ಸೊರಬ : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಆಚರಿಸುವ ಎಲ್ಲ ಆಚರಣೆಗಳಲ್ಲಿ ವಿಶಿಷ್ಟವಾದ ಅರ್ಥವಿದ್ದು, ಚಿಂತಿಸಿದಾಗ ಅದರ ಅರ್ಥವ್ಯಾಪ್ತಿ ಅರಿವಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಇದನ್ನೂ ಓದಿ :  ಸುಬ್ರಹ್ಮಣ್ಯ : ನಾಗರನಿಂದ ಮಗುವನ್ನು ರಕ್ಷಿಸಿದ ನಾಯಿ

ತಾಲೂಕಿನ ತೊರವಂದ ಗ್ರಾಮದ ಸಮೀಪದ ಉಜ್ಜನಿಪುರದ ಬಸವೇಶ್ವರ ಸೇವಾ ಸಮಿತಿ ಹಾಗೂ ಭಕ್ತವೃಂದದ ಸಹಕಾರದಿಂದ ನಿರ್ಮಿಸಿ ಪ್ರತಿಷ್ಠಾಪಿಸಿದ ಬಸವೇಶ್ವರ, ಗಣಪತಿ ಹಾಗೂ ನಾಗದೇವರ ಆಲಯ ಪ್ರವೇಶ ಮತ್ತು ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮಸಭೆ ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಇದನ್ನೂ ಓದಿ :  ೭ನೇ ವೇತನ ಆಯೋಗ ವರದಿ ಬಂದ ನಂತರ ತೀರ್ಮಾನ- ಸಿದ್ದರಾಮಯ್ಯ

ನಮ್ಮ ಆಚರಣೆಯ ಕಾರ್ಯಗಳ ಹಿಂದೆ ಒಂದು ಉದ್ದೇಶವಿದು, ಜಗತ್ತಿನ ಹಿತ ಕಾಯುವ ಅರ್ಥವಿರುತ್ತದೆ. ಆ ಅರ್ಥ ನಮಗೆ ಈಗ ಸದ್ಯಕ್ಕೆ ತಿಳಿಯದಿರಬಹುದು. ಆದರೆ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಟ್ಟಾಗ ಅದರ ಮಹತ್ವ ನಮಗೆ ಅರಿವಾಗುತ್ತದೆ. ನಮ್ಮ ಸಂಸ್ಕೃತಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ರಹದಾರಿಯನ್ನು ತೋರುತ್ತದೆ. ಇದು ನಮ್ಮ ಪುರಾತನರ ಆಶಯವಾಗಿತ್ತು. ಆದ್ದರಿಂದ ಅಂತಹ ಆಚರಣೆಗಳನ್ನು ಸಂಪ್ರದಾಯದ ಹೆಸರಲ್ಲಿ ರೂಢಿಯಲ್ಲಿ ಬಂದಿದೆ ಎಂದರು.

ಈ ವಿಡಿಯೋ ನೋಡಿ : ಶ್ರೀ ಕ್ಷೇತ್ರ ಹೇಗಲತ್ತಿ ಜಾತ್ರೆ   https://fb.watch/qtFY2M4Npt/?mibextid=Nif5oz
ಇಂದಿನ ಆಧುನಿಕ ಯುಗದಲ್ಲಿ ಯುವಕರು ನಮ್ಮ ಆಚರಣೆಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ಆ ದೇಶದ ಮಾತೃಸಂಸ್ಕೃತಿಗೆ ಮಾಡುತ್ತಿರುವ ಅಪಚಾರ. ದೇವರು ಎಂದರೆ ನಮ್ಮ ಅಂತರಂಗದ ಅರಿವನ್ನು ತೋರಲು ಇರುವ ಸಾಧನ. ಅಂತರಂಗದ ಅರಿವನ್ನು ಹೊಂದುವುದೇ ಮನುಷ್ಯ ಜನ್ಮದ ಗುರಿಯಾಗಬೇಕು.
ದೇವಾಲಯವನ್ನು ನಿರ್ಮಾಣ ಮಾಡುವಾಗಿನ ಭಕ್ತಿ ಅದನ್ನು ನಿರ್ಮಿಸಿದ ಮೇಲೂ ಇರಬೇಕು. ನಿತ್ಯವೂ ದೇವಾಲಯಕ್ಕೆ ಕಡ್ಡಾಯವಾಗಿ ಬರಬೇಕು. ಹತ್ತು ನಿಮಿಷಗಳವರೆಗೆ ಧ್ಯಾನ ಮಾಡಬೇಕು. ಅಂದಾಗ ನಮ್ಮ ಸಂಸ್ಕೃತಿ ಉಳಿಯುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.

ಇದನ್ನೂ ಓದಿ : ಶಿವಮೊಗ್ಗ: ವ್ಯಾಪಾರಿ ಶ್ರೀನಿವಾಸ ನಿಧನ

ಸಾನಿಧ್ಯ ವಹಿಸಿ ಮಾತನಾಡಿದ ಮೂಡಿ ಸಂಸ್ಥಾನ ಮಠದ ಸದಾಶಿವ ಮಹಾಸ್ವಾಮಿಗಳು, ದೇವಾಲಯಗಳು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುತ್ತವೆ. ಇಷ್ಟು ಉತ್ತಮ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದೀರಿ. ಇದರ ಸದ್ಭಳಕೆ ಆಗಬೇಕು ಎಂದರು.
ತಾಳಗುಪ್ಪದ ವಿದ್ವಾನ ಸಿದ್ಧವೀರ ಮಹಾಸ್ವಾಮಿಗಳು ಹಾಗೂ ಶಾಂತಪುರದ ಶಿವಾನಂದ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಇದನ್ನೂ ಓದಿ : ಜೇನು ಕೃಷಿ ತರಬೇತಿ, ನರೇಗಾ ಮಾಹಿತಿ ವಿನಿಮಯ ಕಾರ್ಯಗಾರ

ವೇದಮೂರ್ತಿ ಚರಂತಯ್ಯ ಶಾಸ್ತ್ರಿಗಳು ಹಾಗೂ ಸಂಗಡಿಗರಿಂದ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆದವು. ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಕರ್ಮಗಳಿಗಾಗಿ ಒಂದು ಸಮುದಾಯ ಭವನವನ್ನು ಭೂಮಿ ಪೂಜೆ ನಡೆಸಲಾಯಿತು. ದಾನಿಗಳನ್ನು ಸನ್ಮಾನಿಸಲಾಯಿತು. ತೊರವಂದ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಮಹಾಪ್ರಸಾದ ವಿತರಿಸಲಾಯಿತು.