ಭಟ್ಕಳ (Bhatkal) : ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ಘಟಕವಾದ ಭಟ್ಕಳ ರೋಟರಾಕ್ಟ್ (Rotaract) ಕ್ಲಬ್ ಹಾಗೂ ಭಟ್ಕಳ ರೋಟರಿ ಕ್ಲಬ್‌ ಸಹಭಾಗಿತ್ವದಲ್ಲಿ ರೋಟರಾಕ್ಟ್ ಬಹು ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವು ವೈಭವಯುತವಾಗಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರವಾಸೋದ್ಯಮ (tourism) ಉತ್ತೇಜಿಸಲು ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಾಕ್ಟ್ (Rotaract) ಜಿಲ್ಲೆ ೩೧೭೦ರ ಜಿಲ್ಲಾ ಅಂತರಾಷ್ಟ್ರೀಯ ಸೇವಾ ನಿರ್ದೇಶಕ ರಣವೀರ್ ಜಾಧವ, “ರೋಟರಾಕ್ಟ್ ಬಹು ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವು ಒಂದು ವಿಶಿಷ್ಟ ಕಲ್ಪನೆ. ಇದು ವಿವಿಧ ಪ್ರದೇಶಗಳ ಜನರ ಆಚಾರ – ವಿಚಾರ, ಸಂಪ್ರದಾಯ. ಪರಂಪರೆ, ಇತಿಹಾಸದ ಕುರಿತು ತಿಳಿದುಕೊಳ್ಳಲು ಒಂದು ಉತ್ತಮ ವೇದಿಕೆ” ಎಂದರು.

ಇದನ್ನು ಓದಿ : pre-monsoon / ಅವಧಿಗಿಂತ ಮುನ್ನ ಪೂರ್ವ ಮುಂಗಾರು ಮಳೆ !

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ ಮಾತನಾಡಿ, “ದೇಶ, ಭಾಷೆ, ಸಂಸ್ಕೃತಿ ಹಾಗೂ ಧರ್ಮಗಳ ನಡುವಿನ ಕಂದಕ ಕಡಿಮೆಯಾಗಿ ವಿಶ್ವಮಾನವತೆಯ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಇಂತಹ ಯೋಜನೆಗಳು ಸಹಕಾರಿ” ಎಂದರು.

ಇದನ್ನು ಓದಿ : Auction/ ಕಾರು, ೨ ಆಟೋ ರಿಕ್ಷಾ ಹರಾಜಿಗೆ

ಕಾರ್ಯಕ್ರಮದ ಮುಖ್ಯ ಅತಿಥಿ, ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಮ್ಯಾನೇಜರ್ ಹಾಗೂ ರೋಟರಿ ಪ್ರಮುಖ ರಾಜೇಶ ನಾಯಕ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವಿವಿಧ ರಾಜ್ಯಗಳ ರೋಟರಾಕ್ಟ್ ಪ್ರತಿನಿಧಿಗಳಿಗೆ ಶುಭ ಹಾರೈಸಿದರು.

ಇದನ್ನು ಓದಿ : Journalist death/ ಪತ್ರಕರ್ತ ಶಿವಶಂಕರ ಹೃದಯಾಘಾತದಿಂದ ನಿಧನ

ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ರಮ್ಯಾ ರಾವ್ ಸ್ವಾಗತಿಸಿದರು. ಯೋಜನಾ ಅಧ್ಯಕ್ಷ ನಾಗಪ್ಪಯ್ಯ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಕಾರ್ಯದರ್ಶಿ ನೇಹಾ ಭಂಡಾರಿ ನಿರೂಪಿಸಿದರು. ಕಾರ್ಯದರ್ಶಿ ಛಾಯಾ ಪುರಾಣಿಕ ವಂದಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ರೋಟರಿ ಮತ್ತು ರೋಟರಾಕ್ಟ್ ಸದಸ್ಯರು ಉಪಸ್ಥಿತರಿದ್ದರು.

ಇದನ್ನು ಓದಿ : Robotics/ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಬಹುಮಾನ

ಕಾರ್ಯಕ್ರಮದಲ್ಲಿ ಚೆನ್ನೈ (Chennai), ಮಧುರೈ (Madurai), ಗುಜರಾತ (Gujarat) ಮತ್ತು ದೆಹಲಿಯಿಂದ (Delhi) ರೋಟರಾಕ್ಟ್ ಪ್ರತಿನಿಧಿಗಳು ಆಗಮಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಇತಿಹಾಸದ ಕುರಿತು ಅಧ್ಯಯನ ನಡೆಸಿದರು.

ಇದನ್ನು ಓದಿ : Complaint/ ಶಾಲಾ ವಾಹನ ಚಾಲಕನ ವಿರುದ್ಧ ದೂರು ದಾಖಲು