ಭಟ್ಕಳ (Bhatkal): ಇಲ್ಲಿನ ಗ್ರಾಮೀಣ ಠಾಣೆಯ ಪೊಲೀಸರು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ (Police Raid). ಅಕ್ರಮವಾಗಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ೧೫ ಕೋಣಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆರೋಪಿಗಳನ್ನು ಜೈನುಲ್ಲಾ ಚಮನ್ ಶಾಬ್ (28) ಹಾಗೂ ಇಮಾಮ್ ಹುಸೇನ್ ಮೌಲಾಲಿ ಎಂದು ಗುರುತಿಸಲಾಗಿದೆ. ಇವರು ಹಾವೇರಿ (Haveri) ಜಿಲ್ಲೆಯ ಅಕ್ಕಿಆಲೂರು (Akkialur) ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು  ಕೋಣಗಳ ಸಾಗಾಟಕ್ಕೆ ಪರವಾನಿಗೆ ಇಲ್ಲದೆ ಸಾಗಾಟ ಮಾಡುವ ವೇಳೆ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ (Police Raid). ಬಳಿಕ ವಾಹನವನ್ನು ಭಟ್ಕಳ ಗ್ರಾಮೀಣ ಠಾಣೆಗೆ ತಂದು ಆರೈಕೆ ಮಾಡಲಾಗಿದೆ. ಒಟ್ಟು ೧೭ ಕೋಣಗಳಲ್ಲಿ ೨ ಕೋಣಗಳು ಸಾವನ್ನಪ್ಪಿದೆ. ಇನ್ನುಳಿದ ೧೫ ಕೋಣಗಳನ್ನು ಬೇರೆ ವಾಹನಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ : Car Collision/ ಕಾರು ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಗಂಭೀರ

ಪಿಎಸೈಗಳಾದ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ವಿನೋದ ಕುಮಾರ ರೆಡ್ಡಿ, ಮಂಜು ಖಾರ್ವಿ, ವೀರಣ್ಣ ಬಳ್ಳಾರಿ, ಕಿರಣ ತಿಲಗಂಜಿ, ಚಾಲಕ ದೇವರಾಜ ಮೊಗೇರ ಇದ್ದರು. ಈ ವೇಳೆ ಹಿಂದು ಜಾಗರಣಾ ವೇದಿಕೆ (HJV) ಅಧ್ಯಕ್ಷ ಜಯಂತ ನಾಯ್ಕ,  ಸಹ ಸಂಚಾಲಕರಾದ ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ (BJP) ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ ಹಾಗೂ ಕೆಲ  ಕೆಲ ಮುಸ್ಲಿಂ ಯುವಕರು  ಕೋಣಗಳ  ಆರೈಕೆಗೆ ಪೊಲೀಸರಿಗೆ ಸಹಕರಿಸಿದ್ದಾರೆ. ಬಿಸಿಲಿನಿಂದ ಬಸವಳಿದಿದ್ದ ಕೋಣಗಳಿಗೆ ತಣ್ಣೀರ ಸ್ನಾನ ಮಾಡಿಸಲಾಗಿದೆ.

ಕೋಣಗಳ ರಕ್ಷಣೆಯ ವಿಡಿಯೋವನ್ನು  ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Tanker Collision/ ಟ್ಯಾಂಕರ್‌ ಡಿಕ್ಕಿಯಾಗಿ ಮೀನುಗಾರ ಗಂಭೀರ