ಭಟ್ಕಳ (Bhatkal): ಬ್ಯಾಂಕಿನ ಸಾಲ ತೀರಿಸಲಾಗದ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಯುವ ರೈತನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ (young farmer death).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಹಾಡುವಳ್ಳಿಯ ಹಲ್ಯಾಣಿ ಹಿರೇಬೆಳ್ಳು ನಿವಾಸಿ ದಾಮೋದರ ಈರಪ್ಪ ನಾಯ್ಕ (೩೫) ಮೃತ ಯುವ ಕೃಷಿಕ. ಇವರು ರೈತಾಪಿ ಕೆಲಸ ಮಾಡಿಕೊಂಡಿದ್ದರು. ಫೆ.೨೫ರಿಂದ ಕಾಣೆಯಾಗಿದ್ದ ಇವರು ಫೆ. ೨೮ರಂದು ಸಂಜೆ ೫ ಗಂಟೆಯ ಸುಮಾರಿಗೆ ತಮ್ಮ ಪಕ್ಕದ ಜಮೀನಿನ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ (young farmer death).

ಇದನ್ನೂ ಓದಿ : Temperature/ ೪೦ ಡಿಗ್ರಿ ಸೆಲ್ಸಿಯಸ್‌ ಮೀರಿದ ತಾಪಮಾನ

೩ ವರ್ಷಗಳ ಹಿಂದೆ ಭಟ್ಕಳದ ಜನತಾ ಕೋ-ಆಪರೇಟಿವ್ ಬ್ಯಾಂಕನಲ್ಲಿ ೫೦,೦೦೦ ರೂ ಸಾಲ ಮಾಡಿಕೊಂಡಿದ್ದರು. ಹೊಲದಲ್ಲಿ ಬೆಳೆ ಸರಿಯಾಗಿ ಬಾರದೇ ಇರುವುದರಿಂದ ಬ್ಯಾಂಕಿನ ಸಾಲ ತೀರಿಸಲು ಆಗಿರಲಿಲ್ಲ. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : science models/ ವಿಜ್ಞಾನ ಮಾದರಿಗಳ ಪ್ರದರ್ಶನ