ಭಟ್ಕಳ (Bhatkal) : ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ (education system) ಸುಸಜ್ಜಿತ ಕಟ್ಟಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಪುಸ್ತಕಗಳು ಎಲ್ಲವೂ ಇವೆ. ಆದರೆ ಮಕ್ಕಳಿಗೆ ಸಂಕಷ್ಟ ಬಂದಾಗ ಎದುರಿಸಿ ಬದುಕಲು ಕಲಿಸುವ ಜೀವನ ಶಿಕ್ಷಣ ಮತ್ತು ಮೌಲ್ಯಯುತ ಶಿಕ್ಷಣ (Valuable education ) ಮಾತ್ರ ಇಲ್ಲದಾಗಿದೆ ಎಂದು ಭಟ್ಕಳ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ವೆಂಕಟರಮಣ ವಿ. ಭಟ್ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ (Jnaneshwari) ಶಿಕ್ಷಣ ಮಹಾವಿದ್ಯಾಲಯದಲ್ಲಿ (B.Ed. College) ಆಯೋಜಿಸಿದ್ದ ವಾರ್ಷಿಕ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಹೊಸ ವಿದ್ಯಾರ್ಥಿಗಳನ್ನು ಮಹಾವಿದ್ಯಾಲಯಕ್ಕೆ ಸ್ವಾಗತಿಸುವ “ ಆಗಮನ ೨೦೨೫” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಮುರ್ಡೇಶ್ವರದ (Murudeshwar) ಆರ್.ಎನ್ ಎಸ್. (RNS) ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾlಲೆ ಗೀತಾ ಕಿಣಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಜ್ಞಾನದ ಜೊತೆಗೆ ತಾಳ್ಮೆ ಮತ್ತು ಸಮರ್ಪಣಾ ಭಾವದಿಂದ ಶಿಕ್ಷಕರಾಗುವವರು ಕೆಲಸ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ : Woman / ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಟ್ರಸ್ಟಿ ಗುರುದತ್ತ ಶೇಟ್, ಪ್ರಾಂಶುಪಾಲ ಡಾ. ವಿರೇಂದ್ರ ವಿ ಶ್ಯಾನಭಾಗ ಮತ್ತು ಪ್ರಧಾನ ಕಾರ್ಯದರ್ಶಿ ಪಲ್ಲವಿ ಉಪಸ್ಥಿತರಿದ್ದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಅದ್ಯಕ್ಷರಾದ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ನೂತನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಮೈನಾ ಸ್ವಾಗತಿಸಿದರು, ಅರ್ಚನಾ ವಂದಿಸಿದರು, ಪ್ರಿಯಾಂಕಾ ದೇವಾಡಿಗ, ಪೂಜಾ ಪ್ರಕಾಶ ಮತ್ತು ಪ್ರೇಮಾಕ್ಷ್ಕಿ ನಿರೂಪಿಸಿದರು.

ಇದನ್ನೂ ಓದಿ : Humanity/ ಆಟೋ ಚಾಲಕರ ಮಾನವೀಯತೆ