್ನೆ ಉದ್ಭವವಾಗಬೇಕು. ಆಗ ಮಾತ್ರ ಅದು ವಿಜ್ಞಾನದತ್ತ ಆಸಕ್ತಿ ಮೂಡಿಸಲಿದೆ. ಉತ್ತಮ ತರಬೇತಿಯಿಂದ ಮಕ್ಕಳನ್ನು ವಿಜ್ಞಾನದತ್ತ ಸೆಳೆಯಲು ಸಾಧ್ಯ. ಎಲ್ಲರು ಸಹ ಬಹುತೇಕವಾಗಿ ಚಿಕ್ಕಂದಿನಲ್ಲಿ ಸಿಕ್ಕ ವಸ್ತುಗಳಿಂದ ಏನನ್ನಾದರು ವಿಜ್ಞಾನ ಸಹಿತ ಪ್ರಯೋಗ ಮಾಡಿದ್ದೇವೆ. ಅದಕ್ಕೆ ಸರಿಯಾದ ಮಾರ್ಗದರ್ಶನ ಬೇಕಿದೆ. ಈ ಮಾರ್ಗದರ್ಶನ ನೀಡಲು ನಾನು ಸಿದ್ದನಿದ್ದೇನೆ ಎಂದರು.

ಇದನ್ನೂ ಓದಿ : Murudeshwar/ ಗಂಗಾ ಜಲದಿಂದ ಅಭಿಷೇಕ

ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಹರೀಶ ದೇವಾಡಿಗ ಮಾತನಾಡಿ, ‘ಕನ್ನಡ ಶಾಲೆಯ ಮಕ್ಕಳೇ ಮುಂದೆ ವಿಜ್ಞಾನಿಗಳಾಗಬೇಕು ಎಂಬ ಆಶಯ ‌ನಮ್ಮದು. ಕನ್ನಡ ಶಾಲೆಯು ಎಲ್ಲಾ ಹಂತದಲ್ಲಿಯೂ ಮುಂದೆ ಬರಬೇಕು. ಕನ್ನಡ ಶಾಲೆಗೆ ಪಾಲಕರು ಮಕ್ಕಳ ಸೇರ್ಪಡೆ ಹೆಚ್ಚಾಗಿ ಮಾಡಬೇಕು. ಕಾರಣ ನಮ್ಮ ಶಾಲೆಗಳ ಏಳಿಗೆಗೆ, ಶಿಕ್ಷಕರಿಗೆ ಪಾಲಕರ ಸಾಥ್ ಪ್ರಮುಖವಾದದ್ದು. ನಮ್ಮಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕಾಗಿದೆ ಎಂದರು.

ಇದನ್ನೂ ಓದಿ : Best Physic/ ಭಟ್ಕಳದ ವಿದ್ಯಾರ್ಥಿಗಳ ಸಾಧನೆ

ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಸುಶೀಲಾ ಮೊಗೇರ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕ ಜನಾರ್ದನ ಮೊಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ಪದ್ಮ ನಾಯ್ಕ ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಶಾಲೆಯ ೧ನೇ ತರಗತಿ ಯಿಂದ ೭ತರಗತಿಯ ೬೬ ವಿದ್ಯಾರ್ಥಿಗಳು ವಿವಿಧ ಮಾದರಿಯ ವಿಜ್ಞಾನ ಪ್ರಯೋಗವನ್ನು (science models) ಪ್ರದರ್ಶಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಮತ್ತು ಪಾಲಕರ ಮುಂದೆ ಮಂಡಿಸಿ, ಅತಿಥಿಗಳ ಪ್ರಶ್ನೆಗೆ ಉತ್ತರಿಸಿ, ಪ್ರಯೋಗದ ಬಗ್ಗೆ ವಿವರಿಸಿದರು.

ಇದನ್ನೂ ಓದಿ : Pratibha Puraskar/ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ