ಕಾರವಾರ (Karwar) : ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಾಮದಹನ, ಹೋಳಿ ಹಬ್ಬ (Holi Festival), ರಂಗಪ೦ಚಮಿ (Ranga Panchami) ದಿವಸಗಳಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ವಿವಿಧ ತಾಲೂಕು/ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬಾರ್/ವೈನ್ ಶಾಪ್ ಗಳನ್ನು ಮತ್ತು ಎಲ್ಲಾ ರೀತಿಯ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿ (Liquor ban) ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಸಿ (Sirsi) ಶಹರ ಮತ್ತು ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.೧೨ ರಂದು ಬೆಳಗ್ಗೆ ೬ ಗಂಟೆಯಿಂದ ಮಾ.೧೫ರ ಬೆಳಗ್ಗೆ ೬ ಗಂಟೆಯವರೆಗೆ ನಿಷೇಧವಿದೆ. ದಾಂಡೇಲಿ (Dandeli), ಹಳಿಯಾಳ (Haliyal), ಜೋಯಿಡಾ(Joida), ಕಾರವಾರ(Karwar), ಅಂಕೋಲಾ(Ankola), ಭಟ್ಕಳ(Bhatkal), ಹೊನ್ನಾವರ(Honnavar), ಸಿದ್ದಾಪುರ (siddapur) ತಾಲೂಕಿನಾದ್ಯಂತ ಮತ್ತು ಕುಮಟಾ (Kumta) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ. ೧೩ ರಂದು ಬೆಳಗ್ಗೆ ೬ ಗಂಟೆಯಿಂದ ಮಾ.೧೫ ರಬೆಳಗ್ಗೆ ೬ ಗಂಟೆಯವರೆಗೆ ನಿಷೇಧವಿದೆ. ಯಲ್ಲಾಪುರ (Yellapur) ತಾಲೂಕಿನಾದ್ಯಂತ ಮಾ.೧೪ ರಂದು ಬೆಳಗ್ಗೆ ೬ ಗಂಟೆಯಿಂದ ಮಾ.೧೬ ರ ಬೆಳಗ್ಗೆ ೬ ಗಂಟೆಯವರೆಗೆ ಹಾಗೂ ಮುಂಡಗೋಡ (Mundgod) ತಾಲೂಕಿನಾದ್ಯಂತ ಮಾ.೧೯ ರಂದು ಬೆಳಗ್ಗೆ ೬ ಗಂಟೆಯಿಂದ ಮಾ. ೨೦ ರ ಬೆಳಗ್ಗೆ ೬ ಗಂಟೆಯವರೆಗೆ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ (Liquor ban).
ವಿಡಿಯೋ ಸಹಿತ ಇದನ್ನೂ ಓದಿ : Havaldar suspend/ ಶಿರಸಿ ಹೆಡ್ ಕಾನಸ್ಟೇಬಲ್ ಅಮಾನತು